ಕುಂದಾಪುರ, ಜ.12: 334 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕ ಧರ್ಮಗುರುರುಗಳಾದ ಸಂತ ಜೋಸೆಫ್ ವಾಜರಿಗೆ ಮುಖ್ಯಗುರುಗಳಾಗಿ ಭಡ್ತಿ ನೀಡಿ ಕಳುಹಿಸಿದ್ದು ವಲಯ ಪ್ರಧಾನ ಇಗರ್ಜಿಯಾದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಗೆ. ಅವರ ಜೊತೆಯಲ್ಲಿ ಇನ್ನೂ ಮೂರು ಧರ್ಮಗುರುಗಳು ಬಂದಿದ್ದು, ಅವರ ಸಹಕಾರದೊಂದಿಗೆ, ಪ್ರಧಾನ ಧರ್ಮಗುರುಗಳಾಗಿ ಕೆನರಾದಾಂತ್ಯ ಸುತ್ತುತ್ತಾ ಯೇಸು ಕ್ರಿಸ್ತರ ಬೋಧನೆ ಮಾಡಿದವರು, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿದಂತಹ ಪವಾಡಮಯ ಘಟನೆ ನಡೆದಿದ್ದು, ಇದನ್ನು ಅತಿಥಿ ಧರ್ಮಗುರುಗಳೊಬ್ಬರು ಕಣ್ಣಾರೆ ಕಂಡಿದ್ದರು. ಇದರ ನಂತರ ಅವರು ಶ್ರೀಲಂಕಕ್ಕೆ ತೆರಳಿ ಹಲವು ಅದ್ಬುತಗಳನ್ನು ಮಾಡಿ ಕಥೋಲಿಕರಲ್ಲಿ ಅತ್ಯುನ್ನತ್ತ ಸಂತ ಪದವಿ ಪಡೆದರು. ಅವರ ವಾರ್ಷಿಕ ಹಬ್ಬವು ಜನವರಿ 12 ರಂದು ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಆಚರಿಸಲಾಯಿತು.
ಸಂತ ಜೋಸೆಫ್ ವಾಜರ ವಾರ್ಷಿಕ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿದ ವಲಯ ಪ್ರಧಾನ ಧರ್ಮಗುರು, ಕುಂದಾಪುರ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ “ನಮ್ಮ ಇಗರ್ಜಿಯಲ್ಲಿ ಸೇವೆ ಮಾಡಿದ ಸಂತ ಜೋಸೆಪ್ ವಾಜರು ಯೇಸು ಕ್ರಿಸ್ತರ ಕರೆಯಂತೆ ಯಾಜಕರಾಗಿ ಅವರ ಸಂದೇಶವನ್ನು ನಮ್ಮ ಕೆನರಾದಲ್ಲಿ, ಆಮೇಲೆ ಶ್ರೀಲಂಕಾದಲ್ಲಿ ಶುಭವಾರ್ತೆಯನ್ನು ಹಂಚಿದರು, ಯೇಸು ಕ್ರಿಸ್ತರು ಮೊದಲು ಯಾಜಕರು, ನಂತರ ರಾಜರು, ರಾಜರು ಅಂದರೆ ಜನರ ಸೇವಕರು, ಜನರ ಸೇವೆ ಮಾಡಲೆಂದೇ ಅವರು ಬಂದಿದ್ದು. ಇಂದು ಯೇಸು ಸ್ವಾಮಿ ಪವಿತ್ರ ಸ್ನಾನ ದೀಕ್ಷೆಯನ್ನು ಪಡೆದುಕೊಂಡ ಹಬ್ಬವನ್ನು ಕೂಡ ನಾವು ಆಚರಿಸುತ್ತೇವೆ, ಯಾವಾಗ ನಾವು ಪವಿತ್ರ ಸ್ನಾನವನ್ನು ಸ್ವೀಕರಿಸುತ್ತೇವೊ, ಅವಾಗ ನಮಗೆ ಹೊಸ ಜೀವನ ಸಿಗುತ್ತದೆ. ಪವಿತ್ರ ಸ್ನಾನ ಸಿಕ್ಕಿದ ನಾವು ಕೂಡ ಕ್ರಿಸ್ತರಾಗುತ್ತೇವೆ, ಅಂದರೆ ನಮಗೂ ಸೇವೆ ಮಾಡಲಿಕ್ಕೆ ಇದೆ, ಶುಭವಾರ್ತೆಯನ್ನು ಹಂಚಿಕೊಳ್ಳಬೇಕಿದೆ, ಇದನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಪಾಲಿಸಿದವರು ನಮ್ಮ ಸಂತ ಜೋಸೆಫ್ ವಾಜ್, ನಮಗೆ ಅವರು ಪ್ರೇರಕರು, ಅವರ ಪ್ರೇರಣೆಯಂತೆ ನಾವು ನೆಡೆಯೋಣ” ಎಂದು ಸಂದೇಶ ನೀಡಿಈ ವಾರ್ಷಿಕ ಹಬ್ಬದ ಪ್ರಯುಕ್ತ ಹಬ್ಬದ ಶುಭಾಶಯಗಳನ್ನು ನೀಡಿ, ಧನ್ಯವಾದಗಳನ್ನು ಅರ್ಪಿಸಿದರು. ಈ ವಾರ್ಷಿಕ ಹಬ್ಬದಲ್ಲಿ, ಪಾಲನ ಮಂಡಳಿ ಅಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹಲವಾರು ಧರ್ಮಭಗಿನಿಯರು, ಗುರಿಕಾರರು, ಸಂಘ ಸಂಸ್ಥೆಯವರು, ಹಾಗೂ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.