ಶ್ರೀನಿವಾಸಪುರ : ರೈತರ ಪರವಾಗಿ ಕೆಲಸ ಮಾಡುವುದಕ್ಕೆ ಬೇಕಾದಷ್ಟು ಇದೆ. ಅದನ್ನ ಮಾಡುವುದು ಬಿಟ್ಟು ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ರಾಜ್ಯ ದಲಿತ ಮುಖಂಡ ಎನ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕು ದಲಿತ ಸಂಘದವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಅದನ್ನು ಬಿಟ್ಟು ಇಲ್ಲ ಸಲ್ಲದ ಗಲಾಟೆಗಳನ್ನು ಸೃಷ್ಟಿ ಮಾಡುವುದು ಸರಿಯಲ್ಲ. ಸಭ್ಯತೆಯೊಂದಿಗೆ ಹೋರಾಟ ಮಾಡಲಿ, ಚಳುವಳಿಗಾರರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು . ಚೌಕಟ್ಟುಗಳನ್ನು ಮೀರಿ ಸೋಮವಾರ ಪ್ರತಿಭಟನೆ ಮಾಡಿರುವುದು ಸರಿಯಲ್ಲ ಎಂದು ನುಡಿದರು. ಇಂದು ಈ ಘಟನೆಯು ಅಶಾಂತಿ ಕಾರಣವಾಗಿದೆ
ರಮೇಶ್ಕುಮರ್ ರವರು ಶ್ರೀನಿವಾಸಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಉದ್ದೇಶದಿಂದ ಪೈಲಟ್ ವಸತಿ ಯೋಜನೆಯಲ್ಲಿ 25 ಸಾವಿರ ಮನೆಗಳನ್ನು ತಂದು ಗುಡಿಸಲು ಮುಕ್ತ ಕ್ಷೇತ್ರವನ್ನು ಮಾಡಲು ಉದ್ದೇಶಿಸಿದ್ದರು ಹಾಗು ಜಿಲ್ಲೆ ಗೆ ಕೆಸಿ ವ್ಯಾಲಿ ನೀರು ತರುವುದರ ಮೂಲಕ ಶ್ವಾಸತ ನೀರಿಗಾಗಿ ಶ್ರಮಪಟ್ಟಿದ್ದಾರೆ , ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ಮಾಡುವ ಯೋಜನೆ ಜಾರಿಗೆ ತರುವಲ್ಲಿ ರಮೇಶ್ಕುಮಾರ್ ರವರ ಶ್ರಮವಿದೆ. ಮಾವು ಮಾರಕಟ್ಟೆ ತರುವುದರ ಮೂಲಕ ರೈತ ಪರವಾಗಿ ಕೆಲಸ ಮಾಡಿದ್ದಾರೆ. ಹಾಗು ಅನೇಕ ಯೋಜನೆಗಳನ್ನು ತಂದು ಜನಪರ ಕೆಲಸಮಾಡಿದ್ದಾರೆ.
ದಲಿತ ಮುಖಂಡ ಉಪ್ಪರಪಲ್ಲಿ ತಿಮ್ಮಯ್ಯ ಮಾತನಾಡಿ ರೈತ ಸಂಘವು ಸೋಮವಾರ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಅಂಬೇಡ್ಕರ್ ಬಾವ ಚಿತ್ರವನ್ನು ಇಟ್ಟು ಅವರಿಗೆ ಅಪಮಾನ ವೆಸಗಿದ್ದಾರೆ. ಅಲ್ಲದೆ ರಮೇಶ್ಕುಮಾರ್ ಬಾವ ಚಿತ್ರವನ್ನು ಏತಕ್ಕಾಗಿ ಇಡಬೇಕು ಅವರ ಹೆಸರಿಗೆ ತೇಜೋವಧೆ ಮಾಡುವ ಉದ್ದೇಶದಿಂದ ಇಡಲಾಗಿದೆ ಎಂದು ಆರೋಪಿಸಿ, ರೈತ ಮುಖಂಡ ದಿ.ನಂಜುಡಸ್ವಾಮಿ ರವರ ಬಾವಚಿತ್ರವನ್ನ ಇಡಲಾಗಿತ್ತು ಅವರಿಗೆ ಈ ಸಂಘಕ್ಕೂ ಸಂಬಂದವೇ ಇಲ್ಲ. ಎಂದರು.
ನಾರಾಯಣಗೌಡ ವಿವಾದಗಳನ್ನು ಸೃಷ್ಟಿ ಮಾಡಿ ಸಮಾಜವನ್ನು ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ ಎಂದು ಖಂಡನೆ ಮಾಡಿ ಇದರ ವಿರುದ್ದ ಎಲ್ಲಾ ದಲಿತ ಸಂಟನೆಗಳು ಹೋರಾಟ ಮಾಡುತ್ತವೆ ಎಂದು ಎಚ್ಚರಿಸಿದರು.
ದಲಿತ ಮುಖಂಡರಾದ ರಾಮಾಂಜಮ್ಮ , ಕೋಸ್ಸಂದ್ರ ರೆಡ್ಡಪ್ಪ, ವರ್ತನಹಳ್ಳಿ ವೆಂಕಟೇಶ್, ವಿ.ಮುನಿಯಪ್ಪ, ಮುನಿವೆಂಕಟಪ್ಪ, ಶ್ರೀನಿವಾಸ್, ವಾಸು, ನಾರಾಯಣಸ್ವಾಮಿ, ನವೀನ್ಕುಮಾರ್, ಲಕ್ಷ್ಮೀಪತಿ ಉಪಸ್ಥಿತಿರಿದ್ದರು.