ಸಂತ ಪಿಯುಸ್ 10 ಇವರಿಗೆ ಸಮರ್ಪಿಸಲ್ಪಟ್ಟ ಪಿಯುಸ್ ನಗರ ಚರ್ಚಿನ ವಾರ್ಷಿಕ ಮಹಾ ಹಬ್ಬವು ಜನವರಿ 8 ರಂದು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ಇವರ ಪ್ರಧಾನ ಯಾಜಕತ್ವದಲ್ಲಿ ಭಕ್ತಿಪೂರ್ವಕ ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು. “ಪ್ರಭು ಯೇಸು ಸ್ವಾಮಿಯೊಂದಿಗೆ ಸಾಗೋಣ, ಭರವಸೆಯ ಯಾತ್ರಿಕರಾಗೋಣ” ಎಂಬ ಧ್ಯೇಯ ವಾಕ್ಯದೊಂದಿಗೆ ಅವರು ಪ್ರಸಂಗ ನೀಡಿದರು. ವಲಯದ ಹಲವಾರು ಧರ್ಮಗುರುಗಳು ಬಲಿದಾನದಲ್ಲಿ ಭಾಗಿಯಾದರು. ಸ್ಥಳೀಯ ಚರ್ಚಿನ ಧರ್ಮಗುರು ವಂ।ಆಲ್ಬರ್ಟ್ ಕ್ರಾಸ್ತಾ ಮೂರು ದಿನಗಳ ವಾರ್ಷಿಕ ಹಬ್ಬದ, ಧಾರ್ಮಿಕ ಕಾರ್ಯಗಳು ಸುಸುತ್ರವಾಗಿ ನಡೆಯಲು ಸಹಕರಿಸಿದ ಎಲ್ಲ ಪ್ರಾಯೋಜಕರಿಗೆ, ಪಾಲನ ಮಂಡಳಿ ಉಪಾಧ್ಯಕ್ಷ ಶ್ರೀ ಜೆಮ್ಸ್ ಡಿಮೆಲ್ಲೊ,ಕಾರ್ಯದರ್ಶಿ ಶ್ರೀಮತಿ ರೆಶ್ಮಾ ಡಿಸೋಜಾ, ೨೦ ಆಯೋಗಗಳ ಸಂಯೋಜಕಿ ಶ್ರೀಮತಿ ಲೀನಾ ತಾವ್ರೊ, ಗುರಿಕಾರರಿಗೆ, ಪಾಲನ ಮಂಡಳಿ ಸದಸ್ಯರಿಗೆ, ಸಂಘ ಸಂಸ್ಥೆಯ ಸದಸ್ಯರಿಗೆ ಧರ್ಮಭಗಿನಿಯರಿಗೆ ಧರ್ಮಕೇಂದ್ರದ ಎಲ್ಲಾ ಭಕ್ತಾಧಿಗಳಿಗೆ ಸ್ಮರಿಸಿ ಧನ್ಯತಾ ಭಾವದಿಂದ ಧನ್ಯವಾದ ಸಮರ್ಪಿಸಿದರು.
ಸಂಜೆ ಐ.ಸಿ.ವೈ.ಎಮ್ ಸಂಘಟನೇಯ 55 ನೇ ವಾರ್ಷಿಕೋತ್ಸವದ ಪ್ರಯುಕ್ತ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸ್ಕ್ರತ ಶ್ರೀ ಈಶ್ವರ್ ಮಲ್ಪೆ ಇವರನ್ನು ಸನ್ಮಾನಿಸಲಾಯಿತು. ಎಲ್ಲರ ಆಶಿರ್ವಾದದ ಫಲವಾಗಿ ಈ ಸೇವೆ ನೀಡಲು ಸಾಧ್ಯವಾಗಿದೆ’ ಎಂದು ಸನ್ಮಾನಕ್ಕೆ ಉತ್ತರ ವಾಗಿ ಅವರು ತಿಳಿಸಿದರು.
ಧರ್ಮಗುರು ವಂ.ಆಲ್ಬರ್ಟ್ ಕ್ರಾಸ್ತಾ ಐ.ಸಿ.ವೈ.ಎಮ್ ಸಂಘಟನೇಯ ಸೇವೆಯ ಬಗ್ಗೆ ಮತ್ತು ಶ್ರೀ ಈಶ್ವರ್ ಮಲ್ಪೆಯವರ ಸೇವೆಯನ್ನು ಶ್ಲಾಘಿಸಿದರು.
ಚರ್ಚಿನ ಮಕ್ಕಳಿಂದ ನ್ರತ್ಯ ಪ್ರದರ್ಶನ ಮತ್ತು ತೆಕ್ಕಟ್ಟೆಯ ಓಂಕಾರ ತಂಡದ ಕಲಾವಿದರಿಂದ “ಆಪುದೆಲ್ಲಒಳೆದ್ದಕ್ಕೆ” ಹಾಸ್ಯಮಯ ನಾಟಕವನ್ನು ಪ್ರದರ್ಶಿಸಲಾಯಿತು.