![](https://jananudi.com/wp-content/uploads/2025/02/000000-JANANUDI-1.png)
![](https://jananudi.com/wp-content/uploads/2025/02/Screenshot__169_-removebg-preview.jpg)
ಬೈಂದೂರು; ರೈಲು ಹಳಿ ದಾಟುತ್ತಿರುವ ವೇಳೆ ರೈಲು ಡಿಕ್ಕಿಯಾಗಿ ಯುವಕನೊಬ್ಬ ಮ್ರತಪಟ್ಟ ಘಟನೆ ಕಿರಿಮಂಜೆಶ್ವರ ಗ್ರಾಮದ ನಾಗೂರು ಶೆಟ್ರಹಿತ್ಲು ಎಂಬಲ್ಲಿ ನಡೆದಿದೆ. ಮೃತನನ್ನು ಬಿಜೂರು ಗ್ರಾಮದ ದಿಟಿಮನೆ ನಿವಾಸಿ ಮುತ್ತಯ್ಯ ದೇವಾಡಿಗ ಪುತ್ರ ವಾಸುದೇವ ದೇವಾಡಿಗ (25) ಎಂದು ಗುರುತಿಸಲಾಗಿದೆ. ಘಟನೆ ಫೆಬ್ರವರಿ 05 ರಂದು ನಡೆದಿದೆ
ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ವಾಸುದೇವ ರೈಲ್ವೆ ಹಳಿಯ ಇನ್ನೊಂದು ಬದಿಯ ಗದ್ದೆಯಲ್ಲಿ ಕಲ್ಲಂಗಡಿ ಬೆಳೆಸಿದ್ದರು. ನಾಗೂರಿನಲ್ಲಿ ತನ್ನ ಸೆಂಟ್ರಿಂಗ್ ಕೆಲಸ ಮುಗಿಸಿ ಕಲ್ಲಂಗಡಿ ಹಣ್ಣುಗಳನ್ನು ಲೋಡ್ ಮಾಡುತ್ತಿದ್ದ ಕಾರ್ಮಿಕರ ಜೊತೆ ಮಾತನಾಡಿ ರೈಲ್ವೆ ಹಳಿಗಳನ್ನು ದಾಟುವ ವೇಳೆ ಮಂಗಳೂರು ಕಡೆಯಿಂದ ಮಡಗಾಂವ್ ಗೆ ತೆರಳುತ್ತಿದ ರೈಲು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.