ಕುಂದಾಪುರ: ಟೈಯರ್ ಪಂಚರ್ ಶಾಪ್ ಒಂದರಲ್ಲಿ ಸ್ಕೂಲ್ ಬಸ್ಸಿನ ಟೈಯರಿಗೆ ಗಾಳಿ ತುಂಬುವ ಸಂದರ್ಭ ಟೈಯರ್ ಸಿಡಿದು ಸ್ಪೋಟಗೊಂಡು ಯುವಕ ಗಂಭೀರ ಗಾಯಗೊಂಡ ಘಟನೆ ಕೋಟೇಶ್ವರದಲ್ಲಿ ಸಂಭವಿಸಿದೆ.ಗಂಭೀರ ಗಾಯಗೊಂಡ ಯುವಕ ಅಬ್ದುಲ್ ರಜೀದ್ (19) ಎಂದು ತಿಳಿದುಬಂದಿದೆ.
ಖಾಸಗಿ ಶಾಲೆ ಬಸ್ ಒಂದರ ಟೈಯರ್ ಪ್ಯಾಚ್ ಗೆಂದು ಬಂದಿದ್ದು ಟಯರನ್ನು ಕೆಳಗಿಳಿಸಿ ಗಾಳಿ ತುಂಬುವಾಗ ಗಾಳಿ ತುಂಬಿದ ಕೆಲವೇ ನಿಮಿಷಗಳಲ್ಲಿ ಟೈಯರ್ ಸಿಡಿದು ಸ್ಪೋಟಗೊಂಡಿದೆ. ಈ ಸಂದರ್ಭ ಗಾಳಿ ತುಂಬಿ ಯುವಕ ಎದ್ದು ಬೆನ್ನು ಹಾಕಿದಾಗ ಟೈಯರ್ ಸಿಡಿಯಲ್ಪಟ್ಟು, ಆತ ಸುಮಾರು ಫೀಟು ಮೇಲಕ್ಕೆ ಎಸೆಯಲ್ಪಟ್ಟಿದ್ದಾನೆ. ಟೈಯರ್ ಸ್ಪೋಟಗೊಂಡ ಬಳಿಕ ಟೈಯರ್ ಡ್ರಮ್ ಬಸ್ಸಿನ ಮೇಲ್ಚಾವಣಿಯ ಮೇಲೆ ಬಿದ್ದು ನೆಲಕ್ಕುರುಳಿದೆ. ಘಟನೆಯ ಎಲ್ಲಾ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯವೊಂದರ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.