

ಶ್ರೀನಿವಾಸಪುರ : ವಾಹನ ಚಾಲಕರು ಕಡುಬಡತನ ಕುಟುಂಬದವರು . ಸಾಮಾನ್ಯವಾಗಿ ವಾಹನ ಚಾಲಕರು ಕುಟುಂಬದ ನಿರ್ವಹಣೆಗಾಗಿ ತುಂಬಾ ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ. ಮುಖ್ಯವಾಗಿ ಚಾಲಕರು ನಿಮ್ಮನ್ನೇ ನಂಬಿಕೊಂಡು ಕುಟುಂಬವಿದ್ದು, ವಾಹನ ಚಾಲನೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಚಾಲನೆಮಾಡಬೇಕು .
ಚಾಲಕರು ಎಚ್ಚರ ತಪ್ಪಿ ವಾಹನ ಚಾಲನೆ ಮಾಡಿದರೆ ನಿಮ್ಮ ಕುಟುಂಬವು ಬೀದಿಗೆ ಬೀಳುತ್ತದೆ ಆದ್ದರಿಂದ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ. ಗೊರವನಕೊಳ್ಳ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ ವತಿಯಿಂದ ವಾಹನ ಚಾಲಕರಿಗೆ ಅರಿವು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಣಿಜ್ಯ ವಾಹನ ಚಾಲಕರು, ಆಟೋ , ಟ್ಯಾಕ್ಸಿ, ಲಾರಿ ಮತ್ತು ಬಸ್ ಚಾಲಕರು, ನಿರ್ವಾಹಕರು ಸ್ವಚ್ಚತ್ತಾ ಕಾರ್ಮಿಕರು ಹಾಗು ಮೆಕಾನಿಕ್ ಮತ್ತು ಪಂಚ್ಚರ್ ಅಂಗಡಿ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆ ಜಾರಿ ಗೊಳಿಸಿದ್ದು ಕಡ್ಡಾಯವಾಗಿ ನೊಂದಣಿ ಮಾಡಿಸುವಂತೆ ತಾಲೂಕು ಕಾರ್ಮಿಕ ನಿರೀಕ್ಷಕಿ ಆಶಾರಾಣಿ ಮಾಹಿತಿ ನೀಡಿದರು.
ಆರ್ಟಿಓ ಕಚೇರಿಯ ಅಧೀಕ್ಷಕರಾದ ದೇವರಾಜು ಮಾತನಾಡಿ ವಾಹನಕ್ಕೆ ಸಂಬಂದಪಟ್ಟ ಮತ್ತು ಚಾಲಕರಿಗೆ ಸಂಬಂದಪಟ್ಟ ಡಿಸಿ, ಆರ್ಸಿ, ಎಫ್ಸಿ ಮತ್ತು ಇತರೆ ಸಾರಿಗೆ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್ಕಂದಾರ ಮಾತನಾಡಿ ಕಳೆದ ೨೫ ವರ್ಷಗಳ ಹೋರಾಟ ಫಲವಾಗಿ ಈಗ ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಸಾಮಾಜಿಕ ಭದ್ರತಾ ಮಂಡಲಿಯನ್ನ ೨೦೦೪ ರಲ್ಲಿ ರಚನೆ ಮಾಡಿದ್ದು , ಇದರ ಅಡಿಯಲ್ಲಿ ೨೦೧೦ ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಅಪೇಕ್ಷಿತ ಪರಿಹಾರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚನೆ ಮಾಡಿದೆ.
ಚಾಲಕರು , ನಿರ್ವಾಹಕರು , ಸ್ವಚ್ಚತಾ ಕಾರ್ಮಿಕರು, ಮತ್ತು ಮೆಕಾಮಿಕ್ ಹಾಗು ಪಂಚಕ ಅಂಗಡಿ ಕಾರ್ಮಿಕರಿಗೆ ಈ ಯೋಜನೆ ವಿಸ್ತರಿಸಿದ್ದು, ಚಾಲಕರು ಆರೋಗ್ಯ ರಕ್ಷಣೆ, ಮಕ್ಕಳ ವಿದ್ಯಾಬ್ಯಾಸಕ್ಕೆ ಬೇಕಾದ ನೆರವು ಪಡೆಯಲು ತಮ್ಮ ಹೆಸರು ಹಾಗು ಇತರೆ ದಾಖಲೆಗಳ ಬಗ್ಗೆ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿ ನೋಂದಣಿ ಪಡೆಯುವಂತೆ ತಿಳಿಸಿದರು.
ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ತಾಲೂಕು ಅಧ್ಯಕ್ಷ ಎ.ಎನ್.ಜಗದೀಶ್, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ವೇಣು, ಪದಾಧಿಕಾರಿಗಳಾದ ರಿಜ್ವಾನ್, ದೇವೇಂದ್ರ, ಜಮೀರ್ ಮುಜಾಯಿದ್, ಶಿವ, ಜೆ.ವಿ.ಕಾಲೋನಿ ವೆಂಕಟೇಶ್, ಕಲ್ಲೂರು ನಾರಾಯಣಸ್ವಾಮಿ, ಅಜುಂ ಇದ್ದರು.