ಶ್ರೀನಿವಾಸಪುರ :ವಕೀಲರ ಸಂಘದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ವಕೀಲ ರಮೇಶ್ಬಾಬು ಮಾತನಾಡಿ ತಾಲೂಕಿನಲ್ಲಿ ಒಟ್ಟು ೬೪ ಮತಗಳಿದ್ದು ಅದರಲ್ಲಿ ೬೩ ಮತಗಳು ಚಲಾವಣೆಯಾಗಿದೆ ಅಧ್ಯಕ್ಷ ಸ್ಥಾನಕ್ಕೆ ಎನ್.ವಿ.ಜಯರಾಮೇಗೌಡ ಪ್ರತಿ ಸ್ಪರ್ಧಿಯಾಗಿ ಟಿ. ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದರು. ಎನ್.ವಿ.ಜಯರಾಮೇಗೌಡ ೩೮ ಪ್ರತಿ ಸ್ಪರ್ಧಿ ಟಿ.ವೆಂಕಟೇಶ್ ೨೫ ಮತಗಳನ್ನು ಪಡೆದಿದ್ದು , ಎನ್.ವಿ.ಜಯರಾಮೇಗೌಡ ಜಯ ಶೀಲರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಆರ್.ಗೆಂಗಿರೆಡ್ಡಿ ೨೫ ಪ್ರತಿಸ್ಪರ್ಧಿ ಸಿ.ಸೌಭಾಗ್ಯ ೩೭ ಮತಗಳು ಪಡೆದಿದ್ದು, ಸಿ.ಸೌಭಾಗ್ಯ ಜಯಶೀಲರಾಗಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ವಿ.ಅರ್ಜುನ್ ೩೦ ಮತಗಳು, ಪ್ರತಿ ಸ್ಫರ್ಧಿ ಜೆ.ಎನ್.ಶಂಕರಪ್ಪನಾಯಕ ೩೩ ಮತಗಳು ಪಡೆದಿದ್ದು, ಜೆ.ಎನ್.ಶಂಕರಪ್ಪನಾಯಕ ಜಯಶೀಲರಾಗಿದ್ದಾರೆ. ಜಂಟಿ ಕಾರ್ಯದರ್ಶಿಗೆ ಜೂನ್ನಪಲ್ಲಿ ಬಿ.ವೆಂಕಟೇಶ್ ೪೦ , ಪ್ರತಿ ಸ್ಪರ್ಧಿ ಪಿ.ಮುರಳಿ ೨೨ ಮತಗಳು ಪಡೆದಿದ್ದು, ಜೂನ್ನಪಲ್ಲಿ ಬಿ.ವೆಂಕಟೇಶ್ ಜಯಶೀಲರಾಗಿದ್ದಾರೆ ಹಾಗೂ ಇರ್ಷಾತ್ ಫಾತೀಮ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿಲಾಗಿದೆ ಎಂದರು.
ನೂತನ ಅಧ್ಯಕ್ಷ ಎನ್.ವಿ.ಜಯಾರಾಮೇಗೌಡ ಮಾತನಾಡಿ ನನ್ನ ಸಹುದ್ಯೋಗಿ ಮಿತ್ರರರು ನನ್ನನ್ನು ಆರು ಬಾರಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿಸುತ್ತೇನೆ ಎನ್ನುತ್ತಾ, ನಾನು ಎಲ್ಲಾ ವಕೀಲರ ಯೋಗ ಕ್ಷೇಮ ಹಾಗು ಕುಂದುಕೊರೆತೆಗಳನ್ನು ಹಾಗು ಅವರ ಬಗ್ಗೆ ಯಾವುದೇ ಹಕ್ಕುಗಳು ಚ್ಯುತಿಯಾದ ಪಕ್ಷದಲ್ಲಿ ಅವರ ಪರವಾಗಿ ಹೋರಾಟ ಮಾಡುತ್ತೇನೆ ಎಂದರು.
ಕಾರ್ಯದರ್ಶಿ ಜೆ.ಎನ್.ಶಂಕರಪ್ಪನಾಯಕ, ಎನ್.ಶ್ರೀನಿವಾಸಗೌಡ, ರಾಧಕೃಷ್ಣ ಮಾತನಾಡಿದರು.
ವಕೀಲರಾದ ಎಸ್.ಕೆ.ವೆಂಕಟರವಣಪ್ಪ, ಎಸ್.ವಿ.ಮುನಿರಾಜು, ಎಂ.ಹರೀಶ್, ಎಂ.ಎಸ್.ವೆಂಕಟೇಶ್ಪ್ರಸಾದ್, ಎಂ.ಸಂದೀಪ್, ಎಂ.ಎಂ.ಜಾಫರ್, ಮುನಿಸ್ವಾಮಿ ನಾಯಕ್, ಜಿ.ವಿ.ವೆಂಕಟರಮಣಪ್ಪ, ಟಿ.ವಿ.ನಾರಾಯಣಸ್ವಾಮಿ , ಅಡ್ಡಗಲ್ ಇಂದುಧರ್ ಇದ್ದರು.