ಕುಂದಾಪುರ,ಡಿ.7: ಪ್ರತಿಷ್ಟಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷೀಕೋತ್ಸವವು ಡಿ.6 ರಂದು ಶಾಲಾ ಮೈದಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ವಾರ್ಷೀಕೋತ್ಸವದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ।ಪೌಲ್ ರೇಗೊ ‘ಸತತ ಎಳು ವರ್ಷಗಳಿಂದ ಮುಖ್ಯ ಮತ್ತು ಸಹ ಶಿಕ್ಷಕರ ಶ್ರಮದಿಂದ ಎಸ್.ಎಸ್.ಎಲ್.ಸಿ. ಯಲ್ಲಿ ಶೇ. ೧೦೦ ಫಲಿತಾಂಶ ಪಡೆದಿದೆಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇಲ್ಲಿ ಶಿಕ್ಷಣದೊಂದಿಗೆ ಮೌಲ್ಯಯುತ ಸಂಸ್ಕಾರಗಳನ್ನು ಬೋಧಿಸಲಾಗುತ್ತದೆ. ಮಕ್ಕಳ ಕಲಿಕೆಗಾಗಿ, ಪೋಷಕರು ಮನೆಯಲ್ಲಿ ಉತ್ತಮ ವಾತವರಣ ಉಂಟುಮಾಡಿ, ಮಕ್ಕಳ ಮೆಲೆ ನಂಬಿಕೆ ಇಟ್ಟು ಅವರನ್ನು ಪ್ರೀತಿಸಬೇಕು, ಬೇರೆಯವರೊಂದಿಗೆ ಅವರನ್ನು ತುಲನೆ ಮಾಡಬಾರದು, ಮಕ್ಕಳ ಮೇಲೆ ಒತ್ತಡ ಹೇರಬಾರದು, ಮಕ್ಕಳು ಮಾಡಿದ ತಪ್ಪನ್ನು ಪ್ರೀತಿಯಿಂದ ತಿದ್ದಿ ಸರಿಪಡಿಸಬೇಕು, ಮಕ್ಕಳೊಂದಿಗೆ ಸಮಯ ಕಳೆಯಿರಿ, ಮಕ್ಕಳಿಗೆ ಆಸ್ತಿ ಮಾಡಿಇಡಬೇಡಿ, ಮಕ್ಕಳನ್ನೆ ಆಸ್ತಿಯನ್ನಾಗಿಸಿ, ಹಾಗೇ ನಮ್ಮ ವಿಧ್ಯಾ ಸಂಸ್ಥೆಯಲ್ಲಿ ಕಲಿಯುವ ಎಲ್ಲಾ ಮಕ್ಕಳು ನಮ್ಮ ಶಾಲೆಯ ಆಸ್ತಿ’ ಎಂದು ತಿಳಿಸುತ್ತಾ ವಾರ್ಷಿಕೋತ್ಸವಕ್ಕೆ ಶುಭಾಷಯಗಳನ್ನು ಕೋರಿದರು.
ಮುಖ್ಯ ಅತಿಥಿ ಲಕ್ಷ್ಮಿ ಸೋಮ ಬಂಗೆರ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ನಾಯಕ್ “ಪ್ರಾಣಿಗಳಲ್ಲಿ ಮನುಷ್ಯ ಒರ್ವ ಕ್ರೂರ ಪ್ರಾಣಿ, ಶಿಕ್ಷಣದಿಂದ ಆತ ಪಶುತ್ವದಿಂದ ಮನುಷ್ಯತ್ವ ಪಡೆಯುತ್ತಾನೆ. ಕೇವಲ ಅಕ್ಷರ ಜ್ನಾದಿಂದ ವಿದ್ಯಾವಂತನಾಗುವುದಿಲ್ಲ. ಸಂಸ್ಕಾರ ಆಚಾರ ವಿಚಾರವನ್ನು ತಮ್ಮದಾಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಮತ್ತೊರ್ವ ಅತಿಥಿ ಮಂಗಳೂರು ವಿಶ್ವ ವಿದ್ಯಾಯಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೊನ್ಸಾ ವಿದ್ಯಾರ್ಥಿಗಳಿಗೆ ಹಲವಾರು ಉಪಯುಕ್ತ ಮಾಹಿತಿ ನೀಡಿದರು.
ಅತಿಥಿಗಳನ್ನು, ಧರ್ಮಗುರು ಅ|ವಂ।ಪೌಲ್ ರೇಗೊರವರನ್ನು, ರುಪ್ಸಾ ಸಂಘಟನೆಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿಯವರನ್ನು, ಉತ್ತಮ ಅಂಕ ಪಡೆದ ಮತ್ತು ವಿವಿಧ ರೀತಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಆಟ ಪಾಟಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಮನೋರಂಜನೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ರೋಹನ್, ಅಕ್ಷತಾ ದೇವಾಡಿಗ, ಶ್ರವಣ್, ರೋಶ್ಣಿ,ಪ್ರಿನ್ಸಟನ್, ಪ್ರಕ್ರತಿ ಜೆಸ್ಟ ನೆಡೆಸಿಕೊಟ್ಟರು. ವಿದ್ಯಾರ್ಥಿಗಳು ಕಿರು ನಾಟಕ ಕುಣಿತ, ಯಕ್ಷಗಾನ, ನ್ರತ್ಯಗಳನ್ನು ಪ್ರದರ್ಶಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ಪವರ್ ಪಾಂಯ್ಟ್ ಮೂಲಕ ಪ್ರಸ್ತೂತ ಪಡಿಸಿ, ವಂದಿಸಿದರು. ಶಿಕ್ಷಕಿ ಸಿಸ್ಟರ್ ಜೂಲಿಯೆಟ್ ರೆಬೆಲ್ಲೊ ದಾನಿಗಳ ಪಟ್ಟಿಯನ್ನು ವಾಚಿಸಿದರು. ಸಭಾ ಕಾರ್ಯಕ್ರಮವನ್ನು ಶಿಕ್ಷಕಿಯರು ನೆಡೆಸಿಕೊಟ್ಟರು. ವೇದಿಕೆಯಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಶಾಲಾ ನಾಯಕಿ ಅಂಜಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸ್ವಾಗತಿಸಿದರು.