ಕುಂದಾಪುರ (ಜ.6): ಶ್ರೀ ಬಿ.ಎಂ.ಸುಕುಮಾರ್ ಶೆಟ್ಟಿಯವರ ನೇತ್ರತ್ವದ ಕುಂದಾಪುರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿ.ಕೆ.ಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆಗಳಲ್ಲಿ ಜ:03 ಶುಕ್ರವಾರದಂದು ಶಾಲೆಯ 49ನೇ ವಾರ್ಷಿಕೋತ್ಸವ “ ರುಗ್ಮಯಾನ 2025 “ ಸುವರ್ಣ ರಥದತ್ತ ಸಂಭ್ರಮದ ಪಥ ವೇದಿಕೆಯಲ್ಲಿ 2ನೇ ದಿನದ ಮಧ್ಯಾಹ್ನದ ಅವಧಿಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೋಟೆಶ್ವರದ ಕ್ಲೀರಿಟಿ ಐ ಕ್ಲಿನಿಕ್ನ ಪ್ರಸಿಧ್ದ ನೇತ್ರ ಶಸ್ತ್ರ ಚಿಕಿತ್ಸಕಿ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿನಿಯಾಗಿರುವ ಡಾ. ಶುಭಾ ಬಿ ರವರು ಹೀಗೆಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಶುಭಾ- ಅಂದು ನಾನು ವಿ.ಕೆ.ಆರ್ ಶಾಲೆಯಲ್ಲಿ ಓದುವಾಗ ಅಲ್ಲಿ ಕಲಿತ, ಶಿಸ್ತು, ಡ್ರಾಯಿಂಗ್ ಕೌಶಲ್ಯ, ಮತ್ತು ಗೈಡ್ಸ್ ತರಬೇತಿಗಳು ನನ್ನ ಮುಂದಿನ ಬದುಕಿನ ತಯಾರಿಗೆ ನಾಂದಿಯಾದವು ಎಂದರು. ಹಾಗೂ ವಿದ್ಯಾರ್ಥಿಗಳಿಗೆ ಕಣ್ಣಿನ ಆರೋಗ್ಯದ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ಬಿ.ಎಂ ಸುಕುಮಾರ್ ಶೆಟ್ಟಿಯವರು ಮಾತನಾಡಿ, ನನ್ನ ಮೊದಲ ಆದ್ಯತೆ ದೇವಾಲಯವಾದರೆ, ಎರಡನೇ ಆದ್ಯತೆ ಶಾಲೆಯಾಗಿದೆ. ಸಮಾಜದ ಪ್ರತಿಯೊಂದು ಬಡ ಕುಟುಂಬದ ಮಗು ವಿದ್ಯಾವಂತನಾದರೆ ಮಾತ್ರ ಉತ್ಕ್ರಷ್ಟ ಸಮಾಜ ನಿರ್ಮಾಣ ಸಾಧ್ಯ. ಇಂದಿನ ಮಕ್ಕಳಿಗೆ ದೊರೆಯಬೇಕಾದ ಎಲ್ಲಾ ರೀತಿಯ ಒಳ್ಳೆಯ ಶಿಕ್ಷಣ ಕೊಡುವಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಸುವರ್ಣ ಸಂಭ್ರಮಾಚರಣೆ ಆಗುತ್ತಿರುವ ಕುಂದಾಪುರ ವಲಯದ ಏಕೈಕ ಆಂಗ್ಲ ಮಾಧ್ಯಮ ಶಾಲೆ ಆಗಿರುವುದು ಸಂಸ್ಥೆಗೆ ಸಲ್ಲುವ ಗೆಲುವಿನ ಮುಕುಟ ಎಂದರು. ಸ್ಟೇಟ್ ಲೆವೆಲ್ ಹಾರ್ಡ್ ಬಾಲ್ ಕ್ರಿಕೆಟ್ ವಿನ್ನರ್ ಆಗಿರುವ ಹತ್ತನೇ ತರಗತಿಯ ವಿದ್ಯಾರ್ಥಿ ಆದಿತ್ಯ ಅಜಯ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಕೆ ಸೀತಾರಾಮ ನಕ್ಕತ್ತಾಯ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಮತ್ತು ಪ್ರಾಥಮಿಕ ವಿಭಾಗದ ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿಗಳಾದ ಭಕ್ತಿ ಮತ್ತು ಸನ್ವಿತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾಕಾರ್ಯಕ್ರಮದ ನಂತರ ವಿ.ಕೆ.ಆರ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆದವು. ತದನಂತರ ನಡೆದ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ರುಗ್ಮಯಾನ ಸಂಪನ್ನಗೊಂಡಿತು.