ಶ್ರೀನಿವಾಸಪುರ : ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗುಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೈದೇಹಿ ಆಸ್ಪತ್ರೆ ನಿರ್ದೇಶಕಿ ಚೈತನ್ಯ ಅದಿಕೇಶವುಲು ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ತಾಲೂಕು ಕೈವಾರ ಯೋಗಿನರಾಯಣ ಐಕೈತಾ ಟ್ರಸ್ಟ್ ಸಹಯೋಗದಲ್ಲಿ ವೈದೇಹಿ ಆಸ್ಪತ್ರೆ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿ ವಾಂತಿ-ಬೇದಿ , ಟೈಫಾಯಿಡ್ , ಕ್ಷಯ ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗು ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಕಾಯಿಲೆಗಳು ಆಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗು ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳು ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನ ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು.
ತಾಲೂಕು ಕೈವಾರ ಯೋಗಿನರಾಯಣ ಐಕೈತಾ ಟ್ರಸ್ಟ್ ಅಧ್ಯಕ್ಷ ಮುರಳಿ, ತಾಲೂಕು ಸಂಚಾಲಕ ಕಲಾ ಶಂಕರ್, ಸಮುದಾಯದ ಮುಖಂಡರಾದ ಕೋಲಾರ ಕೆ.ವಿ.ಸುರೇಶ್ಕುಮಾರ್, ಶ್ರೀನಿವಾಸಪುರ ಆರ್.ಎಂ.ಪಿ. ಡಾಕ್ಟರ್ .ಗೋವಿಂದಪ್ಪ, ಕೆ.ವಿ.ಸುರೇಂದ್ರ, ಹೂಮಂಡಿ ಪ್ರಸಾದ್, ಮಂಜುನಾಥ್, ಅನಿಲ್, ಹರಿ, ಬಾಲಾಜಿ, ಸಮುದಾಯದ ಪದಾಧಿಕಾರಿಗಳು, ಡಾ|| ಲೋಕೇಶ್, ಜನಸೇನಾ ಪಷದ ಮದನಪಲ್ಲಿ ಅಧ್ಯಕ್ಷ ಶ್ರೀರಾಮ ರಾಮಾಂಜನೇಯಲು, ಚಿತ್ತೂರು ಅಧ್ಯಕ್ಷ ನಾನು ಬಾಲು ಲೋಕೇಶ್ ,ಕೊರಿಗೇಪಲ್ಲಿ.ದೇವರಾಜ್, ಪಿ.ಎಸ್.ಚಂದ್ರ ಶೇಖರ್, ಭರಣಿ ತಂಡದ ಉಚಿತ ಆರೋಗ್ಯ ಶಿಬಿರದ ನೇತೃತ್ವವಹಿಸಿತ್ತು.