ಶ್ರೀನಿವಾಸಪುರ : ಜೆ.ತಿಮ್ಮಸಂದ್ರ ಗ್ರಾಮಪಂಚಾಯಿತಿಯಲ್ಲಿ ಒಟ್ಟು 17 ಸದಸ್ಯರಿದ್ದು, ಒಬ್ಬರು ಗೈರುಹಾಜರಾಗಿ, 16 ಸದಸ್ಯರು ಹಾಜರಾಗಿದ್ದರು. ಜೆ ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ ಜೆಡಿಎಸ್ ಬೆಂಬಲಿತ 13 ಸದಸ್ಯರು . ಕಾಂಗ್ರೆಸ್ ಬೆಂಬಲಿತ ಸದಸ್ಯರು 4 ಸದಸ್ಯರಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶಂಕರರೆಡ್ಡಿ, ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕೆ.ರತ್ನಮ್ಮ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುಮಂಗಲ ನಾಮಪತ್ರ ಸಲ್ಲಿಕೆ ಮಾಡಿದ್ದರು. ಮೂರು ನಾಮಪತ್ರಗಳು ಅಂಗೀಕಾರವಾಗಿದ್ದು, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಸುಮಂಗಲ ರವರು ವಾಪಸ್ಸು ಪಡೆದರು.
ತಾಲ್ಲೂಕಿನ ಜೆ ತಿಮ್ಮಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ನಾಗೇಶ್ ರೆಡ್ಡಿ ರಾಜಿನಾಮೆ ನೀಡಿ ತೆರವಾಗಿದ್ದಂತಹ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲತಾ ಅಭ್ಯರ್ಥಿ ಕೆ.ಎನ್.ಶಂಕರರೆಡ್ಡಿ 10 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆಂದು ಚುನಾವಣಾಧಿಕಾರಿ ಎನ್.ರಾಜೇಶ್ ಮಾಹಿತಿ ನೀಡಿದರು.
ಚುನಾವಣಾ ಪ್ರಕ್ರಿಯಂತೆ ಚುನಾವಣೆ ಅಧಿಕಾರಿಗಳು ಗೌಪ್ಯ ಮತದಾನ ನಡೆಸಲಾಗಿ ಜೆಡಿಎಸ್ ಬೆಂಬಲಿತ ಬಂಡಾಯ ಅಭ್ಯರ್ಥಿ ಕೆ.ರತ್ನಮ್ಮ 6 ಮತಗಳು ಪಡೆದು ಪರಾಭವಗೊಂಡು, 10 ಮತಗಳನ್ನು ಪಡೆದಿರುವ ಕೆ.ಎನ್.ಶಂಕರರೆಡ್ಡಿ ಜಯಶೀಲರಾಗಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಿಡಿಒ ಎಸ್.ವಿನೋದ, ಕಾರ್ಯದರ್ಶಿ ನಾರಾಯಣಸ್ವಾಮಿ, ಮುಖಂಡಾದ ಎ.ವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ನಾಗೇಶ್ರೆಡ್ಡಿ, ಸುರೇಶ್ಬಾಬು, ಚಂದ್ರಶೇಖರರೆಡ್ಡಿ, ರಾಮಕೃಷ್ಣಾರೆಡ್ಡಿ, ಕಲ್ಲೂರು ಚೌಡರೆಡ್ಡಿ, ಆಲವಾಟ ರಮೇಶ್, ಗುತ್ತಿಗೆದಾರ ದೇವರಾಜು, ಕಲ್ಲೂರು ಸೀನಪ್ಪ, ಪಾತಪಲ್ಲಿ ಚೌಡರೆಡ್ಡಿ, ಕೆ.ಸಿ.ದಿಲೀಪ್, ಕೆ.ಎನ್.ಮಂಜುನಾಥರೆಡ್ಡಿ ಇದ್ದರು.