ಮಂಗಳೂರು: ಸೈoಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜು ವಾಮಂಜೂರು, ಮಂಗಳೂರು ಇಲ್ಲಿನ 2024ನೇ ಸಾಲಿನ ವಾರ್ಷಿಕ ಮಹೋತ್ಸವ ರೇ- ಉತ್ಸವವು ದಿನಾಂಕ 25-11-2024 ರಂದು ಕಾಲೇಜು ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಂ| ಭ| ಡಾ| ಲಿಲ್ಲಿ ಪಿರೇರಾ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ಹಾಗೂ ಕಾರ್ಪೊರೇಟ್ ಮ್ಯಾನೇಜರ್ ಬೆಥನಿ ಸಂಸ್ಥೆ, ರವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಒದಗಿ ಬರುವ ಅವಕಾಶಗಳನ್ನು ಕೈಬಿಡಬಾರದು. ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ. ಯಾವ ಕೆಲಸವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮತ್ತು ಆತ್ಮವಿಶ್ವಾಸ ಮುಖ್ಯ. ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು. ಶಿಕ್ಷಣದ ಜೊತೆಗೆ ಸಹ ಪಠ್ಯ ಚಟುವಟಿಕೆಗಳಲ್ಲಿಯೂ ಸಾಧನೆ ತೋರಿದಕ್ಕಾಗಿ, ಸಂಸ್ಥೆಯ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ವಂದನೀಯ ಜೋಸೆಫ್ ಮಾರ್ಟಿಸ್, ಧರ್ಮ ಗುರುಗಳು, ದ ಮೋಸ್ಟ್ ಹೋಲಿ ರಿಡಿಮೇರ್ ಚರ್ಚ್, ದೆರೆಬೈಲ್ ರವರು ಸಮಾರಂಭದಲ್ಲಿ ಆಶೀರ್ವಚನಗೈದರು. ನಂತರ ಮಾತನಾಡಿದ ಅವರು ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ ಎಡವ ಬಾರದು. ಬಂದ ಕಷ್ಟಗಳನ್ನು ಎದುರಿಸಬೇಕು. ಶಿಸ್ತಿನ ವ್ಯಾಸಂಗದೊಂದಿಗೆ ದೃಢತೆಯನ್ನು ಮೈಗೂಡಿಸಿಕೊಂಡು ಪ್ರಗತಿಪಥದತ್ತ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಶರತ್ ಗೋರೆ, ನ್ಯೂ ವೈಬ್ರೆಂಟ್ ಪಿ ಯು ಕಾಲೇಜು ಮೂಡಬಿದಿರೆ, ಯವರು ಜೀವನದಲ್ಲಿ ಸಾಧನೆಯ ಛಲ, ಸಾಧಿಸುವ ಹಂಬಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭವಾಗಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಪಟ್ಟರೆ ಖಂಡಿತಾ ಯಶಸ್ಸು ಲಭಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರೀ ಎ ಹೆಚ್ ನಾಸಿರ್ ಬಾಮಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ, ರವರು, ಮಕ್ಕಳು ಮತ್ತು ಪೋಷಕರ ನಡುವಿನ ಸಾಮರಸ್ಯ ಹೇಗಿರಬೇಕೆಂದು ಹಿತನುಡಿಗಳನ್ನು ಆಡಿದರು.
ವಂ| ಭ| ಡಾ| ಮಾರಿಯೋಲಾ ಬಿ ಎಸ್ ಕಾಲೇಜಿನ ಸಂಚಾಲಕರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನಮ್ಮ ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಸ್ಯಾಮುಯೆಲ್ ಸಿಂಸನ್ ಅವರು ಶಾಟ್ ಗನ್ ಟ್ರ್ಯಾಪ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಪಡೆದ ಸಾಧನೆಯನ್ನು ಮೆಚ್ಚಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಭ! ವಿತಾಲೀಸ್ ಬಿ ಎಸ್, ಸೈಂಟ್ ರೇಮಂಡ್ಸ್ ಕನ್ಯಾ ಮಠದ ಮುಖ್ಯಸ್ಥರು
ಭ! ಅನಿತಾ ಲೀಡಿಯಾ ಬಿ ಎಸ್, ನಮ್ಮ ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ದೇವನಂದಿನಿ ಮಾರ್ಲಾ ಜೈನ್ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ 2023 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಮೆರಿಟ್ ಪಡೆದ ವಿದ್ಯಾರ್ಥಿಗಳನ್ನು, ಪೋಷಕರು ಮತ್ತು ಉಪನ್ಯಾಸಕರ ಕ್ರೀಡಾಕೂಟದಲ್ಲಿ ವಿಜೇತರಾದವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಸೈoಟ್ ರೇಮಂಡ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಸ್ಥಳೀಯ ಕನ್ಯಾ ಮಠದ ಭಗಿನಿಯರು, ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು, ಪೋಷಕರು, ಕಾಲೇಜು ಹಳೆಯ ವಿದ್ಯಾರ್ಥಿಗಳು, ಸಂಸ್ಥೆಯ ಹಿತೈಷಿಬಂಧುಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ರೇ ಉತ್ಸವಕ್ಕೆ ಆಗಮಿಸಿದ ಸರ್ವರನ್ನು ಕಾಲೇಜಿನ ಪ್ರಚಾರ್ಯರಾದ ಭ! ಅನಿತಾ ಲೀಡಿಯಾ ಸ್ವಾಗತಿಸಿದರು. ಶ್ರೀಮತಿ ರೈನಾ ಅರ್ಥಶಾಸ್ತ್ರ ಉಪನ್ಯಾಸಕರು ವಂದಿಸಿದರು.
ಶ್ರೀಮತಿ ಅವಿಟ, ಗಣಕ ವಿಜ್ಞಾನ ಉಪನ್ಯಾಸಕರು ಮತ್ತು ಶ್ರೀಯುತ ಹೇಮಂತ್, ಕನ್ನಡ ಉಪನ್ಯಾಸಕರು ನೀರೂಪಿಸಿದರು.
Mangalore St. Raymond’s Pre-Graduation College – Ray Festival 2024
25 November 2024 was a Red Letter day in the history of St Raymond’s PU College, for it celebrated the Annual Day “RAY UTSAV”, with a great enthusiasm and solemnity. The chief guests were escorted by a lively band, marching ahead of the guests. This event commenced with a soulful prayer song and a vibrant welcome dance.
Rev. Fr. Dr. Joseph Martis, Parish priest, Most Holy Redeemer church, Derebail, blessed the occasion and addressed the young minds. He said “This event is not just an occasion to celebrate achievements but also a time to reflect on the journey that has brought us here”. Having gone through the report presented, I am deeply impressed of the dedication and the hard work of both the staff and students, he expressed.
Sr. Dr. Lilly Pereira BS, Provincial Superior and Corporate Manager, presided over the event. In her presidential message she mentioned “The achievements highlighted on this day are a testament to the commitment of the PU College towards nurturing talents and fostering excellence”. She confidently said that this institution will continue to create bright and responsible individuals who will contribute richly to the society.
Sri. Sharath Gore, Co-Founder and Director of Vibrant PU College, Moodabidri, A .H. Nasir, Headmaster, Balmy Eng. Med. High school, Gurupura, Sr. Dr. Mariola BS, Educational Coordinator and Correspondent of our PU college, Sr. Vithalis BS, Superior, St Raymond’s Convent, Mrs. Devanandini Marla Jain, PTA Vice President were the chief guests. They appreciated the hard work, dedication and commitment of staff and students.
Asher Samuel Simson, Alumnus, National level gold medalist, Shot gun trap shooting was the guest of honor and was felicitated for his remarkable achievement.
The Annual report of the PU College depicted the activities, achievements, the mile stones and the success stories. It was presented by few of our students artistically and won the hearts and minds of the audience & the guests. The suitable pictures displayed on LED were fantastic.
The cultural programs featuring a variety of performances such as Tribute to Father Founder, Patriotic dance, Nature Dance, fusion dance, thought provoking skits, Yakshagana and Pili Nalike reflected the diverse & multifaceted talents of the students. The mind-blowing performances got a standing ovation and much praise from the audience.
The college toppers, meritorious students and champions of Sports day event were awarded for their excellence. The parents who had won the prizes in various events organized on sports day were felicitated.
Program was directed by Sr. Anita Lydia BS, the Principal and Mrs Savitha Menezes, Lecturer in Economics. The program was compered by Mrs. Avita Menezes, Lecturer-computer science and Mr. Hemanth, Lecturer-Kannada. Mrs. Raina, Lecturer in Commerce proposed the vote of thanks. The celebrations left a lasting impression, fostering pride and motivation among the college community, reinforcing the institution’s commitment to holistic development and excellence.
Mrs. Avita Menezes,Lecturer in Computer Science