ಕುಂದಾಪುರ, ಜ.೧೫ : ರಿಂಗ್ ರೋಡ್ ನ ವಿಸ್ತರಣಾ ಕಾಮಗಾರಿಯಲ್ಲಿ ಕಲ್ಲುಗಳನ್ನು ಸುರಿಯುತ್ತಿದ್ದ ವೇಳೆ ಚಾಲಕನ ಹತೋಟಿ ತಪ್ಪಿದ ಟಿಪ್ಪರೊಂದು ನದಿಗೆ ಉರುಳಿದ ಘಟನೆ ಖಾರ್ವಿ ಕೇರಿಯ ಪಂಚಗಂಗಾವಳಿ ನದಿ ಯಲ್ಲಿ ಜರಗಿದೆ. ಅದ್ರಷ್ಟ ವಶಾತ್ ಯಾವುದೇ ಅನಾಹುತ ಸಂಭವಿಸದೆ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಖಾಸಗಿ ಕನ್ ಸ್ಟ್ರಾ ಕ್ಷನ್ ಗೆ ಸೇರಿದ ಕಂಪೆನಿಯೊಂದು ಇಲ್ಲಿ ಕಾಮಗಾರಿ ನಡೆಸುತಲಿದ್ದು ರಿಂಗ್ ರೋಡ್ ವಿಸ್ತರಣಾ ಕೆಲಸ ಭರದಿಂದ ನಡೆಯುತ್ತಿದೆ. ಜೆಸಿಬಿ ಬಳಸಿ ಸತತ ಯತ್ನದ ಮೂಲಖ ಟಿಪ್ಪರನ್ನು ಮೇಲಕ್ಕೆ ಎತ್ತಲಾಗಿದೆ.