ನಾನು ಪ್ರಸಿದ್ಧಿ, ಹೆಣ್ಣು ಮಕ್ಕಳಿಗೆ ತಂದೆ ಎಂದರೆ ಬಹಳ ಮುದ್ದು ಬಡ ರಾಜನ ಶ್ರೀಮಂತ ರಾಜಕುಮಾರಿ ನಾನು ಅಪ್ಪನ ಪ್ರೀತಿಯ ಸ್ಫೂರ್ತಿ,ಧೈರ್ಯ ತುಂಬುವ ಮಾತುಗಳಿದ್ದರೆ ಸಾಕು ಆಕಾಶವನ್ನೇ ಮುಟ್ಟುವಂತ ಧೈರ್ಯದ ನನ್ನ ಅಪ್ಪನ ಮಗಳು ನಾನು. ಅಪ್ಪನ ಅಕ್ಕರೆಯ ಒಂದು ನುಡಿ ಸಾಕು ಎಲ್ಲ ಹೆಣ್ಣು ಮಕ್ಕಳಿಗೂ ಸಾಧನೆಯ ದಾರಿಯಲ್ಲಿ ನಡೆದು ಹೋಗಲು ಆಸೆಗಳು ಅದುಮಿಟ್ಟುಕೊಂಡು ಯಾವುದೇ ನಿರೀಕ್ಷೆಯಿಲ್ಲದೆ ನಮ್ಮ ಕನಸು ನನಸು ಮಾಡುವ ಒಂದು ತ್ಯಾಗದ ಮೂರ್ತಿ ಅಪ್ಪ, ಅಂತಹ ತ್ಯಾಗದ ಮೂರ್ತಿಯ ಅಪ್ಪನ ಅಕ್ಕರೆಯ ಮಗಳು ನಾನು
ಎಲ್ಲಾ ನನ್ನಂತ ಹೆಣ್ಣು ಮಕ್ಕಳಿಗೂ ತಂದೆ ಎಂದರೆ ಬಹಳ ಮುದ್ದು ನಾನು ಸಹ ನನ್ನ ತಂದೆಯ ಮುದ್ದಿನ ಮಗಳು ಅಮ್ಮ ಹೆತ್ತವಳಾದರೂ ನಮ್ಮೆಲ್ಲ ಕನಸುಗಳನ್ನು ಹುಟ್ಟು ಹಾಕಿ ನಮ್ಮ ಕನಸಿನ ಕಾಮನಬಿಲ್ಲೆಗೆ ಬಣ್ಣ ಹಚ್ಚುವುದು ಮಾತ್ರ ಅಪ್ಪ
ಅಮ್ಮ ಮತ್ತು ಅಪ್ಪನ ಕಥೆ ಕವನ ಲೇಖನ ಪ್ರಬಂಧ ಓದಿದಾಗಲೂ ಅಮ್ಮ ಪ್ರಥಮ ಸ್ಥಾನಿ ಯಂತೆ ಕಂಡರೂ ನನಗೆ ಅಪ್ಪನೇ ಮೇಲು ಎನ್ನುವಂತೆ ನನ್ನ ಒಳ ಮನಸು ಹೇಳುತ್ತಿತ್ತು
ಎಲ್ಲಾ ಮುದ್ದಿನ ಅಪ್ಪನ ಅಕ್ಕರೆಯ ಹೆಣ್ಣು ಮಕ್ಕಳಿಗೂ ಹೀಗೆ ಇರಬಹುದೇನೋ ಅಪ್ಪ ಮನಸ್ಸು ಮಾಡಿದರೆ ಮಗಳ ಮಗನ ಜೀವನವನ್ನೇ ಬದಲಾಯಿಸಬಹುದು ಅಮ್ಮ ತಿದ್ದಬಹುದು ಮಾತ್ರ ಅಮ್ಮ ಜ್ಞಾನವಾದರೆ ಅಪ್ಪ ಅರಿವು
ಜೀವನದಲ್ಲಿ ತಂದೆಯ ಕೈಹಿಡಿರಿ ಜಗತ್ತಿನಲ್ಲಿ ಬೇರೆ ಯಾವ ವ್ಯಕ್ತಿಯ ಕಾಲು ಹಿಡಿಯುವ ಅವಶ್ಯಕತೆ ಬರುವುದಿಲ್ಲ, ಅಪ್ಪ ಎಂದರೆ ಬೆಳಕು ಅಪ್ಪನಿಂದಲೇ ಬದುಕು ಡಾ ಗಿರೀಶ್ ಕಾರ್ನಾಡ್ರು ಹೇಳಿದ ಮಾತು ಎಲ್ಲೂ ಓದಿದ ನೆನಪು
ತಂದೆ ತಾಯಿಯನ್ನು ಸ್ವರ್ಗದ ಕಡೆಗೆ ಕರೆದುಕೊಂಡು ಹೋಗುವುದು ಮಗನಾದರೆ ಸ್ವರ್ಗವನ್ನು ಮನೆಗೆ ಕರೆದುಕೊಂಡು ಬರುವವಳು ಮಗಳು ಎಂದು ನಂಬಿರುವ ನನ್ನಪ್ಪ ಅಗೋಚರ ಪ್ರೀತಿಯ ಭಾವನಾತ್ಮಕ ಮನಸ್ಸಿನ ಅತ್ಯುತ್ತಮ ತಂದೆ ನನ್ನಪ್ಪ ಹೆಣ್ಣು ಮಕ್ಕಳನ್ನು ಪಡೆಯುವ ಭಾಗ್ಯ ಎಲ್ಲಾ ತಂದೆಗೆ ಇರುವುದಿಲ್ಲ ಹೆಣ್ಣು ಮಕ್ಕಳು ಪುಟ್ಟ ದೇವತೆ ಎಂದು ಹಲವಾರು ಬಾರಿ ಅಪ್ಪ ಹೇಳಿದ್ದು ಕೇಳಿದ್ದೇನೆ ಕಣ್ಣರೆಪ್ಪೆಯಂತೆ ಕಾಪಾಡುವ ನನ್ನಪ್ಪ ಪ್ರೀತಿಯ ಬಾವುಕ ಕ್ಷಣಗಳು ನನ್ನ ಮನಸ್ಸನ್ನು ಕರಗಿಸಿವೆ ಅಪ್ಪನನ್ನು ಅಮ್ಮ ನಿರ್ಲಕ್ಷ ಮಾಡಿದರು ಸಹಿಸಿಕೊಳ್ಳುತ್ತಾರೆ ಆದರೆ ನಾನು ಮಗಳು ನಿರ್ಲಕ್ಷ ಮಾಡಿದರೆ ಜೀವನದಲ್ಲಿ ಕುಸಿದು ಹೋಗುತ್ತಾರೆ ಅಪ್ಪ ಸೋತಾಗ ಅಂತರಾಳದಲ್ಲಿ ಅತ್ತಿದ್ದು ನಾನು ಕಂಡಿದ್ದೇನೆ ಆದರೆ ನಮ್ಮ ಮೇಲಿರುವ ಕಾಳಜಿ ಮಾತ್ರ ಎಂದು ಕಡಿಮೆಯಾಗಿಲ್ಲ ಅವರ ಬಗ್ಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ ಸಾವಿರ ಜವಾಬ್ದಾರಿಗಳಿದ್ದರೂ ತಲೆ ತಗ್ಗಿಸದ ನನ್ನಪ್ಪ ಸಾಹುಕಾರ
ಹೆಣ್ಣು ಮಕ್ಕಳಿಗೆ ಅಪ್ಪ ಒಬ್ಬರಿದ್ದರೆ ಇಡೀ ವಿಶ್ವವೇ ನನ್ನ ಜೊತೆ ಇದ್ದಂತೆ ಎಂದು ಸಂಭ್ರಮಿಸುವ ನನ್ನಂತ ಮಗಳು ಇದ್ದಾಳೆ. ಅಪ್ಪನಿಗೆ ತನ್ನಿಚ್ಛೆಯಂತೆ ನಡೆಯಬೇಕೆಂಬ ಹಠ ಇದ್ದರೂ ನಮ್ಮ ಆಸೆಗಳನ್ನು ಪೂರೈಸಿ ನೋವುಗಳನ್ನು ನುಂಗಿ ಗೆದ್ದ ತ್ಯಾಗ ಮೂರ್ತಿ ನನ್ನಪ್ಪ
ನನ್ನಪ್ಪ ಚಿಂತಕ ಬರಹಗಾರ ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡ ಕಾರಣಕ್ಕು ಏನು ಕೆಲವು ಎಲೆಯ ಮರೆಯ ಕಾಯಂತಿರುವ ಪ್ರತಿಭೆಗಳ ಪ್ರತಿಭಾವಂತರನ್ನು ಹುಡುಕಿ ಪರಿಚಯ ಲೇಖನ ಬರೆಯುವುದು ನನ್ನಪ್ಪನ ಹವ್ಯಾಸಗಳಲ್ಲಿ ಒಂದು ಹಲವು ಪ್ರತಿಭಾವಂತರನ್ನು ತನ್ನ ಸುಂದರವಾದ ಪರಿಚಯ ಲೇಖನದಿಂದ ಮುಖ್ಯ ವಾಹಿನಿಗೆ ತಂದ ಪುಣ್ಯಾತ್ಮರು ಹಲವಾರು ಸುಪ್ತ ಮತ್ತು ಸೂಕ್ತ ಪ್ರತಿಭೆಗಳಿಗೆ ಜೀವ ಮತ್ತು ಜೀವನ ಕೊಟ್ಟವರು
ನನ್ನ ಪ್ರಾಯದ ಕೆಲವು ವಿದ್ಯಾರ್ಥಿ ದೆಸೆಯಲ್ಲಿಯೇ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ಭವಿಷ್ಯದ ಪ್ರತಿಭಾವಂತರನ್ನು ಹುಡುಕಿ ಪರಿಚಯಿಸಿದ ಹೆಮ್ಮೆ ನನ್ನಪ್ಪನದು
ಕೆಲವೊಂದು ವಿದ್ಯಾರ್ಥಿ ದೆಸೆಯಲ್ಲಿ ಅರಳುತ್ತಿರುವ ಪ್ರತಿಭೆಗಳ ಗುಣಗಾನ ಜ್ಞಾನ ಸಾಹಸಗಳನ್ನು ಹೊಗಳಿ ನನ್ನಲ್ಲಿ ಹೇಳುತ್ತಿರುವಾಗ ನನಗೆ ಆ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಅಸೂಯೆ ಹೊಟ್ಟೆಕಿಚ್ಚು ಉಂಟಾಗಿ ಎಷ್ಟೋ ಸಲ ನಾನು ತಂದೆ ಜೊತೆ ವಾದಿಸಿದ್ದು ಇದೆ
ನನ್ನ ಅಪ್ಪ ಬರೆಯುತ್ತಿದ್ದ ಸಾಧಕರ ಪರಿಚಯ ಲೇಖನ ಅತ್ಯುತ್ತಮ ಮೂಡಿ ಬರುತ್ತಿತ್ತು ಕೆಲವು ಪ್ರತಿಭಾವಂತ ಸಾಧಕರ ಪರಿಚಯ ಲೇಖನ ಬಂದ ನಂತರ ಸಾಧಕರು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಸನ್ಮಾನ ಮತ್ತು ಅವಕಾಶಗಳನ್ನು ಪಡೆದಿರುವುದು ಮಾತ್ರ ಪರಮ ಸತ್ಯ .
ನನ್ನ ಅಪ್ಪ ನನ್ನನ್ನು ಕೂಡ ಪ್ರತಿಭಾ, ಕಾರಂಜಿ, ಭಾಷಣ, ಅಭಿನಯ.ಮತ್ತು ನೃತ್ಯದಲ್ಲಿ ಭಾಗವಹಿಸುವಂತೆ ಹುರಿದಂಬಿಸುತ್ತಿದ್ದರು ಆದರೆ ನಾನು ಎಂದುಮನಸ್ಸು ಮಾಡಿರಲಿಲ್ಲ.
ಈ ವರ್ಷ ನನ್ನ ಶಾಲಾ ವಾರ್ಷಿಕೋತ್ಸವದಲ್ಲಿ ನಿರೂಪಣ ಕಾರ್ಯಕ್ರಮದಲ್ಲಿ ನಾನು ಒಬ್ಬಳಾಗಿದ್ದೆ ಈ ವಿಷಯವನ್ನು ಅಪ್ಪನಲ್ಲಿ ಹೇಳಿದಾಗ ಅಪ್ಪ ತುಂಬಾ ಹರ್ಷಿತರಾದರು ಅವರ ಸಂತೋಷವನ್ನು ಶಬ್ದಗಳಲ್ಲಿ ವಾಣಿಸಲು ಸಾಧ್ಯವಿಲ್ಲ ನನ್ನ ನಿರೂಪಣೆಯ ವಿಡಿಯೋ ಕ್ಲಿಪ್ಪುಗಳನ್ನು ಮತ್ತು ಫೋಟೋಗಳನ್ನು ರಾತ್ರಿ ಇಡೀ ನಿದ್ರಿಸದೆ ವೀಕ್ಷಿಸುತ್ತಿದ್ದದ್ದು ನನ್ನ ಗಮನಕ್ಕೆ ಬಂದಿತ್ತು ತನ್ನ ಮಗಳ ಪ್ರತಿಭಾ ಪ್ರೋತ್ಸಾಹ, ಕಾಳಜಿ ಮತ್ತು ಅಭಿಮಾನ ನನ್ನ ಮೇಲೆ ನನ್ನಪ್ಪನಿಗಿದ್ದ ಪರಿಯನ್ನು ಕಂಡು ನಾನು ಮೂಕ ವಿಷ್ಮಿತಳಾಗಿದ್ದೆ
ನನ್ನಪ್ಪ ಯಾವಾಗಲೂ ಹೇಳುತ್ತಿದ್ದರು ಪ್ರತಿಯೊಬ್ಬ ಮಕ್ಕಳಲ್ಲೂ ಒಂದು ಸುಪ್ತ ಪ್ರತಿಭೆಗಳಿರುತ್ತವೆ ಆ ಪ್ರತಿಭೆಗಳನ್ನು ಗುರುತಿಸುವವರು ಬೇಕು ಪ್ರತಿಭೆಗಳನ್ನು ಹುಡುಕಿ ಹುರಿದುಂಬಿಸುವವರು ಬೇಕು
ಒಂದು ಸಣ್ಣ ಕಾರ್ಯಕ್ರಮ ನಿರೂಪಿಸಿದ ನನ್ನ ಜ್ಞಾನ ಮತ್ತು ಸಾಹಸಮಯ ಯೋಚನೆ ನಿರೂಪಣೆಯ ಕೈಲಿ ನೋಡಿ ತೃಪ್ತಿಪಟ್ಟಿದ್ದು ನನಗೆ ಬಹಳ ಸಂತೋಷವಾಯಿತು ಅಪ್ಪನ ಮೇಲೆ ಪ್ರೀತಿ ಮತ್ತು ಅಭಿಮಾನ ಹೆಚ್ಚಿಸಿತು ಅಪ್ಪನ ಒಂದು ಆಸೆಯಾದರೂ ನಿರ್ವಹಿಸಿದೆನಲ್ಲ ಎನ್ನುವ ತೃಪ್ತಿ ನನಗಿದೆ
ಆಗ ನನಗೆ ಅರ್ಥವಾಗಿದ್ದುಇಷ್ಟೇ
ಬೇರೆ ಮಕ್ಕಳ ಕಲೆ ಪ್ರತಿಭೆ ಕೌಶಲ್ಯ ಹುಡುಕಿ ಬರೆಯುವ ನನ್ನಪ್ಪನಿಗೆ ಸ್ವತಃ ಅವರ ಮಗಳು ನಿರೂಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅವರಿಗೆ ಆನಂದದ ಕ್ಷಣವಾಗಿತ್ತು
ಪ್ರತಿ ತಂದೆಗೂ ಮಗಳೇ ಚಿನ್ನ
ಎಷ್ಟೋ ಸಲ ಅಮ್ಮನಿಗೂ ತೋರಿಸಿದ ಪ್ರೀತಿ ನನಗೆ ತೋರಿಸಿದ್ದು ನಾನು ಕಂಡಿದ್ದೇನೆ
ಅಪ್ಪ ನೀವು ನನ್ನ ಕನಸುಗಳಿಗೆ ಬಣ್ಣ ಹಚ್ಚುತ್ತಿದ್ದೀರಿ
ನಿಮ್ಮ ಕನಸು ಮತ್ತು ಬಯಕೆಗಳನ್ನು ಈಗಾಗಲೇ ನೀವು ಹೇಳಿಕೊಂಡಿದ್ದೀರಿ ಅದನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ
✍️ ಈಶ್ವರ್ ಸಿ ನಾವುಂದ
9833259692