ಶ್ರೀನಿವಾಸಪುರ : ಕನ್ನಡಬಾಷೆಯ ಬಗ್ಗೆ ಬಾಷಾಭಿಮಾನವಿರಲಿ ಆದರೆ ದುರಾಭಿಮಾನಬೇಡ ದೀಪದಿಂದ ದೀಪ ಬೆಳಗುವಂತೆ ಕನ್ನಡ ಭಾಷೆ ಪ್ರಪಂಚದಾದ್ಯಂತ ಪಸರಿಸಲಿ ಕನ್ನಡ ಭಾಷೆ ಶ್ರೀಮಂತವಾಗಿದ್ದು ಇದನ್ನು ಉಳಿಸಿ ಬೆಳಸುವ ಹೊಣಗಾರಿಕೆ ನಮ್ಮಲ್ಲೆರ ಮೇಲಿದೆ ಎಂದು ಸಿಪಿಐ ಮಹಮದ್ಗೊರವನಕೊಳ್ಳ ತಿಳಿಸಿದರು.
ಪಟ್ಟಣದ ಜೈ ಕರ್ನಾಟಕ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರ ಸಂಘದವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು ನಮ್ಮ ನಾಡಿನಲ್ಲಿ ಗಂಗರು, ಕದಂಬರು, ಚೋಳರು ಅನೇಕ ರಾಜಮನತನರು ಆಳ್ವಿಕೆ ಮಾಡಿ ಕರ್ನಾಟಕದ ಏಕೀಕರಣಕ್ಕೆ ಅನೇಕ ಮಹನೀಯರು ಶ್ರಮಿಸಿದ್ದಾರೆ ಇವರ ಆದಿಯಲ್ಲಿ ನಾವೆಲ್ಲರೂ ಕನ್ನಡ ಉಳಿವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕೆಂದರು. ನಮ್ಮ ಕರ್ನಾಟಕದಲ್ಲಿ ಅನೇಕ ರಾಜ ಮನತನೆಗಳು ಆಳ್ವಿಕೆ ನಂತರ ೮ ಮಂದಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಇವರೆಲ್ಲರೂ ರಚಿಸಿದ ಕವನ ಸಂಕಲನಗಳು ನಮ್ಮ ಪೀಳಿಗೆಗೆ ಆದರ್ಶಪ್ರಾಯವಾಗಿವೆ. ಆಟೋ ಚಾಲಕರು ಒಂದಾಗಿ ರಾಜ್ಯೋತ್ಸವ ಆಚರಿಸುತ್ತಿರುವುದು ಅಭಿನಂದನೆಯ ವಿಷಯವಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಾತನಾಡಿ ಈಗಾಗಲೇ ಪಟ್ಟಣದ ಸಮಸ್ಯೆಗಳ ನಿಮ್ಮ ಮನವಿಯಂತೆ ನನ್ನ ಗಮನದಲ್ಲಿದ್ದು ೨ ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಚೆರ್ಚಿಸಿ ಗುಂಡಿಗಳು ಮುಚ್ಚಿಸಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಗಳು ಆಳವಡಿಸಲು ಕಾರ್ಯಯೋನ್ಮೂಖವಾಗುತ್ತೇನೆಂದು ತಿಳಿಸಿದರು.
ಸಮಾಜ ಸೇವಕ ಕೆ.ಕೆ ಮಂಜುನಾಥ್ ಮಾತನಾಡಿ ತುರ್ತುಸಮಯದಲ್ಲಿ ನಮ್ಮ ಆಟೋ ಚಾಲಕರು ಅನೇಕ ಜನರ ಪ್ರಾಣಗಳನ್ನು ಉಳಿಸುವುದರಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಚಾಲಕರು ಜನತೆಯೊಂದಿಗೆ ಉತ್ತಮ ಬಾಂದವ್ಯ ಇಟ್ಟಿಕೊಂಡಿದ್ದಾರೆ ಕಲಹಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ನಿಮ್ಮ ಕಾರ್ಯ ಈಗೆ ಮುಂದುವರಿಯಲಿ ಎಂದರು.
ನವ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದೀಕ್ ಅಹಮದ್ ಮಾತನಾಡಿ ಆಟೋ ಚಾಲಕರಿಗೆ ಸಮಯ ಪ್ರಜ್ಞೆ ಮುಖ್ಯವಾಗಿದ್ದು, ನಿಮ್ಮ ಶ್ರಮ ಶ್ಲಾಘನೀಯವಾಗಿದೆ ನೀವು ಒಂದು ತುತ್ತು ಅನ್ನ ಉಂಡುವುದು ಕಡಿಮೆಯಾದರೂ ಪರವಾಗಿಲ್ಲ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿಬೇಕೆಂದು ತಿಳಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಜಗಧೀಶ್ ಮಾತನಾಡಿ ನಮ್ಮ ಈ ಕಾರ್ಯಕ್ರಮ ನವಂಬರ್ ತಿಂಗಳಿಗೆ ಸೀಮತವಾಗಿದೆ ಎಲ್ಲರ ಮನೆಗಳಲ್ಲಿ ಕನ್ನಡ ಆಡು ಭಾಷೆ ಆಗಬೇಕು ಕನ್ನಡ ಉಳಿವಿಗಾಗಿ ಶ್ರಮಿಸಬೇಕು ಜೊತೆಗೆ ಪಟ್ಟಣದಲ್ಲಿ ಪ್ರಮುಖ ರಸ್ತೆಗಳಲ್ಲಿ ಹಳ್ಳ-ತಳ್ಳಗಳ ಗುಂಡಿಗಳು ಹೆಚ್ಚಾಗಿದ್ದು ಅಪಘಾತಗಳಿಗೆ ಮತ್ತು ಆಟೋಗಳು ದುರಸ್ತಿಗೆ ದಾರಿ ಮಾಡಿಕೊಟ್ಟಿದೆ ಕೋಡಲೆ ಇವುಗಳನ್ನು ಸರಿಪಡಿಸಬೇಕೆಂದು ಪುರಸಭಾ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಇದೇ ವೇಳೆಯಲ್ಲಿ ಆಟೋ ಚಾಲಕರ ಸಂಘದವತಿಯಿಂದ ನೂತನ ಪುರಸಭೆ ಅಧ್ಯಕ್ಷ ಭಾಸ್ಕರ್, ಉಪಾಧ್ಯಕ್ಷಣಿ ಸುನಿತಾ, ಕೆ.ಕೆ. ಮಂಜುನಾಥ್ ಗಣ್ಯರನ್ನು ಗೌರವಿಸಲಾಯಿತು. ಪುರಸಭಾ ಮಾಜಿ ಅಧ್ಯಕ್ಷ ಅನೀಸ್ ಸದಸ್ಯರಾದ ಉನಿಕಿಲಿ ನಾಗರಾಜ್, ತಜಮುಲ್, ಮಾಜಿ ಮಹಮದ್ ಆಲಿ, ನಾಮನಿ ಸದಸ್ಯರಾದ ಅಂಬೇಡ್ಕರ್ ಪಾಳ್ಯ ನರಸಿಂಹಮೂರ್ತಿ, ಹೇಮಂತ್, ಜನಪರ ವೇದಿಕೆ ಅಧ್ಯಕ್ಷ ಸುಬ್ರಮಣಿ, ಜೈ ಕರ್ನಾಟಕ ಆಟೋ ಚಾಲಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಜ್ವಾನ್, ಸ್ಥಳೀಯ ಪದಾಧಿಕಾರಿಗಳಾದ ಜಮೀರ್ ಪಾಷ, ಅಸ್ಲಾಂ, ಸೀನ, ನರಸಿಂಹ, ನಾರಾಯಣಸ್ವಾಮಿ, ಸುಹೇಲ್, ಸೋನು, ಬಾಬು, ವೆಂಕಟೇಶ್, ಅನೇಕರು ಬಾಗವಹಿಸಿದ್ದರು.