ಕುಂದಾಪುರ: ಇಲ್ಲಿನ ಪ್ರತಿಷ್ಠಿತ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 17 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.
ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಜೋನ್ಸನ್ ಡಿ’ಆಲ್ಮೇಡಾ ಅವರ ನೇತೃತ್ವದಲ್ಲಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ , ಹಿಂದಿನ ಆಡಳಿತ ಮಂಡಳಿ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ನಾಡ ಪಡುಕೋಣೆ, ನಿವೃತ್ತ ಡಿವೈಎಸ್ಪಿ ವಲೈಂಟೆನ್ ಡಿ’ಸೋಜ ಉಡುಪಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ ಕುಂದಾಪುರ, ಮೈಕಲ್ ಪಿಂಟೊ ಪಿಯುಸ್ನಗರ ಕೋಟೇಶ್ವರ, ಫಿಲಿಪ್ ಡಿ’ ಕೋಸ್ಟಾ ಕೋಣಿ, ಬೈಂದೂರು ಯಡ್ತರೆಯ ಶಾಂತಿ ಡಾಯಸ್, ಶಾಂತಿ ಆರ್. ಕರ್ವಾಲ್ಲೊ ಕುಂದಾಪುರ, ಬ್ಯಾಪ್ತಿಸ್ಟ್ ಡಾಯಸ್ ಕಲ್ಯಾಣ್ಪುರ, ಸಂತೋಷ್ ಓಜ್ವಾಲ್ಡ್ ಡಿ’ ಸಿಲ್ವಾ ನಿಟ್ಟೆ ಕಾರ್ಕಳ, ಲಿಪ್ಪನ್ ಒಲಿವೇರಾ ಗಂಗೊಳ್ಳಿ -ತ್ರಾಸಿ , ಡೈನಾ ಡಿ’ ಆಲ್ಮೇಡಾ ಕುಂದಾಪುರ, ಟೆರೆನ್ಸ್ ಸುವಾರಿಸ್,ಉಡುಪಿ, ಓಜ್ಜಿನ್ ಫ್ರಾನ್ಸಿಸ್ ರೆಬೆಲ್ಲೊ ಉಪ್ಪಿನಕುದ್ರು ತಲ್ಲೂರು, ವಿಲ್ಸನ್ ಡಿ’ ಸೋಜ ಶಿರ್ವ, ಡೇರಿಕ್ ಡಿ’ಸೋಜ ಪಾಂಡೇಶ್ವರ ಸಾಸ್ತಾನ ಹಾಗೂ ರೋವನ್ ಡಿ’ಕೋಸ್ಟಾ ಕೋಣಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಸಹಕಾರಿ ಇಲಾಖೆಯ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಸಿ.ಎಂ ಅವರು ಸಹಕಾರಿ ನಿಯಮ 14 ಜಿ (2) ರಡಿಯಲ್ಲಿ ಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.