ಕುಂದಾಪುರಃ ನವೆಂಬರ್ 14 ರಂದು UBMC ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದಲ್ಲಿ ಮಕ್ಕಳ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಮುಖಂಡ ವಿಸ್ಮಿತ್ ಅಧ್ಯಕ್ಷ ತೆ ವಹಿಸಿದ್ದು, ರೆವರೆಂಡ್ ಇಮ್ಯಾನುಯೆಲ್ ಜಯಕರ್ ಹಾಗೂ ಶಾಲಾ ಸಂಚಾಲಕಿ ಐರಿನ್ ಸಾಲಿನ್ಸ್ ಮುಖ್ಯ ಅತಿಥಿಗಳಾಗಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಹಾಗೂ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ, ಅಂಗನವಾಡಿ ಶಿಕ್ಷಕಿ ವಿದ್ಯಾಲಕ್ಷ್ಮಿ ವೇದಿಕೆ ಹಂಚಿಕೊಂಡರು. ಶಿಕ್ಷಕಿಯರು ಪ್ರಾರ್ಥನ ಗೀತೆ ಹಾಡಿಅದ್ರು.ಪಂಡಿತ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಭಾಷಣ ಮಾಡಿದರು. ಶಿಕ್ಷಕಿ ಉಜ್ವಲಾ ಅವರು ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು.ವಿದ್ಯಾರ್ಥಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದರು ಮತ್ತು ಹಾಡುಗಳನ್ನು ಹಾಡಿದರು ಮತ್ತು ಶಿಕ್ಷಕರು ನೃತ್ಯ ಮಾಡುವ ಮೂಲಕ ಮಕ್ಕಳನ್ನು ರಂಜಿಸಿದರು. ಇಂದು ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಸೋಹನ್ ಖುಷಿಯಿಂದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದನು. ಶಿಕ್ಷಕಿ ಪ್ರಿಯಾಂಕಾ ಸ್ವಾಗತಿಸಿದರು. ರಾಜೇಶ್ವರಿ ಧನ್ಯವಾದಗೈದರು. ಶಿಕ್ಷಕಿ ಶ್ರೀಮತಿ ಪವಿತ್ರಾ ಕೊತ್ವಾಲ್ ನಿರೂಪಿಸಿದರು
Kundapur; UBMC English Medium School Kundapur celebrated Children’s Day
Kundapur; November 14, UBMC English Medium School Kundapur celebrated Children’s Day with grandeur. In this program, the school student leader Vismith is the President, Reverend Immanuel Jayakar and the school correspondent Irene Salins as the chief guest, the school principal Mrs. Anita and the nursery school headmistress Mrs. Savita, Anganwadi teacher Vidyalakshmi shared the stage. Floral tribute was given at the portrait of pandit Jawaharlal Nehru. In the program, students gave a speech on the importance of celebrating Children’s Day. The teacher Ujwala told the importance of Children’s Day. The students happily danced and sang songs and the teachers entertained the children by dancing. Student Sohan happily thanked the teachers for this program organized today. The teacher Priyanka welcomed. Mrs. Rajeshwari thanked for the entire program. All these programs were accompanied by the presentation of teacher Smt. Pavitra Kothwal.