ಕುಂದಾಪುರ: ಇತ್ತೀಚೆಗೆ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ಆಶ್ರಯ ದಲ್ಲಿ ತೆರದ ಮನೆ ಯೋಜನೆ ಅಡಿ ವಿದ್ಯಾರ್ಥಿಗಳನ್ನು ಬೇರೆ ಬೇರೆ ಕಡೆ ಹೊರ ಸಂಚಾರ ಕೈಗೊಂಡು ಬದುಕಿನ ಪಾಠ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಯಿತು. ತಲ್ಲೂರು ವಿಶೇಷ ಚೇತನ ಮಕ್ಕಳ ಶಾಲೆ, ಹಾಗೂ ಹಟ್ಟಿಯಂಗಡಿಯ ನಮ್ಮ ಭೂಮಿಯ ಶಾಲೆಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳಿಗೆ ಒಂದಷ್ಟು ಅನುಭವ ಪಡೆಯುವ ಅವಕಾಶ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಾಲಾ ಶಿಕ್ಷರು ಜೊತೆಗಿದ್ದರು.