ಕುಂದ ಕನ್ನಡ ಭಾಷಾಭಿವೃದ್ಧಿ ಸಮಿತಿಯ ಸದಸ್ಯತ್ವ ಅಭಿಯಾನಕ್ಕೆ ಅಧ್ಯಕ್ಷ ಶ್ರೀ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಚಾಲನೆ ನೀಡಿದರು.
ಸದಸ್ಯತ್ವ ಸ್ವೀಕರಿಸುವ ಮೂಲಕ ಹಾಗೂ ಸಂಘಟನೆಯ ಪೋಷಕರಾಗುವ ಮೂಲಕ ಅವರು ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಯ ಉದ್ದೇಶಕ್ಕೆ ಶುಭ ಕೋರಿದರು.
“ಕುಂದಾಪ್ರ ಕನ್ನಡ ಭಾಷಾಭಿಮಾನಿಗಳು ಕುಂದಾಪ್ರ ಕನ್ನಡ ಸಾಹಿತ್ಯ, ಕಲೆ, ಜಾನಪದ ಸಂಸ್ಕøತಿ ಉಳಿಸುವಲ್ಲಿ ಒಗ್ಗೂಡಿ ನಮ್ಮತನ ಉಳಿಸಿ ಬೆಳೆಸಬೇಕು.” ಎಂದರು.
ಸಮಿತಿಯ ಖಜಾಂಚಿ ಕೆ. ಆರ್. ನಾಯ್ಕ, ಬಿ. ಅಪ್ಪಣ್ಣ ಹೆಗ್ಡೆಯವರಿಗೆ ಪ್ರಥಮ ರಶೀದಿ ಹಸ್ತಾಂತರಿಸಿದರು.
ಸಮಿತಿ ಸಂಚಾಲಕ ಯು. ಎಸ್. ಶೆಣೈ ಬಿ. ಅಪ್ಪಣ್ಣ ಹೆಗ್ಡೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ಬಿ. ಅಪ್ಪಣ್ಣ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಬಿ. ರಾಮಕಿಶನ್ ಹೆಗ್ಡೆ ಉಪಸ್ಥಿತರಿದ್ದರು.