ಕುಂದಾಪುರ, ದಿನಾಂಕ : 25/11/2024 ರಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಲುವಾಗಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಲಾ ಸಭಾಂಗಣದಲ್ಲಿ ಅದ್ದೂರಿಯಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷಿಯ ಸ್ಥಾನವನ್ನು ವಹಿಸಿರುವ ಹೋಲಿ ರೋಜರಿ ಚರ್ಚಿನ ಪ್ರಧಾನಗುರುಗಳು ಹಾಗೂ ಹೋಲಿ ರೋಜರಿ ಮತ್ತು ಸೈಂಟ್ ಮೇರಿಸ್ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿಗಳಾಗಿರುವ ಅತೀ ವಂದನೀಯ ಪೌಲ್ ರೆಗೋರವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಕಾರ್ಯಕ್ರಮ ನಿರೂಪಿಸಿದ, ಸ್ವಾಗತಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಉಸ್ತುವಾರಿವಹಿಸಿರುವ ಶಿಕ್ಷಕರುಗಳಿಗೆ, ಕಾರ್ಯಕ್ರಮದ ರೂವಾರಿಗಳಾಗಿರುವ ಮುಖ್ಯಶಿಕ್ಷಕರಿಗೆ, ಶಿಕ್ಷಕ-ಶಿಕ್ಷಕೇತರ ವೃಂದದವರಿಗೂ ಹಾಗೂ ಸ್ಪರ್ಧಿಸಿದ ಸರ್ವ ಮುದ್ದು ಮಕ್ಕಳಿಗೆ ಅಭಿನಂದಿಸುತ್ತಾ ಸ್ಪರ್ಧಿಸುವುದು ಮುಖ್ಯ ಸೋಲೆ ಗೆಲುವಿನ ಸೋಪಾನ ಇಂದು ಸೋತರು ಮುಂದೇ ಗೆಲ್ಲುತ್ತಾರೆ ಪ್ರಯತ್ನವನೇ ಮಾಡದಿದ್ದರೆ ಪ್ರತಿಫಲ ಸಿಗುವುದಿಲ್ಲ ಎಂದು ದೇವರು ಸರ್ವರಿಗೂ ಶಾಂತಿ ಸಮಾಧಾನ ಆರೋಗ್ಯವನ್ನು ದಯಪಾಲಿಸಲಿ ಎಂದು ತಮ್ಮ ಅಧ್ಯಕ್ಷಿಯ ನುಡಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿರುವ ವಿಲ್ಸನ್ ಅಲ್ಮೇಡಾರವರು ವಿದ್ಯಾರ್ಥಿಗಳಿಗೆ ತಮ್ಮ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದು ಶಾಲೆಯಲ್ಲಿ ನಡೆಸುವ ಸಹಪಠ್ಯ ಚಟುವಟಿಕೆಯಿಂದ ವಿದ್ಯಾರ್ಥಿಗಳು ಪಠ್ಯ ಮಾತ್ರವಲ್ಲದೆ ಪಠ್ಯೆತರ ವಿಷಯಗಳಿಗೂ ಸಮಾನವಾದ ಸಹಕಾರ ಶಾಲೆಯವರು ನೀಡುತ್ತಿದ್ದಾರೆ. ಶಾಲೆಯ ಶಿಕ್ಷಕರ ಮೇಲೆ ನಮಗೆ ಪ್ರೀತಿ ಇರಬೇಕು ಆಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿ ಎ.ಸಿ. ಹಾಗೂ ಶಾಲಾ ಶೈಕ್ಷಣೀಕ ಮಾರ್ಗದರ್ಶಕರಾಗಿರುವ ಮಾರ್ಗರೆಟ್ ಪಿಕಾರ್ಡೊ ಉಪಸ್ಥಿತರಿದ್ದರು. ಸಾ7ವ್ಯಾ ಎಮಿಲಿಯಾ ಮಾರ್ಟಿಸ್ ಮತ್ತು ಹವ್ಯಾ ಲಿಯೋನಾ ಕೊಟ್ಯಾನ್ ನಿರೂಪಿಸಿ, ಡಿಲನ್ ಗೊನ್ಸಾಲ್ವಿಸ್ ಸ್ವಾಗತಿಸಿ, ಅವಿಕಾ ಧನ್ಯವಾದ ಸಮರ್ಪಿಸಿದರು.