ಕುಂದಾಪುರ,ಡಿ.22: ಸ್ಥಳೀಯ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಡಿ.21 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಭಗಿನಿ ಸುಪ್ರಿಯಾ ವಹಿಸಿದ್ದು, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೋಲಿ ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಪ್ರತಿಭಾ ಪುರಸ್ಕ್ರತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ “ನಿಮ್ಮ ತಂದೆ ತಾಯಿಗಳೇ ನಿಮಗೆ ಮೊದಲ ಗುರುಗಳು, ಯಾಕೆಂದರೆ ಅವರು ನಡೆಸುವ ಜೀವನ ನೋಡಿ ನೀವು ಅದನ್ನು ಅನುಕರಣೆ ಮಾಡಿ ಕಲಿಯುತ್ತೀರಿ, ಅದ ನಂತರ ನೀವು ಶಾಲೆಗಳಿಗೆ ಬರುತ್ತೀರಿ, ನೀವು ಈ ಶಾಲೆಗೆ ಬಂದಿದ್ದಿರಿ, ಈ ಶಾಲೆ ಅಚ್ಚುಕಟ್ಟಾದ ಶಾಲೆ, ಶಿಸ್ತಿನಿಂದ ಕೂಡಿದ ಶಾಲೆ, ಇವತ್ತು ಶಾಲೆಯು ಎಲ್ಲ ಪ್ರತಿಭಾವಂತರನ್ನು ಗುರುತಿಸಿ ಪುರಸ್ಕಾರ ಮಾಡುತ್ತಾರೆ, ಶಿಕ್ಷಣ ಅಂದರೆ ಮಾನವನ ಸಂಪೂರ್ಣ ವ್ಯಕ್ತಿತ್ವವನ್ನು ವಿಕಾಸನ ಗೋಳಿಸುವುದೇ ಶಿಕ್ಶಣ, ಇಲ್ಲಿ ಉತ್ತಮವಾದ ಶಿಕ್ಷಣ ಪಡೆದು, ನಿಮ್ಮ ಜೀವನದಲ್ಲಿ ಪ್ರತಿಭಾವಂತರಾಗಿರಿ” ಎಂದು ಶುಭ ಹಾರೈಸಿದರು.
ಇನ್ನೋರ್ವ ಅತಿಥಿಯಾದ ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ “ವಿದ್ಯಾರ್ಥಿಗಳು ಯಾವತ್ತೂ ಅಚಲವಾದ ಗುರಿ ಇಟ್ಟು ಕೊಳ್ಳಬೇಕು, ನಾವು ಮಂಗಳೂರಿಗೆ ಹೋಗ ಬೇಕೆಂದರೆ, ಮಂಗಳೂರು ಮಾರ್ಗವನ್ನೆ ಹಿಡಿಯಬೇಕು, ದಾರಿ ತಪ್ಪಿದರೆ, ನಾವು ಇನ್ನೇಲ್ಲಿಗೊ ಸಾಗುತ್ತೇವೆ, ಅದಕ್ಕೆ ಮೊದಲಿನಿಂದ ನಾವು ತಯಾರಿ ಮಾಡಿ, ನಾವು ಏನಾಗಬೇಕು ಎಂದು ಅರಿತು ಆ ಗುರಿಯತ್ತಲೇ ಸಾಗಬೇಕು, ಆವಾಗ ನಮಗೆ ಯಶಸ್ಸು ದೊರಕುತ್ತದೆ’ ಎಂದು ಹೇಳಿದರು.
ಸಮಾರಂಭದಲ್ಲಿ ಅ।ವಂ। ಪೌಲ್ ರೇಗೊ, ವಿನೋದ್ ಕ್ರಾಸ್ಟೊ, ವಿಶೇಷ ಮಕ್ಕಳ ಕ್ರೀಡೆಯಲ್ಲಿಒಟದ ಸ್ಫರ್ಧೆಯಲ್ಲಿ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲಾ ವಿದ್ಯಾರ್ಥಿನಿಯಾದ ರೀಶೆಲ್ ಡಿಸೋಜಾ ಮತ್ತು ಶಾಲೆಯ ತೋಟಗಾರಿಕ ಸ್ಫರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವ್ರತ್ತಿ ಶಿಕ್ಷಕಿ ಸೆಲಿನ್ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು. ಹಾಗೂ ಆಟ ಪಾಠ ಇತರ ಚಟುವಟಿಕೆಗಳಲ್ಲಿ ಪ್ರತಿಭಾವಂತ ಮಕ್ಕಳನ್ನು ಬಹುಮಾನ ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಐವಿಯವರು ಶಾಲಾ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ಸಂತ ಜೋಸೆಫ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರೇಮಿಕಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಗ್ರೇಸಿ ಡಿಸೋಜಾ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ, ನ್ರತ್ಯ, ಕ್ರಿಸ್ಮಸ್ ಸಂದೇಶ, ಸಾಮಾಜಿಕ ಸಂದೇಶದ ಕಿರು ನಾಟಕಗಳನ್ನು ಪ್ರದರ್ಶಿಸಿದರು. ಶಿಕ್ಷಕ ಮೈಕಲ್ ಪುಟಾರ್ಡೊ ಶಿಕ್ಷಕಿಯರಾದ ಶ್ರೀಲತಾ, ಸೆಲಿನ್ ಡಿಸೋಜಾ, ಗುಮಾಸ್ತೆ ಪ್ರತಿಮಾ ಇವರು ಬಹುನಾನಿತರ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿಯರಾದ ಸರಸ್ವತಿ ವಂದಿಸಿದರು. ಶಿಕ್ಷಕ ಅಶೋಕ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.