![](https://jananudi.com/wp-content/uploads/2025/02/Screenshot-946-1.png)
![](https://jananudi.com/wp-content/uploads/2025/02/5-srinivaspur-photo-.jpg)
ಶ್ರೀನಿವಾಸಪುರ : ಬುಧವಾರ ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಮಾತನಾಡಿ ಸ್ಥಳೀಯರ ದೂರಿನ್ವಯ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ , ಈ ಸ್ಥಳವು ಕಂದಾಯ ಇಲಾಖೆ ಸಂಬಂದಪಟ್ಟಿದ್ದು, ಸ್ಥಳದ ಸಮಸ್ಯೆಯ ಬಗ್ಗೆ ತಹಶೀಲ್ದಾರ್ ರವರಿಗೆ ಮಾಹಿತಿ ನೀಡಲಾಗುವುದು.ಸಮಸ್ಯೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಪರಿಹಾರ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣದ ಈಚಲಕುಂಟೆ ಕೆರೆಯಂಗಳದಲ್ಲಿ ಕೃಷಿ ಇಲಾಖೆ ಪಕ್ಕದಲ್ಲಿ ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಕೆಲ ಪ್ರಭಾವಿಗಳು ಕಾರು ನಿಲ್ಲಿಸಿಕೊಳ್ಳಲು ಶೆಡ್ ನಿರ್ಮಿಸಿಕೊಂಡು ಓಡಾಡಲು ಕಷ್ಟರಕರವಾಗಿದೆ ಎಂದು ಸ್ಥಳೀಯ ಅಕ್ಕ , ಪಕ್ಕದ ನಿವಾಸಿಗಳಾದ ಅಪ್ಪಯ್ಯಶೆಟ್ಟಿ, ಚಂದ್ರಪ್ಪ, ಶ್ರೀನಾಥ್, ರಾಘವೇಂದ್ರ, ಚರಣ್, ಮದನ್, ಸರೋಜಮ್ಮ, ಬಾಬು ಆರೋಪಿಸಿದರು. ಸ್ಥಳದಲ್ಲಿ ಪರಿಸರ ಅಭಿಯಂತರ ಲಕ್ಷೀಶ ಇದ್ದರು.