ಶ್ರೀನಿವಾಸಪುರ : ನಾರಮಾಕಲಪಲ್ಲಿ ಗ್ರಾಮದ ಕಾಲುವೆ ಕಾಮಗಾರಿ ನಡೆಸಲು ಜನವರಿ 17 -2024 ನನಗೆ ಆದೇಶ ಸಂಬಂದಪಟ್ಟ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸಂಬಂದಿಸಿದ ಇಂಜಿನೀಯರ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಅದರಂತೆ ಕಾಮಗಾರಿ ಮಾಡಲಾಗಿದೆ ಎಂದು ಗುತ್ತಿಗೆದಾರ ವಳಗೇರನಹಳ್ಳಿ ಶಿವಾರೆಡ್ಡಿ ಮಾಹಿತಿ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪ್ರತಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ತಾಲೂಕಿನ ರೋಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಮಾಕಲಪಲ್ಲಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನರೇಗಾ ಯೋಜನೆಯಡಿಯಲ್ಲಿ ಮಾಡಿರುವ ಕಾಮಗಾರಿಗೆ ಪುನಃ ಅದೇ ಕಾಮಗಾರಿಗೆ ಶಾಸಕರ ಅನುದಾನದಲ್ಲಿ ಪುನಃ 5 ಲಕ್ಷ ಹಣ ಪಡೆದಿರುವ ಬಗ್ಗೆ ನಾರಮಾಕಲಪಲ್ಲಿ ಗ್ರಾಮಸ್ಥರಾದ ವೆಂಕಟರಾಮರೆಡ್ಡಿ, ಅನಿಲ್ಕುಮಾರ್, ಹರೀಶ್ ಆರೋಪಿಸಿರುವುದು ಸುಳ್ಳು ಎಂದು ನುಡಿದರು.
ಇದೇ ಸಮಯದಲ್ಲಿ ಕಾಮಾಗಾರಿಗೆ ಸಂಬಂದಿಸಿದ ದಾಖಲೆಗಳ ಸಮೇತ ಮಾಹಿತಿ ನೀಡುತ್ತಾ ನಾನು ಯಾವುದೇ ಕಾರಣಕ್ಕೂ ಶಾಸಕ ಜಿ,ಕೆ,ವೆಂಕಟಶಿವಾರೆಡ್ಡಿ ರವರಿಂದ ಅಧಿಕಾರಿಗಳಿಗೆ ಒತ್ತಡ ಹಾಕಿ ನಾನು ಬಿಲ್ಲುನ್ನು ಮಾಡಿಸಿಕೊಂಡಿಲ್ಲ ಇದು ಸತ್ಯಕ್ಕೆ ದೂರ. ಸಂಬಂದ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿ ಅಳತೆ ಮಾಡಿ ಬಿಲ್ಲು ಬಿಡುಗಡೆ ಮಾಡಿದ್ದಾರೆ ಹೊರತು ಶಾಸಕರ ಹಾಗು ಯಾವುದೇ ಮುಖಂಡರ ಕೈವಾಡವಿಲ್ಲ ಅಂದು ಮಾಹಿತಿ ನೀಡಿದರು. ನಾನು ನಿಯತ್ತಾಗಿ ಕಾಮಗಾರಿ ಮಾಡಿರುವುದರಿಂದ ದೈರ್ಯವಾಗಿ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನ್ನ ಏಳಿಗೆಯನ್ನ ಸಹಿಸಲಾರದ ಕೆಲ ವ್ಯಕ್ತಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಬಗ್ಗೆ ಯಾರು ಆರೋಪ ಮಾಡಿದ್ದಾರೆ. ಅವರು ಗ್ರಾಮಪಂಚಾಯಿತಿ ಕಚೇರಿಗಳಲ್ಲಿ ಅಧಿಕಾರಿಗಳ ಮೇಲೆ ದಮಕಿ ಹಾಕಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳು ಪ್ರವೃತ್ತಿ. ಅವರದು ಎಂದು ಆರೋಪಿಸಿದರು.
ಈ ಸಮಯದಲ್ಲಿ ಮುಖಂಡರಾದ ತೂಪಲ್ಲಿ ಮಧುಸೂದನರೆಡ್ಡಿ, ಆನಂದರೆಡ್ಡಿ ಇದ್ದರು.