ಶ್ರೀನಿವಾಸಪುರ : ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯತಿಯಿಂದ ಪುರಸಭೆ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಗೌನಿಪಲ್ಲಿ ಗ್ರಾಮದ ಅಮ್ಜದ್ ಖಾನ್ ರವರು ಗೌನಿಪಲ್ಲಿ ಯಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ವೇಳೆ ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಸಚಿವರಿಗೆ ಮನವಿ ಪತ್ರವನ್ನು ನೀಡಲು ಸತತ ಎರಡನೇ ಬಾರಿ ಪಾದಯಾತ್ರೆ ಮೂಲಕ ಹೊರಟಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅಮ್ಜದ್ ಖಾನ್ ಗೌನಿಪಲ್ಲಿ ಗ್ರಾಮ ಪಂಚಾಯತಿ ಪುರಸಭೆಗೆ ಎಲ್ಲಾ ರೀತಿಯಲ್ಲಿಯೂ ಅರ್ಹತೆ ಹೊಂದಿದ್ದು ಕಳೆದ 2023 ರ ಅಧಿವೇಶನ ವೇಳೆಯೂ ಸಹಾ ಪಾದಯಾತ್ರೆ ಮೂಲಕ ಹೊರಟು ಸಂಬಂಧ ಪಟ್ಟ ಪೌರಾಡಳಿತ ಸಚಿವರಿಗೆ ಹಾಗೂ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದೆ ಆದರೆ 2011 ರ ಜನಗಣತಿಯನ್ನು ಪರಿಗಣಿಸಿ ಕಾರಣಾಂತರಗಳಿಂದ ತಡೆಹಿಡಿದಿದ್ದು 2021 ರ ಜನಗಣತಿ ಪರಿಗಣಿಸಬೇಕಿತ್ತು .
ಯಾವ ಕಾರಣದಿಂದ 2011 ರ ಜಾತಿಗಣತಿ ಪರಿಗಣನೆಗೆ ತೆಗೆದುಕೊಡಿದ್ದಾರೋ ಗೊತ್ತಿಲ್ಲಾ ಆದ ಕಾರಣ ಪುನಃ ಸರ್ಕಾರದ ಗಮನ ಸೆಳೆಯಲು 2ನೇ ಬಾರಿಗೆ ಪಾದಯಾತ್ರೆ ಆರಂಭ ಮಾಡಿದ್ದು ಗೌನಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲರ ಸಹಕಾರ ಆಶೀರ್ವಾದ ನನ್ನ ಮೇಲಿದ್ದು ಅಧಿವೇಶನದ ವೇಳೆಗೆ ಬೆಳಗಾವಿ ತಲುಪಿ ಸಂಬಂಧ ಪಟ್ಟ ಪೌರಾಡಳಿತ ಸಚಿವರಿಗೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತೇನೆಂದರು ಈ ಸಂದರ್ಭದಲ್ಲಿ ಹಲವರು ಶುಭ ಆರೈಸಿದರು.
ಈ ಸಮಯದಲ್ಲಿ ಗ್ರಾಮದ ಮುಖಂಡರಾದ ಬಾಲಾಜಿ, ರಾಘವೇಂದ್ರ ನಾಯಕ್, ವೆಂಕಟೇಶ್, ಅಯಾಜ್, ಅಭೀದ್, ವೆಂಕಟರಮಣಪ್ಪ, ರವಿ, ಗಟ್ಟುರವಿ, ಪೂಲು ವೆಂಕಟೇಶ್, ಡ್ರೈವರ್ ಶ್ರೀನಿವಾಸ್ ಇದ್ದರು.