ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾಸ್ ಪಿ ಯು ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿ ಯು ಹೋಮ್ ಸೈನ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಳ್ಳಲಾಯಿತು ತಾಳಿಪಾಡಿ ನೇಕಾರರ ಸಹಕಾರಿ ಸಂಘ ಕಿನ್ನಿಗೋಳಿ, ಮೂಲ್ಕಿ, ದಕ್ಷಿಣಕನ್ನಡ ಜಿಲ್ಲೆ.ಇಲ್ಲಿಗೆ ಭೇಟಿ ನೀಡಿ ಕೈಮಗ್ಗದ ಸೀರೆ ತಯಾರಿ, ವಿವಿಧ ಪರಿಸರ ಸ್ನೇಹಿ ಬಣ್ಣಗಳ ಬಳಕೆ, ಓಝೋಪ್ರೀ ಬಣ್ಣದ ಬಳಕೆ, ನವೀನ ವಿನ್ಯಾಸ, ಲಾಳಿ, ಪನ್ನೆ, ಕಾಲುಮಣೆ, ಅಚ್ಚು, ಕೈಮಗ್ಗದಲ್ಲಿ ಸಾಮಾನ್ಯವಾಗಿ ತಯಾರುಮಾಡುವ ವಿವಿಧ ಬಟ್ಟೆಗಳ ಮಾಹಿತಿ, ಅಚ್ಚಿನ ಕುಣಿಕೆಗಳ ಮೂಲಕ ಹಾಸುನೂಲುಗಳ ಹಾದು ಹೋಗುವಿಕೆ, ಎಳೆಗಳ ಸಮೂಹ ಮತ್ತು ನೇಕಾರರ ಇತಿಹಾಸ ಮತ್ತು ಕೈಮಗ್ಗದ ಉತ್ಪಾದನೆ ಪ್ರಾಯೋಗಿಕವಾಗಿ ನೋಡಿ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಂಡರು.
ಶ್ರೀ ಮಾಧವ ಶೆಟ್ಟಿಗಾರ್ ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು ಉಪನ್ಯಾಸಕಿ ವಿನಂತಿ ಉಪಸ್ಥಿತರಿದ್ದರು.