ಶ್ರೀನಿವಾಸಪುರ,ಡಿ.06: ನ.6 ರ ಜಂಟಿ ಸರ್ವೇ ಮುಂದೂಡಲು ಕಾರಣ ಸಾರ್ವಜನಿಕವಾಗಿ ಕಂದಾಯ ಅರಣ್ಯಾಧಿಕರಿಗಳು ಬಹಿರಂಗಗೊಳಿಸಬೇಕು ಹಾಗೂ ಜಿಗಲಕುಂಟೆ ಅರಣ್ಯ ಒತ್ತುವರಿ ತೆರೆವುಗೊಳಿಸಲು ದಿನಾಂಕ ನಿಗದಿ ಪಡಿಸುವಂತೆ ಡಿ.9 ರ ಸೋಮವಾರ ತಾಲ್ಲೂಕು ಕಚೇರಿಯ ಮುಂದೆ ರೈತ ಸಂಘದಿಂದ ಬಾಬಾ ಸಾಹೇಬ್ ಆಂಬೇಡ್ಕರ್ ಪೋಟೋ ಸಮೇತ ಬೆತ್ತಲೆ ಉಪವಾಸ ಆಹೋರಾತ್ರಿ ದರಣಿ ಮಾಡಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಕಂದಾಯ ಮಂತ್ರಿಗಳೇ ಅರಣ್ಯ ಸಚಿವರೇ ಎಲ್ಲಿದ್ದೀರಪ್ಪಾ ಸಾವಿರಾರು ಎಕರೆ ಬಡ ರೈತರ ಅರಣ್ಯ ಭೂಮಿ ನೂರಾರು ಜೆ.ಸಿ.ಬಿಗಳ ಮೂಲಕ ಒತ್ತುವರಿ ತೆರೆವುಗೊಳಿಸಿ ಬೆಳೆ ಪಸಲು ತೆಗೆದುಕೊಳ್ಳಲು ಅವಕಾಶ ನೀಡದ ಅರಣ್ಯ ಅಧಿಕಾರಿಗಳಿಗೆ ಕನಿಷ್ಠ ಒಂದು ಪೋನ್ ಕರೆ ಮಾಡಿ ಸಮಯವಕಾಶ ಕೊಡಲು ಯೋಗ್ಯತೆಯಿಲ್ಲದ, ಮಾತು ಬರದ ಮೂಕರಾಗಿದ್ದು ಸಚಿವರುಗಳೇ ಬಲಾಡ್ಯ ರಮೇಶ್ ಕುಮಾರ್ರವರ ಅರಣ್ಯ ಭೂಮಿ ಒತ್ತುವರಿ ತೆರೆವು ಮಾಡಲು ಮುಂದಾದರೆ ಅಧಿಕಾರಿಗಳಿಗೆ ಕರೆ ಮಾಡಿ ನಿಲ್ಲಿಸುವಂತೆ ಆದೇಶ ಮಾಡುತ್ತಿರಲ್ಲಾ ನಿಮ್ಮ ಬುದ್ದಿವಂತಿಕೆಗೆ ಬಡ ರೈತರ ಬದುಕು ಬಲಿ ಬೇಕೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಮಾತನಾಡಿದ ರವರು ತಾಲ್ಲೂಕು ದಂಡಾಧಿಕಾರಿಗಳೇ, ಅರಣ್ಯಾಧಿಕಾರಿಗಳೇ, ಬಡವರ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರೆವುಗೊಳಿಸುವಾಗ ಜಂಟಿ ಸರ್ವೇ ಇಲ್ಲ, ತಾಂತ್ರಿಕ ಲೋಪದೋಷವಿಲ್ಲ, ಆದರೆ ಬಲಾಡ್ಯ ರಾಜಕೀಯ ಹಿನ್ನಲೆವುಳ್ಳ ಮಾಜಿ ಸ್ಪೀಕರ್ ರಮೇಶ್ಕುಮಾರ್ರವರು ಒತ್ತುವರಿ ಮಾಡಿಕೊಂಡಿರುವ ಜಿಗಲಕುಂಟೆ ಹೊಸಹುಡ್ಯ ಅರಣ್ಯ ಸರ್ವೇ ನಂ.1 ಮತ್ತು 2ರಲ್ಲಿನ 61 ಎಕರೆ ತೆರೆವುಗೊಳಿಸಲು ಜಂಟಿ ಸರ್ವೇ ಬೇಕು ಜೊತೆಗೆ ತಾಂತ್ರಿಕ ಲೋಪದೋಷ ದಾಖಲೆಗಳ ನಾಪತ್ತೆ ಇದು ಯಾವ ನ್ಯಾಯ ಸ್ವಾಮಿ ಬೆಕ್ಕಿಗೆ ಗಂಟೆ ಕಟ್ಟುವ ನ್ಯಾಯವೇ ಎಂದು ರೈತ ವಿರೋದಿ ಕಂದಾಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ 2013ರಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶದಂತೆ 61 ಎಕರೆ ಅರಣ್ಯ ಭೂ ಒತ್ತುವರಿ ತೆರೆವುಗೊಳಿಸಿ ಸಂವಿಧಾನದ ಕಾನೂನಿನಲ್ಲಿ ಬಡವರಿಗೆ, ಶ್ರೀಮಂತರಿಗೆ ಒಂದೇ ನ್ಯಾಯ ಎಂದು ಸಾಬೀತು ಮಾಡಿ ಅದನ್ನು ಬಿಟ್ಟು ಬಲಾಡ್ಯರನ್ನು ರಕ್ಷಣೆ ಮಾಡಲು ಬಡವರ ಮೇಲೆ ಒತ್ತುವರಿ ಎಂಬ ಆರೋಪ ಮಾಡಿ ದಬ್ಬಾಳಿಕೆಯನ್ನು ಕಂದಾಯ ಸರ್ವೇ ಅರಣ್ಯಾಧಿಕಾರಿಗಳು ನಿಲ್ಲಿಸುವ ಜೊತೆಗೆ ಈಗಾಗಲೇ ಒತ್ತುವರಿ ತೆರೆವುಗೊಳಿಸಿರುವ ಜಮೀನನ್ನು ವಾಪಸ್ ನೀಡಿ ಎಂದು ಒತ್ತಾಯಿಸಿದರು.
ಕಂದಾಯ ಸರ್ವೇ ಅರಣ್ಯ ಅಧಿಕಾರಿಗಳಿಗೆ ತಾಕತ್ತಿದ್ದರೆ ನ.6ರಂದು ನಿಗದಿ ಆಗಿದ್ದ ಜಂಟಿ ಸರ್ವೇಯನ್ನು ಮುಂದೂಡಲು ಯಾರ ಒತ್ತಡ ಇದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಜೊತೆಗೆ ಜಂಟಿ ಸರ್ವೇ ಒತ್ತುವರಿ ಕಾರ್ಯಚರಣೆಗೆ ಒಂದೇ ದಿನಾಂಕ ನಿಗದಿ ಮಾಡಬೇಕೆಂದು ಡಿ.9ರ ಸೋಮವಾರ ತಾಲ್ಲೂಕು ಕಚೇರಿ ಮುಂದೆ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಬಾಬಾ ಸಾಹೇಬ್ ಆಂಬೇಡ್ಕರ್ ರವರ ಪೋಟೋ ಸಮೇತ ಬೆತ್ತಲೆ ಹೋರಾಟ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಜೊತೆಗೆ ದರಣಿ ಸಮಯದಲ್ಲಿ ಅಹಿತಕರ ಘಟನೆಗಳು ನಡೆದರೆ ಇದಕ್ಕೆ ಕಂದಾಯ ಅರಣ್ಯಾಧಿಕಾರಿಗಳೇ ನೇರ ಕಾರಣ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಗೀರೀಶ್, ಆಂಜಿನಪ್ಪ, ಮುಂತಾದವರಿದ್ದರು.