ಕುಂದಾಪುರ ; ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಶಾಖೆಯ ರಕ್ತ ನಿಧಿ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಮೆಟ್ರಿಕ್ಸ್ ಅಟೋಮೆಟಿಕ್ ಕ್ರಾಸ್ ಮೆಜಿಂಗ್ ಮತ್ತು ರಕ್ತ ವರ್ಗೀಕರಣ ಯಂತ್ರದ ಉದ್ಘಾಟನೆಯನ್ನು ಜನತಾ ಫಿಶ್ ಮಿಲ್ಲಿನ ಆಡಳಿತ ನಿರ್ದೇಶಕರಾದ ಆನಂದ ಸಿ ಕುಂದರ್ ನೆರವೇರಿಸಿದರು. ಸಭಾಪತಿ ಎಸ್ ಜಯಕರ ಶೆಟ್ಟಿ, ಉಪ ಸಭಾಪತಿ ಡಾ. ಉಮೇಶ ಪುತ್ರನ್, ಖಜಾಂಜಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ರೆಡ್ ಕ್ರಾಸ್ ಕಾರ್ಯ ನಿರ್ವಹಣಾ ಸಮಿತಿಯ ಎಲ್ಲಾ ಸದಸ್ಯರು, ತುಲಿಪ್ ಡಯಗ್ನೂಷ್ಟಿಕ್ ನ ಮೆನೇಜರ್ ರಮೇಶ್ , ಚೈತನ್ಯ ವಿಶೇಷ ಮಕ್ಕಳ ಶಾಲೆಯ ಕಾರ್ಯದರ್ಶಿ ಸುಜಾತ ನಕ್ಕತ್ತಾಯ ಮತ್ತು ರಕ್ತ ನಿಧಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.