ಕುಂದಾಪುರ,ಡಿ.10: ಹಂಗಳೂರು ಸಂತ ಪಿಯುಸ್ ಹತ್ತು ಇವರಿಗೆ ಸಮರ್ಪಿಸಲ್ಪಟ್ಟ ಇಗರ್ಜಿಯ ತೆರಾಲಿ ಜಾತ್ರೆಯು ಡಿ. 7 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿ ಭಕ್ತಿ ಮತ್ತು ಸಡಗರದಿಂದ ನೆಡೆಯಿತು,.ಬಸ್ರೂರು ಚರ್ಚಿನ ಪ್ರಧಾನ ಧರ್ಮಗುರು ವಂ।ರೋಯ್ ಲೋಬೊ ಇವರ ನೇತ್ರತ್ವದಲ್ಲಿ ಪ್ರಾರ್ಥನ ವಿಧಿ ಜರುಗಿತು.
ಮೊದಲಿಗೆ ಸಂತ ಪಿಯುಸ್ ಹತ್ತನೇ ಚರ್ಚಿನ ಧರ್ಮಗುರು ವಂ। ಆಲ್ಬರ್ಟ್ ಕ್ರಾಸ್ತಾ ವಂ।ಇವರ ಮುಂದಾಳತ್ವದಲ್ಲಿ ಸಂತ ಪಿಯುಸ್ ಹತ್ತನೇ ಇವರ ಪ್ರತಿಮೆಯನ್ನು ಅಲಂಕರಿಸಲ್ಪಟ್ಟ ಪಲ್ಲಕ್ಕಿಯನ್ನು ಭಕ್ತಿ ಗೀತೆಗಳ ಹಾಡುತ್ತಾ ಮೆರವಣಿಯನ್ನು ಭಕ್ತಿಯಿಂದ ಮಾಡಲಾಯಿತು.
ನಂತರ ದೇವಾಲಯದೊಳಗೆ ಭಕ್ತಿಯಿಂದ ಬೈಬಲನ್ನು ಮೆರವಣಿಗೆಯಲ್ಲಿ ಬಲಿಪೀಠದ ಪವಿತ್ರ ಸ್ಥಳದಲ್ಲಿ ಇಟ್ಟು ಗೌರವಿಸಲಾಯಿತು. ದೇವರ ವಾಕ್ಯಗಳ ಸಂಭ್ರಮ ನಡೆಯಿತು. ನಂತರ ಗಾಯನ ಪಂಗಡದ ಸಹಕಾರದಲ್ಲಿ ಕೀರ್ತನೆಗಳನ್ನು ಹಾಡಲಾಯಿತು. ದೇವರ ವಾಕ್ಯದ ಪವಿತ್ರತೆ ಹಾಗೂ ಶಕ್ತಿಯ ಬಗ್ಗೆ ಹಲವು ಉದಾಹರಣೆ ನೀಡಿ ಪ್ರಸಂಗವನ್ನು ವಂ।ರೋಯ್ ಲೋಬೊ ನೀಡಿದರು.
ಈ ಪ್ರಾರ್ಥನಾ ವಿಧಿಯಲ್ಲಿ ಕುಂದಾಪುರ ವಲಯದ ಎಲ್ಲಾ ಇಗರ್ಜಿಯ ಧರ್ಮಗುರುಗಳು ಹಾಗೂ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು. ಧರ್ಮಗುರು ವಂ। ಆಲ್ಬರ್ಟ್ ಕ್ರಾಸ್ತಾ ಹಬ್ಬದ ಶುಭಾಶಯಗಳನ್ನು ಕೋರಿ ಧನ್ಯವಾದ ನೀಡಿದರು. ಪಾಲನ ಮಂಡಳಿಯ ಸದಸ್ಯರಿಂದ ಸಹಕಾರದಿಂದ ಕಾರ್ಯಕ್ರಮವು ಶಿಸ್ತುಬದ್ದವಾಗಿ ನೆಡೆಯಿತು.