ಶ್ರೀನಿವಾಸಪುರ : ದೈಹಿಕ ಮತ್ತು ಮಾನಸಿಕ ಅಸಾಮಥ್ರ್ಯಗಳನ್ನು ತಡೆಗಟ್ಟುವುದು ಮತ್ತು ಅಂಗವಿಕಲರಿಗೆ ತಮ್ಮ ಸಾಮಥ್ರ್ಯಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲು ಸಹಾಯ ಮಾಡುವ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮತ್ತು ಸಾಮಾನ್ಯ ಜೀವನದಲ್ಲಿ ಸಾಧ್ಯವಾದಷ್ಟು ಅವರ ಪರಿಪೂರ್ಣ ಜೀವನವನ್ನು ಕಟ್ಟಿ ಕೊಳ್ಳಬೇಕು, ಇಲ್ಲಿ ಯಾರೂ ಪರಿಪೂರ್ಣರಲ್ಲಾ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಹೇಳಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಮಂಗಳವಾರ ವಿಕಲಚೇತನರ ಸಮನ್ವಯ ವಿಶೇಷ ಸಭೆ, ವಿಶ್ವ ವಿಕಲಚೇತನರ ದಿನಾಚರಣೆ, ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಗಾಟಿಸಿ ಮಾತನಾಡಿದರು.
ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ಮಾತನಾಡಿ ಹುಟ್ಟಿನಿಂದಲೇ ಅಂಗವೈಕಲ್ಯ ಹೊಂದಿದ ವ್ಯಕ್ತಿಗಳಲ್ಲಿ ಅಗೋಚರವಾದ ಶಕ್ತಿ ಇದ್ದು, ಅದರಿಂದಾಗಿ ಪರರ ಸಹಾಯವಿಲ್ಲದೆ ತಮ್ಮ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಂಡು ಸ್ವಾಭಿಮಾನಿಗಳಾಗಿದ್ದಾರೆ ಎಂದು ಹೇಳಿದರು. ಕೆಲವೊಂದು ಕಾರಣಗಳಿಂದ ಅಂಗವೈಕಲ್ಯದಿಂದ ಹುಟ್ಟಿದರೂ ಸಹ ದೇವರು ಅವರಿಗೆ ವಿಶೇಷ ಶಕ್ತಿಯನ್ನು ಕೊಟ್ಟಿರುತ್ತಾನೆ ಎಂದರು.
ಪುರಸಭೆ ಉಪಾಧ್ಯಕ್ಷೆ ಸುನಿತಾ ಮಾತನಾಡಿ ಸರ್ಕಾರಿ ಸಿಗುವ ಎಲ್ಲಾ ಸೌಲಭ್ಯಗಳ ಅನುದಾನವನ್ನು ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಸದ್ಭಳಕೆ ಮಾಡೋಣ ಎಂದರು. ಪುರಸಭೆ ಸದಸ್ಯ ಬಿ.ವಿ.ವೆಂಕಟರಡ್ಡಿ, ಸಿಡಿಪಿಒ ಜ್ಯೋತಿಲಕ್ಷ್ಮಿ, ಪುರಸಭೆ ವ್ಯವಸ್ಥಾಪಕ ನವೀನ್ಚಂದ್ರ, ವಿಕಲಚೇತನರ ತಾಲೂಕು ಸಂಯೋಜಕ ಶ್ರೀನಿವಾಸಗೌಡ, ಬಿಐಇಆರ್ಟಿ ಅಧಿಕಾರಿ ಜಿ.ವಿ.ಚಂದ್ರಪ್ಪ, ಸಿಬ್ಬಂದಿಗಳಾದ ವೆಂಕಟೇಶ್, ನಾಗೇಶ್ ಇತರರು ಇದ್ದರು.