ಕುಂದಾಪುರ : ದಿನಾಂಕ 24/12/2024 ಮಂಗಳವಾರದಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲು ಕ್ರಿಸ್ಮಸ್ ಹಬ್ಬದ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆಗಿರುವ ಪೂಜ್ಯನೀಯ ಫಾ. ಪೌವ್ಲ್ ರೇಗೋರವರು ಮಾತನಾಡಿ ನಮ್ಮಲ್ಲಿ ಸಹಕಾರ ಮತ್ತು ಸಹಬಾಳ್ವೆ ಇರಬೇಕು. ಸಮಾಜದಲ್ಲಿರುವ ದುರ್ಬಲರಿಗೆ ನಮ್ಮಲ್ಲಿ ಆಗುವಷ್ಟು ಸಹಾಯವನ್ನು ಮಾಡಬೇಕು ಎನ್ನುತ್ತಾ ಕ್ರಿಸ್ಮಸ್ ಸಂದೇಶದೊಂದಿಗೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ಯವರು ದೇವರು ಭೂಲೋಕದಲ್ಲಿ ಬರುವಾಗ ಸಕಲರಿಗೂ ಶಾಂತಿ ಸಮಾಧಾನ ಎನ್ನುವ ಸಂದೇಶವನ್ನು ಹೊತ್ತು ತಂದರು. ಅದರಂತೆ ನಾವು ಪ್ರೀತಿ ಸಂತೋಷ ಸಹಬಾಳ್ವೆಯೊಂದಿಗೆ ಜೀವಿಸುವ ಎನ್ನುವ ಸಂದೇಶವನ್ನು ನೀಡಿದರು. ರಿಯೋನ್ ಡಿಸೋಜ ಸ್ವಾಗತಿಸಿ, ಅಮೃತ್, ಎಲಿಷಾ ಕಾರ್ಯಕ್ರಮ ನಿರೂಪಿಸಿ, ಆರ್ಶ್ ವಂದಿಸಿದರು.