ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದ ವಾರ್ಷಿಕ ಮಹೋತ್ಸವ ಹಾಗೂ 90 ನೇ ವರ್ಷದ ಸಂಭ್ರಮಾಚಾರಾಣೆಯು. ಡಿಸೆಂಬರ್ 11 ರಂದು ಬಹಳ ಅದ್ದೂರಿಯಾಗಿ ನಡೆಯಿತು.ದೇವಾಲಯವು 90 ವರ್ಷ ಪೂರೈಸಿದ ಸಂದರ್ಭದಲ್ಲಿ, ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಅತೀ ವಂದನೀಯ ಡಾ.ಎಲೋಶಿಯಸ್ ಪೌಲ್ ಡಿಸೋಜಾ ಪ್ರಧಾನ ಗುರುಗಳಾಗಿ ಆಗಮಿಸಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.
ದೇವಾಲಯವು 90 ನೇ ವರ್ಷದ ಸಂಭ್ರಮಾಚಾರಣೆ ಮಾಡುವ ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಆಶೀರ್ವಾದಗೈದು. ಶುಭಕೋರಿದರು.” ಮಕ್ಕಳನ್ನು ದೇವರ ಸೇವೆಗೆ ನಿಯೋಜಿಸಲು ಪೋಷಕರು ತಮ್ಮ ಮಕ್ಕಳನ್ನು ಉತ್ತೇಜಿಸಬೇಕು, ದೇವರ ಸೇವೆಗೆ. ಕರೆ ಬಂದಾಗ ಅವರನ್ನು ಕೈ ಹಿಡಿದು ಪ್ರೊತ್ಸಾ ಹಿಸಬೇಕು. ಯಾರು ದೇವರಲ್ಲಿ ಉದಾರಿಗಳಾಗುತ್ತಾರೋ, ಅವರು ಸಂಪೂರ್ಣವಾದ ಉದಾರಾತೆಯನ್ನು ಹೊಂದುತ್ತಾರೆ ಎನ್ನುವುದನ್ನು ಮರೆಯಬಾರದು. ದೇವರು ಇದುವರೆಗೆ ನಿಮ್ಮ ದೇವಾಲಯವನ್ನು. ಕಾಪಾಡಿದ್ದಾನೆ, ನಡೆಸಿದ್ದಾನೆ ಹಾಗೂ ಆಶೀರ್ಪದಿಸಿದ್ದಾನೆ. ಮುಂದೆಯೂ ಅವನು ಕಾಪಾಡಬೇಕು. ಪ್ರೀತಿಯ, ಒಗ್ಗಟ್ಟಿನ, ಒಬ್ಬರಿಗೊಬ್ಬರು ಆದರಿಸಿ, ಸುಧಾರಿಸಿ, ಸಹಾಯ ಮಾಡುವಂತಹ ದೇವಾಲಯ ಕಟ್ಟಲು ನಾವು ಮುನ್ನುಗ್ಗೋಣ. ಪ್ರತಿ ಭಾನುವಾರ. ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡು, ಆಶಕ್ತರಾಗಿರುವ, ಅವಶ್ಯಕತೆ ಇರುವ ನಿಮ್ಮ ನೆರೆ ಹೊರೆಯವರನ್ನು ನಿಮ್ಮ ತಮ್ಮ, ತಂಗಿ ಎಂದು ಭಾವಿಸಿ ನಿಮ್ಮ ಕೈಯೆಲ್ಲಾದಷ್ಟು ಸಹಾಯವನ್ನು ಮಾಡಲು ಪ್ರಯತ್ನಿಸಿ, ಜಗದ್ಗುರು ಪೋಷ್ ಫ್ರಾನ್ಸಿಸ್ ಹೇಳುವಂತೆ, ನಮ್ಮ. ಕುಟುಂಬಗಳನ್ನು ಪವಿತ್ರ ಕುಟುಂಬಗಳಾಗಿ ಪರಿವರ್ತಿಸೋಣ. ಮೇರಿ ಮಾತೆ ಹಾಗೂ ಸಂತ ಜೋಸೆಫರ ಆದರ್ಶಗಳನ್ನು. ಪಾಲಿಸೋಣ. ಮನೆಯಲ್ಲಿ ಜಪಸರ ಪ್ರಾರ್ಥನೆಯನ್ನು ತಪ್ಪದೆ ಮಾಡೋಣ ಎಂದರು. “
ಕುಂದಾಪುರ ವಲಯದ ಪ್ರಧಾನ ಧರ್ಮ ಗುರುಗಳಾದ ಅತೀ ವಂದನೀಯ ಫಾ. ಪೌಲ್ ರೇಗೋ ಬಲಿಪೂಜೆಯೆಲ್ಲಿ ಭಾಗವಹಿಸಿ. ಶುಭ ಕೋರಿದರು. ವಲಯದ ಧರ್ಮಗುರುಗಳು, ಧರ್ಮ ಭಗಿನಿಯರು ಪೂಜೆಯೆಲ್ಲಿ ಪಾಲ್ಗೊಂಡರು.
ತಲ್ಲೂರು ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜಾ ಬಿಷಪ್ ರವರಿಗೆ ಶಾಲು ಹೊದೆಸಿ. ಸನ್ಮಾನಿಸಿದರು ಹಾಗೂ ಸಹಕರಿಸಿದ ಸರ್ವರಿಗೂ ವಂದಿಸಿದರು. ಈ ಸಂದರ್ಭದಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಕ್ಯಾಲ್ವಿನ್ ಮೆಂಡೋನ್ಸ, ಕಾರ್ಯದರ್ಶಿ ಶ್ರೀಮತಿ ರೀನಾ ಮೆಂಡೋನ್ಸ, ಆಯೋಗದ ಸಂಚಾಲಕರಾದ ಶ್ರೀಮತಿ ನೀತಾ ಮೆಂಡೋನ್ಸ ಹಾಗೂ ಸರ್ವ ಸದಸ್ಯರು ಹಾಜರಿದ್ದರು.