ಬೀದರ್ ಹುಮನಾಬಾದಿನ ಸೈಂಟ್ ಮೇರಿ ಶಾಲೆಯಲ್ಲಿ ಡಿಸೆಂಬರ್ 23,2024 ಸೋಮವಾರ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಮಕ್ಕಳು ಅನೇಕ ಹಾಡುಗಳಿಗೆ ಡ್ಯಾನ್ಸ್ ಮಾಡಿದರು ಹಾಗೂ ಯೇಸು ಕ್ರಿಸ್ತನ ಜನನದ ರೂಪಕವನ್ನು ಅರ್ಥ ಭರಿತವಾದ ಪ್ರದರ್ಶನ ಪಸ್ತೂತ ಪಡಿಸಿದರು.
ರೆ. ಫಾದರ್ ಡೇವಿಡ್, ಅಧ್ಯಕ್ಷ ಸ್ಥಾನವನ್ನು ವಹಿಸಿದರು ಶಾಲೆ ವ್ಯವಸ್ಥಾಪಕರಾದ ರೆ. ಫಾದರ್ ಸಚಿನ್ ಕ್ರಿಸ್ಟಿ ರವರು ದಿವ್ಯ ಸಾಹಿತ್ಯವನ್ನು ವಹಿಸಿದರು. ವಿಶೇಷ ಆಹ್ವಾನಿತರಾಗಿ ಟೀಚರ್ ಸಂಗೀತ ರವರು ಭಾಗವಹಿಸಿದ್ದರು. ಪುಟಾಣಿ ಮಕ್ಕಳ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಂತಹ ಪೋಷಕರು ಸಂತೋಷವನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಸಿದ್ಧಗೊಳಿಸಿದಂತಹ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನುಫಾದರ್ ಸಚಿನ್ ಕ್ರಿಸ್ಟಿ ವ್ಯಕ್ತಪಡಿಸಿದ್ದಾರೆ.