ಕೋಲಾರ.ಡಿ.20, ಶ್ರೀನಿವಾಸಪುರ ತಾಲೂಕು ಹೊಸಗುಡ್ಯ ಅರಣ್ಯದ ಜಂಗಾಲಕುಂಟೆ ಸ.ನಂ. 1 ಮತ್ತು 2 ರಲ್ಲಿನ ಜಂಟಿ ಸರ್ವೆಗೆ ಗೈರಾಜರಾಗಿರುವ ಕಂದಾಯ ಮತ್ತು ಸರ್ವೆ ಅಧಿಕಾರಿಗಳ ವಿರುದ್ದ ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರನ್ನು ದಿಕ್ಕುತಪ್ಪಿಸಿ ಡಿ-20 ರಂದು ಜಂಟಿ ಸರ್ವೆ ಮಾಡಿ ಕಾನೂನನ್ನು ಗೌರವಿಸುತ್ತೇವೆಂದು ಹೇಳಿಕೆ ನೀಡುತ್ತಿದ್ದ ಜಿಲ್ಲಾಡಳಿತ ಇಂದು ಜಂಟಿ ಸರ್ವೆಗೆ ಕಂದಾಯ, ಸರ್ವೆ ಅಧಿಕಾರಿಗಳು ಗೈರು ಹಾಜರಾಗಿ ಜ-2 ಕ್ಕೆ ಆರ್.ಸಿ ಆದೇಶದಂತೆ ಜಂಟಿ ಸರ್ವೆ ಮಾಡುತ್ತೇವೆಂದು ಹೇಳಿಕೆ ನೀಡಿರುವುದು ಬಲಾಡ್ಯರ ಒತ್ತಡಕ್ಕೆ ಅಧಿಕಾರಿಗಳು ಭಯಬೀತರಾಗಿದ್ದಾರೆಂದು. ಆರೋಪ ಮಾಡುವ ಜೊತೆಗೆ ಜಂಟಿ ಸರ್ವೆಗೆ ಅಡ್ಡಾ ಪಡಿಸಿರುವ ಕಂದಾಯ ಹಾಗೂ ಅರಣ್ಯ ಸಚಿವರ ಮನೆಗಳ ಮುಂದೆ ಜಾನುವಾರುಗಳ ಸಮೇತ ಮುತ್ತಿಗೆ ಹಾಕಿ ನ್ಯಾಯ ಸಿಗುವರೆಗೂ ಆಹೊರಾತ್ರಿ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆನ್ನು ನೀಡಿದರು.
2000 ಎಕರೆ ಬಡ ರೈತರ ಒತ್ತುವರಿ ತೆರವುಗೊಳಿಸುವಾಗ ಕಂದಾಯ ಮಂತ್ರಿಗಳಾಗಲೀ ಅರಣ್ಯ ಸಚಿವರಾಗಲೀ ಸರ್ಕಾರದಲ್ಲಿ ಬಲಾಡ್ಯರ ಪರ ಇರುವ ಪ್ರಾದೇಶಿಕ ಆಯುಕ್ತರಾಗಲೀ ಕನಿಷ್ಠ ಪಕ್ಷ ಬೆಳೆಯ ಪಸಲನ್ನು ಪಡೆಯಲು ಕಾಲವಕಾಶ ಕೊಡದೆ ರಾಜ್ಯಾರೋಷವಾಗಿ ಜೆ.ಸಿ.ಬಿ.ಗಳ ಮುಖಾಂತರ ರೈತರ ಬದುಕಿನ ಮೇಲೆ ಅರಣ್ಯ ಅಧಿಕಾರಿಗಳು ದಬ್ಬಾಳಿಕೆ ಮಾಡುವಾಗ ತುಟಿ ಬಿಚ್ಚದೆ ಮಾತು ಬರದ ಮೂಕರಂತೆ ವರ್ತಿಸುತ್ತಿದ್ದ ಜನ ಪ್ರತಿನಿಧಿಗಳೇ ಬಲಾಡ್ಯರ ಅರಣ್ಯ ಒತ್ತುವರಿ ತೆರವುಗೊಳಿಸಲು ಮುಂದಾದಾಗ ನೂರೊಂದು ನೆಪ ಹೇಳಿ ಜಂಟಿ ಸರ್ವೆ ಮುಂದೂಡಲು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸಚಿವಾಲಯದಿಂದ ರಾಜ್ಯ ಸಚಿವಾಲಯಕ್ಕೆ ಸತತವಾಗಿ ಮೂರು ಬಾರಿ ಪತ್ರ ಬರೆದು ಹೊಸಹುಡ್ಯ ಸ.ನಂ. 1 ಮತ್ತು 2 ರಲ್ಲಿ 30 ದಿನಗಳಲ್ಲಿ ಜಂಟಿ ಸರ್ವೆ ಮಾಡಿ ಒತ್ತುವರಿ ಇದ್ದರೆ, 30 ದಿನಗಳಲ್ಲಿ ತೆರವು ಮಾಡಿ ವರದಿ ನೀಡುವಂತೆ ರಾಜ್ಯ ಸಚಿವಾಲಯಕ್ಕೆ ಸೂಚನೆ ಮಾಡಿರುವ ಹಿನ್ನಲೆಯಲ್ಲಿ ಡಿ-20 ರಂದು ಜಂಟಿ ಸರ್ವೆಗೆ ದಿನಾಂಕ ನಿಗದಿ ಮಾಡಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸರ್ವೆ ಅಧಿಕಾರಿಗಳಿಗೆ ಹಾಗೂ ಒತ್ತುವರಿದಾರರಿಗೆ ನೋಟೀಸ್ ನೀಡಿ ಸರ್ವೆಗೆ ಹಾಜರಾಗಬೇಕೆಂದು ಸೂಚನೆ ನೀಡಿದರೂ ಆರ್.ಸಿ. ಆದೇಶದ ಪ್ರತಿ ಇದೆ ಎಂದು ಸರ್ವೆಗೆ ಹಾಜರಾಗದೆ ಬಲಾಡ್ಯರ ಒತ್ತಡಕ್ಕೆ ಮಣಿಯುತ್ತಿರುವುದು ನ್ಯಾಯವೇ ಎಂದು ಪ್ರಶ್ನೆ ಮಾಡುವ ಜೊತೆಗೆ ಕಾನೂನಿನಲ್ಲಿ ಬಲಾಡ್ಯರಿಗೆ ಒಂದು ನ್ಯಾಯ ಬಡ ರೈತರಿಗೆ ಒಂದು ನ್ಯಾಯವೇ ಇದನ್ನು ಸರಿಪಡಿಸಬೇಕಾದ ಸಚಿವರೇ ಬಲಾಡ್ಯರ ಪರ ನಿಂತರೆ ಇನ್ನು ಬಡವರ ರಕ್ಷಣೆ ಯಾರ ಹೊಣೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಅರಣ್ಯ ಅಧಿಕಾರಿಗಳ ಒತ್ತುವರಿ ಕಾರ್ಯಾಚರಣೆ ಕೂಡಲೇ ನಿಲ್ಲಸಬೇಕು. ಒತ್ತುವರಿ ಮಾಡಿಕೊಂಡಿರುವ 2000 ಎಕರೆ ರೈತರಿಗೆ ವಾಪಸ್ಸು ಪಡೆಯಬೇಕು. ಬಲಾಡ್ಯರ ಅರಣ್ಯ ಒತ್ತುವರಿ ಜಂಟಿ ಸರ್ವೆ ಮಾಡುವರೆಗೂ ಜಿಲ್ಲೆಯ ಯಾವ ರೈತರ ಇಂಚು ಭೂಮಿಯನ್ನು ತೆರವಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಪುತ್ತೇರಿರಾಜು ರವರುಗಳು ಹಾಜರಿದ್ದರು.