ಶ್ರೀನಿವಾಸಪುರ : ನನ್ನ ಕ್ಷೇತ್ರಕ್ಕೆ ಸಂಬಂದಿಸಿದ ಗ್ರಾಮಗಳಲ್ಲಿ ಬಡಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದ್ದು , ಅವರ ಅಭಿವೃದ್ದಿಯೇ ನನ್ನ ಗುರಿ . ಅವರಿಗೆ ಸರ್ಕಾರದ ಯೋಜನೆಗಳಿಂದ ಸಿಗುವ ಸವಲತ್ತುಗಳನ್ನು ಪಕ್ಷಾತೀತವಾಗಿ ಮನೆಯ ಬಾಗಿಲಿಗೆ ನೀಡುವ ವ್ಯವಸ್ಥೆ ಮಾಡಲು ಇಚ್ಚಿಸಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿಪ್ರಾಯಪಟ್ಟರು.
ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಂಗಳವಾರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಬಸ್ ನಿಲ್ದಾಣದ ಬಳಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು ಶ್ರೀನಿವಾಸಪುರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆರು ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲು ಯೋಜನೆಯನ್ನು ರೂಪಿಸಿದ್ದೇನೆ. ಆದರೆ ಕೆಲವರು ಈ ಕಾರ್ಯಕ್ಕೆ ತಮ್ಮ ಸ್ವಾರ್ಥಕ್ಕೆ ಅಡಿಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾ, ಕ್ಷೇತ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಾಸಕರ ಅನುದಾನಕ್ಕೆ ಸಂಬಂದಿಸಿದಂತೆ 3.50 ಕೋಟಿ ಅನುದಾನ ಬಂದಿದ್ದು, ಇದನ್ನ ಕೇವಲ ಧಾರ್ಮಿಕ ಸ್ಥಳಗಳ ದುರಸ್ಥಿಗಾಗಿ ಹಾಗೂ ಸರ್ಕಾರಿನಶಾಲೆಗಳ ದುರಸ್ಥಿಗಾಗಿ ಹಾಗು ಅತಿ ಜರುರಾದ ಕೆಲಸ ಕಾರ್ಯಗಳಿಗೆ ಅನುದಾನವನ್ನು ಬಳಿಸುತ್ತಿದ್ದು, ನಾನು ನನ್ನ ಪಕ್ಷದ ಮುಖಂಡರಿಗೆ ಯಾವುದೇ ರೀತಿಯಾದ ಕಾಮಗಾರಿಯನ್ನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಮುಂಖಡರಿಗೆ ಕಾಮಗಾರಿಯನ್ನು ನೀಡಲಾಗುತ್ತದೆ ಎಂದರು.
ಜೆಡಿಎಸ್ ಪಕ್ಷದ ಮುಖಂಡ ಸಿಎಂಆರ್. ಶ್ರೀನಾಥ್ ಮಾತನಾಡಿ ನಮಗೆ ಹಿರಿಯರು ಮಾರ್ಗದರ್ಶಕರು ಆದ ಶಾಸಕರು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕ್ಷೇತ್ರ ಅಭಿವೃದ್ಧಿಗಾಗಿ ಹಗಲಿರಲು ಪಕ್ಷಾತೀತವಾಗಿ ಶ್ರಮಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಯಾವುದೇ ವಿಧಾನ ಸಭಾ ಕ್ಷೇತ್ರಗಳು ಅಭಿವೃದ್ಧಿಯಾಗದೆ ಕುಂಠಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ ಜೆ.ತಿಮ್ಮಸಂದ್ರ ಗ್ರಾ.ಪಂ. ಅಧ್ಯಕ್ಷ ಶಂಕರರೆಡ್ಡಿ ಸರ್ಕಾರಿ ಶಾಲೆಗಳಿಗೆ ಸ್ವಂತ ಹಣದಿಂದ ಉಚಿತವಾಗಿ 8 ಶುದ್ಧಿ ನೀರಿನ ಘಟಕಗಳನ್ನು ನೀಡಿದರು. ಹಾಗು ಗ್ರಾ.ಪಂ ವತಿಯಿಂದ ವಿಶೇಷ ಅನುದಾನದಲ್ಲಿ 8 ವಿಕಲೇಚತನರಿಗೆ 50 ಸಾವಿರ ರೂ ಗಳ ಚೆಕ್ ನೀಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಮುಖಂಡರಾದ ಶಿವಪುರ ಗಣೇಶ್, ಸುರೇಶ್ಬಾಬು,ಸಿ.ವಿ.ಮುನೀಂದ್ರಯ್ಯ,ರಾಮಕೃಷ್ಣಾರೆಡ್ಡಿ, ಎ.ವೆಂಟರೆಡ್ಡಿ, ಶ್ರೀರಾಮರೆಡ್ಡಿ, ಸಿವಿಎರ್ ಚೌಡರೆಡ್ಡಿ, ಬೈರಾರೆಡ್ಡಿ, ಗೋಪಿನಾಥರೆಡ್ಡಿ, ಕಿರಣ್ರೆಡ್ಡಿ, ಪೂಲ್ಶಿವಾರೆಡ್ಡಿ, ಕಾರ್ಬಾಬು, ಜಿ.ಆರ್.ಶ್ರೀನಿವಾಸ್, ಸುದಾಕರರೆಡ್ಡಿ ಇದ್ದರು.