ಕುಂದಾಪುರ,ಫೆ.2; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಯೇಸು ಕ್ರಿಸ್ತರ 2025 ನೇ ಜಯಂತೋತ್ಸವ ಪ್ರಯುಕ್ತ ಧಾರ್ಮಿಕ ಸಹೋದರ ಸಹೋದರಿಯರ ಜಯಂತೋತ್ಸವ ಆಚರಣೆ ನಡೆಯಿತು. ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಪವಿತ್ರ ಬಲಿದಾನವನ್ನು ಧಾರ್ಮಿಕ ಸಹೋದರಿ ಮತ್ತು ಭಕ್ತಾಧಿಗಳ ಜೊತೆ ಅರ್ಪಿಸಿದರು. ಈ ಸಂದರ್ಭದಲ್ಲಿ ಅ।ವಂ।ಪೌಲ್ ರೇಗೊ ಧಾರ್ಮಿಕ ಸಹೋದರರಿಯರಿಗೆ ಪುಷ್ಪ ನೀಡಿ ಗೌರವಿಸಿ ಅವರು ನೀಡುವ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಭಗಿನಿ ಸುಪ್ರಿಯಾ ಮತ್ತು ಎಂಟು ಧರ್ಮಭಗಿನಿಯರು ಉಪಸ್ಥಿತರಿದ್ದರು.