ಕುಂದಾಪುರ; ಯು.ಬಿ.ಎಂ.ಸಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ 21.12.2024 ರಂದು, 2024-25 ಬಹುಮಾನ ವಿತರಣೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಕರೆಸ್ಪಾಂಡೆಂಟ್ ಶ್ರೀಮತಿ ಐರಿನ್ ಸಾಲಿನ್ಸ್ ವಹಿಸಿದ್ದರು. ಪಾಸ್ಟರ್ ಇಮ್ಯಾನ್ಯುಯಲ್ ಜಯಕರ್ ಮತ್ತು ಶ್ರೀ ದಯಾಕರ್ ಜಾತಣ್ಣ ಮತ್ತು ಯುಬಿಎಂಸಿ ಶಾಲೆಯ ಸಹಶಿಕ್ಷಕಿ ಶ್ರೀಮತಿ ರಾಜೇಶ್ವರಿ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ, ಸಿಎಸ್ಐ ಕೃಪಾ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ , ಶ್ರೀಮತಿ ಸವಿತಾ, ಯುಬಿಎಂಸಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಿದರು. ಬಹುಮಾನ ಗಳಿಸುವುದಕ್ಕಿಂತ ಭಾಗವಹಿಸುವಿಕೆಯ ಮಹತ್ವ ಮತ್ತು ಅನುಭವವನ್ನು ಪಡೆಯುವ ಉತ್ಸಾಹವನ್ನು ಗಣ್ಯರು ತಿಳಿಸಿದರು.ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಿರಿ’ ಎಂದು ಗಣ್ಯರು ಹಾರೈಸಿದರು. ಪಾಠ, ಆಟ, ಇತರ ಚಟುವಟಿಕೆಗಳಲ್ಲಿ ಒಟ್ಟಾರೆಯಾಗಿ ಶಾಲೆಯ “ಹಳದಿ ಗುಂಪು” ಟ್ರೋಫಿಯನ್ನು ಪಡೆದುಕೊಂಡಿತು.
Prize Distribution Ceremony at UBMC English Medium School
Kundapur; The 2024-25 Prize Distribution Ceremony was held at UBMC English Medium School on 21.12.2024. The function was presided over by the School Correspondent, Mrs. Irene Sallins. Pastor Emmanuel Jayakar and Mr. Dayakar Jatanna and UBMC School Co-Teacher, Mrs. Rajeshwari were the chief guests. On the stage, UBMC English Medium School Principal, Mrs. Anita Alice D’Souza, CSI Krupa Vidyalaya Headmistress, Mrs. Savita, UBMC Anganwadi Teacher, Mrs. Vidyalakshmi, distributed prizes and honored the students. The dignitaries emphasized the importance of participation and the enthusiasm of gaining experience rather than earning prizes. The dignitaries wished them good achievements in the future. The school’s “yellow group” won the trophy overall in lessons, games, and other activities.