ಶ್ರೀನಿವಾಸಪುರ : ರೈತರು ಕಳೆದ 6 ತಿಂಗಳಿನಿಂದ ಹಿಂದೆ ರೈತರು ತಮ್ಮ ಜಮೀನನ್ನು ಹದ ಮಾಡಿ ಅವರೆ ಕಾಳು ಹಾಕಿ ಕಾಲ ಕಾಲಕ್ಕೆ ಔಷದಿ ಸಿಂಪಡಣೆ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡುಬಹುದು ಕನಸು ಕಂಡಿರುತ್ತಾರೆ ಆದರೆ ಫಸಲು ಕೈಗೆ ಬಂದ ಸಮಯದಲ್ಲಿ ಹಣ ಬರಿಲಿಲ್ಲವೆಂದರೆ 6 ತಿಂಗಳು ಕಷ್ಟ ಪಟ್ಟಿದ್ದೆಲ್ಲಾ ವ್ಯರ್ಥವಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಪಟ್ಟಣದ ಎಂಜಿ ರಸ್ತೆಯಲ್ಲಿ ಕೃಷಿ ಉತ್ಪನ್ನ ಮಾರಕುಟ್ಟೆ ಸಮಿತಿ ಅವರೇಕಾಯಿ ಹರಾಜು ಮಾಡುತ್ತಿದ್ದು ನಿಲ್ಲಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಜಿ.ಎನ್.ಸುದೀಂದ್ರರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶ್ರೀನಿವಾಪುರ ತಾಲೂಕು ಮಾವು ಹಾಗು ಅವರೇಕಾಯಿ ಬೆಳೆಯಲು ಹದವಾದ ಭೂಮಿಯಾಗಿದ್ದು, ಈ ಭೂಮಿಯಲ್ಲಿ ಬೆಳದ ಅವರೇಕಾಯಿಯು ರಾಜ್ಯ, ನೆರಯ ರಾಜ್ಯದ ಅವರೇ ಕಾಯಿ ರುಚಿಯನ್ನು ಮೆಚ್ಚಿದ್ದಾರೆ. ಆದರೆ ಪ್ರತಿವರ್ಷವೂ ಅವರೆ ಕಾಯಿ ಬೆಳೆ ಸಮಯದಲ್ಲಿ ಲಕ್ಷಾಂತರ ವಹಿವಾಟು ನಡೆಯುತ್ತದೆ. ಈ ಸಮಯದಲ್ಲಿ ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿಯು ಎಂಜಿ ರಸ್ತೆಯಲ್ಲಿ ಬಹಿರಂಗ ಹರಾಜು ಮಾಡುತ್ತಿದ್ದು ಇದರಿಂದ ಸಾರ್ವಜನಿಕರು , ವಾಹನ ಸಂಚಾರಕ್ಕೆ ಅಡಚನೆಯಾಗುತ್ತಿದ್ದು, ಕೆಲವೊಮ್ಮೆ ಅಪಘಾತಗಳು ನಡೆಯುತ್ತಿರುತ್ತವೆ ಆದ್ದರಿಂದ ಪುರಸಭೆ ಹಾಗು ತಾಲೂಕು ಆಡಳಿತ ಮಂಡಲಿಯು ಎಂಜಿ ರಸ್ತೆಯಲ್ಲಿ ಅವರೆಕಾಯಿ ಹರಾಜು ನಿಲ್ಲಿಸಿ, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮುಂದುವರೆಸುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ರೈತರ ಮನವಿಯನ್ನು ಸ್ವೀಕರಿಸಿ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರೇ ಕಾಯಿ ಹರಾಜು ವಹಿವಾಟನ್ನ ಕೃಷಿ ಉತ್ಪನ್ನ ಮಾರಕಟ್ಟೆಯಲ್ಲಿಯೇ ನಡೆಯುವಂತೆ ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ರವರಿಗೆ ಮನವಿ ಪತ್ರಸಲ್ಲಿಸಿದರು. ಬೆಂಗಳೂರು ವಲಯ ಉಪಾಧ್ಯಕ್ಷ ಪ್ರಭಾಕರಗೌಡ ಮಾತನಾಡಿದರು. ಸಿಪಿಐ ಮಹ್ಮದ್ಗೊರವನಕೊಳ್ಳ, ಪಿಎಸ್ಐ ಜಯರಾಮ್ , ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಬೈಚೇಗೌಡ, ತಾಲೂಕು ಸಂಚಾಲಕ ಟಿ.ಆರ್.ಸುರೇಶ್, ತಾಲೂಕು ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಆನಂದ್,ಮುಖಂಡರಾದ ವೀರಾಪುರ ಮಂಜುನಾಥ್, ಸುರೇಶ್, ವೆಂಟಕಸ್ವಾಮಿರೆಡ್ಡಿ, ಚಂದ್ರಪ್ಪ, ನಾರಾಯಣರೆಡ್ಡಿ, ಆಂಜಪ್ಪ, ಕೆ.ಎಂ.ರಾದಮ್ಮ, ಉಮಾದೇವಿ, ರಾಮಲಕ್ಷ್ಮಮ್ಮ, ಮಲ್ಲಿಕಾ, ಸರೋಜಮ್ಮ, ಲಕ್ಷ್ಮಿದೇವಿ, ಅಂಬಿಕ, ಮಂಜುಳ, ಲಕ್ಷ್ಮೀನರಸಮ್ಮ, ರಮಾದೇವಿ ಇದ್ದರು.