

18.01.2025ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ದಿ| ನಾ.
ಡಿಸೋಜರವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ
ಆಲ್ವಾರಿಸ್ರವರು ಪ್ರಾಸ್ತಾವಿಕವಾಗಿ ನಾ ಡಿಸೋಜರವರ ಪ್ರಕೃತಿ ಜೊತೆ ಸಂಬಂಧ, ಮತ್ತು ಬಡವ, ದೀನರನ್ನು
ಹಿಂಸಿಸಿದ ಚಿತ್ರವನ್ನು ಅವರ ಕೃತಿಗಳಲ್ಲಿ ವರ್ಣಿಸಿದ ಬಗ್ಗೆ, ಮಕ್ಕಳ ಸಾಹಿತ್ಯದಲ್ಲಿ ಅವರ ಆಸಕ್ತಿಗಳ ಬಗ್ಗೆ
ಮಾತಾನಾಡಿದರು. ಈ ಸಂಧರ್ಭದಲ್ಲಿ ದೈವಾಧೀನರಾದ ಕೊಂಕಣಿ ಸಾಹಿತಿಗಳಾದ ಶ್ರೀ ಲುವಿಸ್ ಡಿ. ಅಲ್ಮೆಡಾ ಮತ್ತು
ಶ್ರೀ ಎಮ್. ಪಿ. ರೊಡ್ರಿಗಸ್ರವರಿಗೂ ಶ್ರದ್ದಾಂಜಲಿ ಸಮರ್ಪಿಸಿದರು. ಸಭೆಯಲ್ಲಿ ಹಾಜರಿದ್ದ ಸರ್ವರೂ
ಗೌರವಪೂರ್ವಕವಾಗಿ ನಾ. ಡಿಸೋಜರವರಿಗೆ ಹೂಗಳನ್ನು ಅರ್ಪಿಸಿ ಶೃದ್ದಾಂಜಲಿ ನೀಡಿದರು. ದಿ| ನಾ. ಡಿಸೋಜರವರ
ಜೀವನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಗಳ ಬಗ್ಗೆ ಕವಿ, ಸಾಹಿತಿಗಳಾದ ಶ್ರೀ ವಿಕ್ಟರ್
ಮಥಾಯಸ್(ವಿತೊರಿ ಕಾರ್ಕಳ)ರವರು ಶ್ರದ್ಧಾಂಜಲಿ ಭಾಷಣವನ್ನು ಮಾಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ
ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ., ಅಕಾಡೆಮಿ ಸದಸ್ಯರು, ಕೊಂಕಣಿ ಸಾಹಿತಿಗಳು, ಕೊಂಕಣಿ ಕವಿಗಳು,
ಕೊಂಕಣಿ ಭಾಷಾ- ಭಾಂದವರು, ನಾ. ಡಿಸೋಜರವರ ಅಭಿಮಾನಿಗಳು, ಶ್ರದ್ದಾಂಜಲಿ ಸಭೆಯಲ್ಲಿ ಹಾಜರಿದ್ದರು.

