ಕುಂದಾಪುರ, ಡಿ.25: 454 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24 ರ ಸಂಜೆ ಕ್ರಿಸ್ಮಸ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.
ದಿವ್ಯ ಬಲಿಪೂಜೆಯನ್ನು ಅರ್ಪಿಸಿದ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ನಮಗೋಸ್ಕರ “ದೇವರು ಮನುಸ್ಯನಾಗಿದ್ದಾನೆ’ ದೇವರು ನಮನ್ನು ಎಷ್ಟು ಪ್ರೀತಿಸುತ್ತಾರೆಂದರೆ, ಅವರು ತನ್ನ ಒಬ್ಬನೇ ಪುತ್ರ ಯೇಸುನನ್ನು ನಮಗೊಸ್ಕರ ಜಗತ್ತಿಗೆ ಅರ್ಪಿಸಿದರು, ಏಕೆಂದರೆ ದೇವರು ನಮ್ಮನ್ನು ಅಷ್ಟು ಪ್ರೀತಿಸುತ್ತಾರೆ, ದೇವರು ನಮ್ಮೆಲ್ಲರನ್ನು ಪ್ರೀತಿಸುತ್ತಾರೆ, ಯೇಸುವು ಅತೀ ಕೆಳಗಿನವರಿಗೆ ಮೇಲೆತ್ತಲು, ಪಾಪಿಗಳನ್ನು ಕ್ಶಮಿಸಿ ಪರಿರವರ್ತಿಸಲು ಬಂದವನು. ಈ ಪ್ರಪಂಚದಲ್ಲಿ ಹುಟ್ಟಿ ತನ್ನ ಪಿತನ ಪ್ರೀತಿಯನ್ನು ಮನುಜರಿಗೆ ಧಾರೆ ಎರೆದರು. ಯೇಸು ಅವರು ದೇವರ ಪ್ರೀತಿಯನ್ನು ಸಾರಿದರು. ಯೇಸುವನ್ನು ನಂಬಿ ಕೆಟ್ಟ ಜೀವನದಿಂದ ಪರಿವರ್ತನೆ ಹೊಂದಿ ಉತ್ತಮವಾದ ಜೀವನ ಸಾರಬೇಕು, ಕ್ರಿಸ್ಮಸ್ ಅಂದರೆ ದೇವರ ಪ್ರೀತಿ ಮಮತೆಯ ಹಬ್ಬ, ಇಂದು ನಮ್ಮ ನಮ್ಮ ಹ್ರದಯಗಳಲ್ಲಿ ಯೇಸು ಹುಟ್ಟಬೇಕು, ನಾವು ಕನಿಷ್ಟರಿಗೆ ಸಹಾಯ, ಪರರಿಗೆ ಪ್ರೀತಿ ಪ್ರೇಮ ಕೊಟ್ಟರೆ, ಸಂಬಂಧಗಳನ್ನು ಉತ್ತಮ ಪಡಿಸಿಕೊಂಡಾಗ ನಮ್ಮ ಹ್ರದಯಗಳಲ್ಲಿ ದೇವರು ಹುಟ್ಟುತ್ತಾನೆ, ಕ್ರಿಸ್ಮಸ್ ಅಂದರೆ ದೇವರ ಪ್ರೀತಿ ಮಮತೆಯ ಹಬ್ಬ’ ಎಂದು ತಿಳಿಸಿ, ಶುಭಾಷಯ ಕೋರಿ ವಂದಿಸಿದರು.
ದಾನಿಗಳ ಮೂಲಕ ಎಲ್ಲರಿಗೆ ಕೇಕ್ ಅನ್ನು ಎಲ್ಲರಿಗೆ ಹಂಚಲಾಯಿತು. ಬಲಿದಾನದ ಬಳಿಕ ಹೌಸಿ ಆಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಐ.ಸಿ.ವೈ.ಎಮ್. ಸಂಘಟನೆಯಿಂದ ಬಹುಮಾನಗಳನ್ನು ವಿತರಿಸಲಾಯಿತು.