ಶ್ರೀನಿವಾಸಪುರ: ತಾಲ್ಲೂಕಿನ ಎನಮರೇಪಲ್ಲಿ ಗ್ರಾಮದ ಪಂಚಮುಖಿ ಅಂಜನೇಯಸ್ವಾಮಿ, ಮುಳಬಾಗಿಲು ರಸ್ತೆಯಲ್ಲಿ ನೆಲಸಿರುವ ಶ್ರೀಅಭಯಾಂಜನೇಯಸ್ವಾಮಿ, ಹೊಗಳಗೆರೆ ಕ್ರಾಸ್ನಲ್ಲಿ ನೆಲಸಿರುವ ವೀರಾಂಜನೇಯಸ್ವಾಮಿ, ಸೇರಿದಂತೆ ವಿವಿದ ದೇವಾಲಯಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಬೆಳಗ್ಗೆಯಿಂದಲೆ ದೇವರಿಗೆ ಅಭಿಷೇಕ ವಿಶೇಷ ಅಲಂಕಾರ, ಮಹಾ ಪೂಜೆ, ಮಂಗಳಾರತಿ ನೈವೇದ್ಯ ಸೇರಿದಂತೆ ವಿವಿದ ದಾರ್ಮಿಕ ಕಾರ್ಯಕ್ರಮಗಳು ವೈಶಿಷ್ಟ ಪೂರ್ಣವಾಗಿ ನಡೆದವು. ಹಾಗೆಯೆ ದೇವರಿಗೆ ವಿಶೇಷ ಹೂವಿನ ಅಲಂಕಾರ ಗ್ರೀನ್ ಸ್ಟೋನ್ ಅಲಂಕಾರ, ಚುಮಕೆ ಅಲಂಕಾರ, ಮಾಡಲಾಗಿತ್ತು. ಭಕ್ತಾಧಿಗಳು ಸಕಾಲಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನಿತರಾದರು. ಬಂದತಂಹ ಭಕ್ತರಿಗೆ ದೇವಾಲಯದ ಸಮಿತಿವತಿಯಿಂದ ಅನ್ನ ಸಂತರ್ಪಣೆ, ಲಾಡು, ತೀರ್ಥಪ್ರಸಾದವನ್ನು ಏರ್ಪಡಿಸಲಾಗಿತ್ತು. ಅಂಜನೇಯಸ್ವಾಮಿ ದೇವಾಲಯದ ಮಂದಿರಗಳಲ್ಲಿ ಭಜನೆ ಚಕ್ಕಲಕೋಲಾಟ ಹಮ್ಮಿಕೊಳ್ಳಲಾಗಿತ್ತು.. ಈ ಪೂಜಾ ಕಾರ್ಯಕ್ರಮಗಳನ್ನು ದೇವಾಲಯದ ಪ್ರಧಾನ ಅರ್ಚಕರಾದ ನಾಗರಾಜಸ್ವಾಮಿ, ಮಲ್ಲಿ, ಗುರುಪಾದಯ್ಯಶಾಸ್ತ್ರಿ, ಕೊಟ್ರಯ್ಯಶಾಸ್ತ್ರಿ, ಆದರ್ಶಶಾಸ್ತ್ರಿ, ಇವರ ಸಂಗಡಿಗರು ನಡೆಸಿಕೊಟ್ಟರು. ಹಾಗೆಯೆ ಅಭಯಾಂಜನೇಯಸ್ವಾಮಿಯ ಪ್ರಧಾನ ಅರ್ಚಕ ಶಿವಯೋಗಯ್ಯಶಾಸ್ತ್ರಿ, ವೀರಾಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪಾಳ್ಯ ಸುಂದರಪ್ಪ, ಮತ್ತು ದಾಸಪ್ಪ ಕುಟುಂಬದವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಪಂಚಮುಖಿ ಅಂಜನೇಯಸ್ವಾಮಿ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಜೆ. ಗೀತಾರಾಣಿ ಉಪಾಧ್ಯಕ್ಷ ಶಿವಶಂಕರ್.ಎಸ್.ಎನ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಕೇದರ್ನಾಥ್, ಹಾಗೂ ದೇವಾಲಯದ ಸಮಿತಿ ಸದಸ್ಯರು ಉಪಸ್ಥಿತರಿದ್ದರು.