ಕುಂದಾಪುರ, ಡಿ.17; ಕಥೊಲಿಕ್ ಸಭಾ ಪಿಯುಸ್ ನಗರ್ ಘಟಕ ಮತ್ತು ಕುಂದಾಪುರ ವಲಯ ಕಥೊಲಿಕ್ ಸಭಾ ಆಶ್ರಯದಲ್ಲಿ, ಶೆವೊಟ್ ಶ್ರತಿಷ್ಠಾನ್ ನ್ ಸಹಯೋಗದೊಂದಿಗೆ ಕುಂದಾಪುರ ವಲಯ ಮಟ್ಟದಲ್ಲಿ “ಸೌರ್ಹಾದ ಕ್ರಿಸ್ಮಸ್” ಕಾರ್ಯಕ್ರಮ ಪಿಯುಸ್ ನಗರ ಚರ್ಚಿನ ವಠಾರದಲ್ಲಿ ಡಿ.15 ರಂದು ಸಂಭ್ರದಿಂದ ನಡೆಯಿತು.
ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರಾದ ಅ।ವಂ।ಪೌಲ್ ರೇಗೊ ಅತಿಥಿಗಳೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿ ‘ಪ್ರೀತಿಯಿಂದ ಜೀವಿಸಿ, ಬಡವರಿಗೆ ಕಷ್ಟದಲ್ಲಿರುವರಿಗೆ, ಗೆಳೆಯರೊಂದಿಗೆ ಪ್ರೀತಿ ಹಂಚಿ ಈ ಕ್ರಿಸಮಸ್ ಹಬ್ಬದ ಉದ್ದೇಶ ಜ್ಯಾರಿ ಮಾಡಬಹುದು, ಡಾ।ಅಂಬೇಡ್ಕರ್ ಹೇಳಿದಂತೆ, ನಾವೆಲ್ಲ ಒಟ್ಟಾಗಿ ಬಾಳಿದರೆ ನಾವು ಪ್ರಪಂಚದಲ್ಲಿ ಶ್ರೇಷ್ಠತೆಯನ್ನು ಕಾಣಬಹುದು, ಯಾವ ಧರ್ಮವು ಶ್ರೇಷ್ಠವಲ್ಲ, ಧರ್ಮಕ್ಕಿಂತ ಪ್ರೀತಿಯೆ ಶ್ರೇಷ್ಠ; ಎಂದು ಸಂದೇಶ ನೀಡಿದರು.
ಮುಖ್ಯ ಅತಿಥಿ ಉಪನ್ಯಾಸಕರಾದ ಜಯಕರ ಶೆಟ್ಟಿ ಮಾತನಾಡಿ ‘ನಾವೆಲ್ಲ ಒಂದಾಗಿ ಜೀವಿಸುವುದು ಅಗತ್ಯ ಇದೆ, ಆದರೆ ನಮ್ಮಲ್ಲಿ ರಾಜಕಾರಣದಿಂದ ಮನಸುಗಳು ಒಡೆಯುವಂತ ಪ್ರಯತ್ನಗಳು ನೆಡೆಯುತ್ತಾ ಇವೆ, ನಾವು ಒಂದಾಗುವ ಕೊಂಡಿಗಳಾಗಬೇಕು, ಕ್ರಿಸ್ಮಸ್” ಸೌರ್ಹಾದಂತಹ ಹಬ್ಬಗಳು ಇನ್ನೂ ಹೆಚ್ಚಬೇಕು’ ಎಂದು ಹೇಳಿದರು. ಇನ್ನೊರ್ವ ಅತಿಥಿ ‘ಅಬ್ದುಲ್ ರೆಹಮಾನ್ ಸಖಾಫಿ,ಮಾತನಾಡಿ ಯಾವ ಧರ್ಮವು ಹಿಂಸೆಯನ್ನು ಪ್ರಚೋದಿಸುವುದಿಲ್ಲ, ಯಾರೋ ಕೆಲವರು ಧರ್ಮವನ್ನು ಅರ್ಥಯಿಸದೆ ಹಿಂಸಾರಕ್ಕೆ ಬೆಂಬಲ ಕೋಡುತ್ತಾರೆ. ಎಲ್ಲಾ ಧರ್ಮದಲ್ಲೂ ಪ್ರೀತಿಗೆ ಮುಖ್ಯ ಸ್ಥಾನವಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಪಿಯುಸ್ ನಗರ ಇಗರ್ಜಿಯ ಧರ್ಮಗುರು ವಂ।ಆಲ್ಬರ್ಟ್ ಕ್ರಾಸ್ತಾ ಮಾತನಾಡಿ ‘ಮನುಜರಲ್ಲಿ ದೇವರನ್ನು ಕಾಣು, ನಿನ್ನಂತೆ ಪರರನ್ನು ಪ್ರೀತಿಸು ಎಂದು ಯೇಸು ಕ್ರಿಸ್ತರ ಸಂದೇಶವಾಗಿದೆ, ಕ್ರಿಸ್ಮಸ್ ಅಂದರೆ, ದೇವರು ತನ್ನ ಪ್ರಜೆಗಳನ್ನು ಕಾಣಲು, ಮನುಷ್ಯರಾಗಿ ಹುಟ್ಟಿದ ಹಬ್ಬ, ಅವರು ಈ ಪ್ರಪಂಚದಲ್ಲಿ ಹುಟ್ಟಿದ್ದು, ಶಾಂತಿಗಾಗಿ, ಆತ ತನ್ನನ್ನು ಶಿಲುಭೆಗೇರಿಸುವಾಗಲು ಆತ ಶಾಂತಿಯ ಸಂದೇಶ ನೀಡಿದ, ಪುನರ್ತ್ಥಾನ ಗೊಂಡಾಗಲು ನೀಡಿದ್ದು ಶಾಂತಿಯ ಸಂದೇಶ. ನಾವು ಕಚ್ಚಾಡಿಕೊಂಡರೆ ದೇಶದ ಉದ್ದಾರ ಆಗುವುದಿಲ್ಲ, ನಾವು ಶಾಂತಿ ಸಮಾಧಾನ ಎಕತೆಯಿಂದ ಇದ್ದರೆ, ನಮ್ಮ ದೇಶದ ಅಭಿವ್ರದ್ದಿಯಾಗುತ್ತೆ’ ಎಂದು ಸಂದೇಶ ನೀಡಿದರು.
ಶೆಪೊಟ್ ಶ್ರತಿಷ್ಠಾನ್ (ರಿ.) ಕುಂದಾಪುರ ಇದರ ಅದ್ಯಕ್ಷರಾದ ವಿನೋದ್ ಕ್ರಾಸ್ಟೊ ಅವರು ಸಮಾಜದ ಅಶಕ್ತರಿಗೆ ಸಹಾಯಧನವನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕುಂದಾಪುಅರ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ, ಸಮಾಜ ಸೇವಕರಾದ ಡೇವಿಡ್ ಸಿಕ್ವೇರಾ, ಸಾಧು ಪೂಜಾರ್ಥಿ, ಆಶಾ ಕಾರ್ಯಕರ್ತೆ. ಕೆ.ಎಚ್. ಹುಸೈನಾರ್, ಆಪತ್ಭಾಂದವ. ಮತ್ತು ಸಿ.ಎ. ಮತ್ತು ಕರಾಟೆಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವೇದ ಮೂರ್ತಿ ಅರುಣ್ ಕುಮಾರ್ ದೇವಿದಾಸ್ ಭಟ್, ಸಿ.ಎಸ್ ಐ. ಚರ್ಚ್ ಕುಂದಾಪುರ ಇದರ ಪಾಸ್ಟರ್ ವಂ।ಇಮಾನ್ಯುವೇಲ್ ಜಯಕರ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಕಾರ್ಯದರ್ಶಿ ಗ್ರೆವಿನ್ ಪಸಾನ್ನ, ಸಿಸ್ಟರ್ ವೇರೋನಿಕಾ ಮಿನೇಜಸ್, ಶಾಂತಿ ಪಿರೇರಾ, ಸೋನಿ ಡಿಕೋಸ್ಟ, ಜೇಮ್ಸ್ ಡಿಮೇಲ್ಲೊ,ರೇಷ್ಮಾ ಡಿಸೋಜಾ ಲೀನಾ ತಾವ್ರೊ, ಸಿಂತಿಯಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರಿಂದ ಕವಾಲಿ, ಹಿಂದೂ ಬಾಂಧವರಿಂದ ಚೆಂಡೆ, ಕುಂದಾಪುರ ವಲಯದ ತಲ್ಲೂರು, ಪಿಯುಸ್ ನಗರ, ಕುಂದಾಪುರ, ಸಿ.ಎಸ್.ಐ. ಕುಂದಾಪುರ ಚರ್ಚಗಳಿಂದ ನ್ರತ್ಯ, ರೂಪಕ, ಕಿರು ನಾಟಕಗಳ ಸಾಂಸ್ಕ್ರತಿಕ ಪ್ರದರ್ಶನ ನೆಡೆಯಿತು. ಕಥೊಲಿಕ್ ಸಭಾ ಪಿಯುಸ್ ನಗರ್ ಘಟಕ ಅಧ್ಯಕ್ಷ ಅಲೆಕ್ಷ್ ಲುವೀಸ್ ಸ್ವಾಗತಿಸಿದರು. ಪ್ರಮೀಳಾ ಡೆಸಾ, ವಿಲ್ಫ್ರೇಡ್ ಡಿಲಿಮಾ, ರೋಶನ್ ಬರೆಟ್ಟೊ ನಿರೂಪಿಸಿದರು.