ಕುಂದಾಪುರ; ಜ.24; ಕುಂದಾಪುರ; ರೋಜರಿ ಮಾತಾ ಚರ್ಚಿನಲ್ಲಿ ವಲಯ ಮಟ್ಟದ ಕ್ರೈಸ್ತ ಐಕ್ಯತ ಪ್ರಾರ್ಥನಾ ಕೂಟ ಜನವರಿ 23 ರಂದು ನಡೆಯಿತು.
ಈ ಪ್ರಾರ್ಥನ ಕೂಟದಲ್ಲಿ, ರೋಮನ್ ಕ್ಯಾಥೊಲಿಕ್, ಸಿ.ಎಸ್. ಐ. ಮಲಬಾರ್ ವಿಧಿ, ಹೀಗೆ ವಿವಿಧ ಪಂಗಡದ ಕ್ರೈಸ್ತರೆಲ್ಲರು ಸೇರಿ ಈ ಪ್ರಾರ್ಥನ ಕೂಟ ನೆಡೆಸಲಾಯಿತು ಇದರ ಮುಂದಾಳತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಹಿರಿಯ ಚರ್ಚ್ ಆದ ರೋಜರಿ ಮಾತಾ ಚರ್ಚಿನ, ಹಾಗೇ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ವಹಿಸಿದ್ದು ಬೈಬಲ್ ಪವಿತ್ರ ಗ್ರಂಥವನ್ನು ಮೆರವಣಿಗೆಯಲ್ಲಿ ತಂದು ಪೀಠದಲ್ಲಿಟ್ಟು ಆಶಿರ್ವದಿಸಿ, ದೀಪ ಬೆಳಗಿಸಿ ಪ್ರಾರ್ಥನ ಕೂಟಕ್ಕೆ ಚಾಲನೆ ನೀಡಿದರು.
ಪ್ರಾರ್ಥನ ಕೂಟದಲ್ಲಿ ಭಜನೆ, ಕೀರ್ತನೆ, ಭರ್ವಸೆಯ ಪ್ರಾರ್ಥನೆಗಳು, ಮಧ್ಯಸ್ತಿಕೆಯ ಪ್ರಾರ್ಥನೆಗಳು ಪವಿತ್ರ ಗ್ರಂಥದ ವಾಚನ, ಶುಭ ಸಂದೇಶದ ವಾಚನ,ಪ್ರವಚನ ಈ ಪ್ರಾರ್ಥನ ಕೂಟದ ಭಾಗಗಳಾಗಿದ್ದವು.
ಕುಂದಾಪುರ ಸಿ.ಎಸ್. ಐ. ಚರ್ಚಿನ ಪಾಸ್ಟರ್ ಆದ ವಂ।ಇಮಾನ್ಯುವೇಲ್ ಜಯಕರ್ ‘ನಾವು ಯೇಸುವಿನಲ್ಲಿ ನಿಸ್ಸಂದೇಹವಾಗಿ ವಿಶ್ವಾಸಿಸ ಬೇಕು, ಲಾಜರಸ್ ಮರಣ ಹೊಂದಿದಾಗ ಅವಳ ಸಹೋದರಿ ಸ್ವಾಮಿ ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರ ಸಾಯುತಿರಲಿಲ್ಲ ಎಂದು ಹೇಳಿದಾಗ, ನನ್ನ ಮೇಲೆ ಭರವಸೆ ಇಡಿ ಈಗಲೂ ಆತನು ಜೀವಂತವಾಗುತ್ತಾನೆ, ಎಂದು ಲಾಜರಸನನ್ನು ಜೀವಂತ ಗೊಳಿಸುತ್ತಾರೆ, ಮತ್ತೊಂದು ಕಡೆಯಲ್ಲಿ ಯೇಸು ಪುನರುಥ್ಹಾನನಾಗಿ ಶಿಸ್ಯರಲ್ಲಿ ಕಾಣಿಸಿಕೊಂಡಾಗ ತನ್ನ ಶಿಸ್ಯ ಥಾಮಸ್ ಅಲ್ಲಿ ಇರಲಿಲ್ಲಾ, ಅದಕ್ಕಾಗಿ ಥಾಮಸ್ ನಾನು ಯೇಸುವನ್ನು ಸ್ವತಹ ನನ್ನ ಕಣಿಂದ ಕಾಣದೆ ವಿಸ್ವಾವಿಸುದಿಲ್ಲ ಎಂದು ಹೇಳುತ್ತಾನೆ, ಒಂದು ವಾರದ ಬಳಿಕೆ ಯೇಸು ಪುನಹ ಕಾಣಿಸಿಕೊಂಡು, ತನ್ನ ಕೈ ಕಾಲುಗಳಲ್ಲಿ ಹೊಡೆದ ಮೊಳೆಗಳ ಮತ್ತು ತನಗೆ ಭರ್ಚಿಯಲ್ಲಿ ಚುಚ್ಚಿದ ಗಾಯಗಳನ್ನು ತೋರಿಸುತ್ತಾರೆ. ಆವಾಗ ಥಾಮಸ್ ಪಶ್ಚಾತಾಪ ಪಟ್ಟು ನನ್ನಸ್ವಾಮಿಯೆ, ನನ್ನ ದೇವರೆ ಎಂದು ದುಖಿಸುತ್ತಾನೆ, ಆವಾಗ ನೀನು ನಿನ್ನ ಸ್ವಂತ ಕಣ್ಣುಗಳಿಂದ ನೋಡಿದಕ್ಕೆ ವಿಸ್ವಾಸಿದೆ, ನನ್ನನ್ನು ಕಾಣದೆ ವಿಸ್ವಾಸಿಸುವರು ಅದೆಸ್ಟು ಭಾಗ್ಯವಂತರು, ಎಂದು ಹೇಳುತ್ತಾನೆ, ಇದರಿಂದ ನಮಗೆ ಸ್ಪಷ್ಟವಾಗಬೇಕು, ನಾವು ವಿಸ್ವಾಸದಲ್ಲಿ ಜೀವಿಸಬೇಕು, ವಿಸ್ವಾಸದಲ್ಲಿ ನಾವೆಲ್ಲ ಒಬ್ಬರನೊಬ್ಬರು ಪ್ರೀತಿಯಿಂದ ಜಿವಿಸೋಣ’ ಎಂದು ಸಂದೇಶ ನೀಡಿದರು.
ಈ ಪ್ರಾರ್ಥನ ಕೂಟದಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚುಗಳ ಎಲ್ಲಾ ಧರ್ಮಗುರುಗಳು, ಬೈಂದೂರು ಮಲ್ಬಾರ್ ವಿಧಿಯ ಧರ್ಮಗುರು ವಂ।ಮಾಥ್ಯು, ಕುಂದಾಪುರ ಕಾನ್ವೆಂಟಿನ ಧರ್ಮಭಗಿನಿಯರು,ಹಲವಾರು ಅತಿಥಿ ಧರ್ಮಭಗಿನಿಯರು, ಕುಂದಾಪುರ ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷ ಶಾಲೆಟ್ ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹಲವಾರು ಪಂಗಡದ ಕ್ರೈಸ್ತ ಭಕ್ತಾಧಿಗಳು, ಕುಂದಾಪುರ ಚರ್ಚಿನ ವಾಳೆಯ ಗುರಿಕಾರರು ಹಾಜರಿದ್ದರು.
ಕುಂದಾಪುರ ಚರ್ಚ್ ಗಾಯನ ಪಂಗಡ, ಸಿ.ಎಸ್. ಐ. ಗಾಯನ ಪಂಗಡ, ಮಲಬಾರ್ ವಿಧಿಯ ಗಾಯನ ಪಂಗಡ ಪ್ರಾರ್ಥನಕೂಟಕ್ಕೆ ಮೆರಗು ನೀಡಿದವು. ಹಂಗಳೂರು ಚರ್ಚಿನ ಧರ್ಮಗುರು ವಂ।ಆಲ್ಬರ್ಟ್ ಕ್ರಾಸ್ತಾ ನಿರೂಪಿಸಿದರು. ಅ।ವಂ।ಪೌಲ್ ರೇಗೊ ಪ್ರಸ್ತಾವಿಸಿ, ಸ್ವಾಗತಿಸಿ ವಂದಿಸಿದರು.