ಶ್ರೀನಿವಾಸಪುರ : ಎಂ.ಜಿ. ರಸ್ತೆಯ ಎರಡೂ ಕಡೆ ಇವರು ನಡೆಸುವ ವ್ಯಾಪಾರ ವಹಿವಾಟಿನಿಂದ ಪ್ರತಿವರ್ಷ ಸುಮಾರು ಅಪಘಾತಗಳಾಗಿದ್ದು, ಪ್ರತಿನಿತ್ಯ ಟ್ರಾಫಿಕ್ ಜಾಮ್ ನಂತಹ ಸಮಸ್ಯೆಗಳು ಕೂಡ ಸಾರ್ವಜನಿಕರು ಅನುಭವಿಸಬೇಕಾಗಿದೆ. ಪ್ರತಿ ವರ್ಷವು ಕೂಡ ಇವರ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತುತ್ತಿದ್ದರೂ ತಾಲ್ಲೂಕು ಆಡಳಿತ ಜಾಣಕುರಡರಂತೆ ವರ್ತಿಸುತ್ತಿದೆ ಎಂದು ಎಂದು ಮಾವು ಬೆಳೆಗಾರರ ಕ್ಷೇಮಾಭವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ದೂರಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿ ಅವರ ಕಾಯಿ ಮಂಡಿ ತೆರೆವುಗೊಳಿಸುವ ಬಗ್ಗೆ ಮಂಗಳವಾರ ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಅದಲ್ಲದೆ ಆದ್ದರಿಂದ ತಾವುಗಳು ಈ ಕೂಡಲೇ ಈ ಅವರೇಕಾಯಿ ಮಂಡಿಗಳನ್ನು ಮುಚ್ಚಿಸಿ , ಎಪಿಎಂಸಿ ಕೃಷಿ ಮಾರುಕಟ್ಟೆಯಲ್ಲಿ ಜಾಗವಿದೆ. ಇಲ್ಲಿ ವ್ಯಾಪಾರ ವಹಿವಾಟನ್ನು ನಡೆಸಲು ಅವರಿಗೆ ಸೂಚಿಸಿ ಅನುವು ಮಾಡಿಕೊಡಬೇಕು ಅಥವಾ ಪಟ್ಟಣದ ಹಳೇ ಸರ್ಕಾರಿ ಆಸ್ಪತ್ರೆ, ಕಾಂಪ್ಲೆಕ್ಸ್ನ ಹಿಂದುಗಡೆಯ ಜಾಗದಲ್ಲಿ ಜಾಗ ಇರುವುದರಿಂದ ಅಲ್ಲಿಯಾದರೂ ವ್ಯಾಪಾರ ವಹಿವಾಟುಗೆ ಅವಕಾಶ ಮಾಡಿಕೊಟ್ಟು ವ್ಯಾಪಾರ ವಹಿವಾಟನ್ನು ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗದೇ ಇರುತ್ತದೆ. ಈ ವಿಚಾರದಲ್ಲಿ ತಾಲ್ಲೂಕು ದಂಡಾಧಿಕಾರಿಗಳು ಪೆÇಲೀಸ್ ಇಲಾಖೆ, ಶ್ರೀನಿವಾಸಮರ ಪುರಸಭೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಇದರ ಬಗ್ಗೆ ಗಮನಹರಿಸಬೇಕಾಗಿ ಮನವಿ ಮಾಡಿದರು.
ಇಲ್ಲದಿದ್ದಲ್ಲಿ ಸಾರ್ವಜನಿಕರ ಹಿತಾಸಕ್ತಿಯ ಕುರಿತು ಕೋಲಾರ ಜಿಲ್ಲಾ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪಟ್ಟಣದ ಸಾರ್ವಜನಿಕರೊಂದಿಗೆ ಸೇರಿ ಎಲ್ಲಾ ಇಲಾಖೆಗಳ ವಿರುದ್ಧ ಉಗ್ರ ರೀತಿಯ ಹೋರಾಟಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದರು.
ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ , ಎಪಿಎಂಸಿ ಕೃಷಿ ಅಧಿಕಾರಿ ಸುನಿಲ್, ಪೊಲೀಸ್ ಇನ್ಸ್ಪೆಕ್ಟರ್ ಮಹ್ಮದ್ಗೊರವನಕೊಳ್ಳ ರವರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಉಪಾಧ್ಯಕ್ಷ ಎಂ.ಬೈರೆಡ್ಡಿ , ಪ್ರದಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್, ಜಿಲ್ಲಾ ಸಂಚಾಲಕ ಬಿ.ಎ.ಸೈಯದ್ಫಾರೂಕ್, ಸದಸ್ಯರಾದ ಎಂ.ಎಸ್.ನಾಗರಾಜ್, ಬಿ.ವಿಶ್ವನಾಥರೆಡ್ಡಿ, ಕೃಷ್ಣಪ್ಪ ಇದ್ದರು.