ಕುಂದಾಪುರ (ನ.15) : ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ ನಾಲ್ಕನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್. ವಿ. ಅಮೀನ್ ‘ಮಂದಾರ’ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ ಇವರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಬ್ರಹ್ಮಾವರದಲ್ಲಿ ನವೆಂಬರ್ 10 ರಂದು ನಡೆದ ನುಡಿಚಿತ್ತಾರ 2024 ಮಕ್ಕಳಿಗೆ ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾಗಿ ತೃತೀಯ ಸ್ಥಾನವನ್ನು ಪಡೆದು ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ವಿಜಯ್ ಅಮೀನ್ ಮತ್ತು ಜ್ಯೋತಿ ವಿ ಅಮೀನ್ ರ ಪುತ್ರನಾದ ಈ ಅದ್ಭುತ ಬಾಲಾ ಪ್ರತಿಭೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ| ಚಿಂತನಾ ರಾಜೇಶ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಹಾಯಕ ಮುಖ್ಯ ಶಿಕ್ಷಕರು, ಶಿಕ್ಷಣ ಸಂಯೋಜಕರು ಹಾಗೂ ಶಿಕ್ಷಕ ವೃಂದದವರು ಮೆಚ್ಚಿ ಅಭಿನಂದಿಸಿದರು.