ಕುಂದಾಪುರದ ಮೂಡ್ಲಕಟ್ಟೆಯ ಐ ಎಮ್ ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಇಲ್ಲಿ 16 /11/2024 ರಂದು ನಡೆದ “NAVONMESH” ಅಂತರ್ಕಾಲೇಜು ಸ್ಫರ್ಧೆಯಲ್ಲಿ, ಶಂಕರನಾರಾಯಣದ ಮದರ್ ತೆರೆಸಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಪ್ರತಿಭಾಭಿವ್ಯಕ್ತಿಯ ಮೂಲಕ ಸ್ಪರ್ಧೆಯ ಸಮಗ್ರ ಪ್ರಶಸ್ತಿ ನಗದು ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ
ಕರುನಾಡ ವೈಭವ ಎಂಬ ಶೀರ್ಷಿಕೆಯಡಿಯಲ್ಲಿದ್ದ ವೈವಿಧ್ಯಮಯ ಪ್ರದರ್ಶನದಲ್ಲಿ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಭರತನಾಟ್ಯದಲ್ಲಿ ಪ್ರಥಮ ಕೊಲಾಜ್ ರಚನೆಯಲ್ಲಿ ಪ್ರಥಮ ಏಕಪಾತ್ರಾಭಿನಯದಲ್ಲಿ ಪ್ರಥಮ ವಿಡಿಯೋಗ್ರಫಿಯಲ್ಲಿ ಪ್ರಥಮ ಐಟಿ ರಸಪ್ರಶ್ನೆಯಲ್ಲಿ ದ್ವಿತೀಯ ಹಾಗೂ ಮ್ಯಾಡ್ ಆಡ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವುದರ ಮೂಲಕ ಸಮಗ್ರ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳ ಈ ಹೆಮ್ಮೆಯ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಅಭಿನಂದಿಸಿ, ಸಂತಸದಿಂದ ಶುಭಕೋರಿರುತ್ತಾರೆ.