ಶ್ರೀನಿವಾಸಪುರ : ಸಭೆಯಲ್ಲಿ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಜನ ಸಾಮಾನ್ಯರಿಗೆ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕೋಲಾರ ಜಿಲ್ಲಾ ಎಸ್ ಪಿ ಬಿ ನಿಖಿಲ್ ರವರು ತಿಳಿಸಿದರು.
ತಾಲೂಕಿನ ಗೌನಿಪಲ್ಲಿ ಗ್ರಾಮದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ಮನೆಗಳ ಹತ್ತಿರದಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಯಿಂದ ಭಧ್ರತೆಯ ವಾತಾವರಣ ನಿರ್ಮಾಣವಾಗುತ್ತದೆ. ಇನ್ನು ಸಿವಿಲ್ ಪ್ರಕರಣಗಳಲ್ಲಿ ಪೊಲೀಸ್ರು ಯಾವುದೇ ನೈಜ ಜವಾಬ್ದಾರಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಾಹಿಸಬೇಕಾಗುತ್ತದೆ.
ಜನ ಸಾಮಾನ್ಯರು ಸಿವಿಲ್ ಪ್ರಕರಣಗಳಲ್ಲಿ ಪೊಲೀಸ್ರಿಗೆ ಒತ್ತಡ ಏರುವ ಬದಲು ನ್ಯಾಯಾಲಯ ಅಥವಾ ಹಿರಿಯ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವ ಕೆಲಸ ಮಾಡಬೇಕು ಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದರು. ಇನ್ನು ರಾತ್ರಿ ಬೀಟ್ಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು ಸಾರವಾಜನಿಕರು ಅದರ ಅರಿವನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.
ಇದೇ ಸಮಯದಲ್ಲಿ ಸಾರ್ವಜನಿಕರು ಈ ಠಾಣಾ ವ್ಯಾಪ್ತಿಯಲ್ಲಿ ಆ ಕೆಟ್ಟ ಗಳಿಗೆಯಲ್ಲಿ ಏನು ಅವಘಡವಾಗಿರಬಹುದು ಅಂತಹವರನ್ನ ರೌಡಿ ಶೀಟರ್ಗಳನ್ನು ರೌಡಿ ಶೀಟರ್ಗಳ ಪಟ್ಟಿಯಿಂದ ಹೊರತೆಗೆಯಲು ಮನವಿ ಮಾಡಿದರು. ಸಾರ್ವಜನಿಕರ ಅಹವಾಲನ್ನು ಕೇಳಿ ನ್ಯಾಯಾಲಯದ ಆದೇಶದಂತೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಯಡಗಾನಪಲ್ಲಿ ಗ್ರಾಮಕ್ಕೆ ಬಸ್ ಸೌಕರ್ಯ ವಿರುವುದಿಲ್ಲ ಅದಕ್ಕೆ ಪರಿಹಾರ ಮಾಡಿಕೊಡುವಂತೆ ನಾಗರೀಕರು ಮನವಿ ಮಾಡಿದಾಗ ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂರ್ಪಕಿಸಿ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗೌನಿಪಲ್ಲಿ ಹಾಗೂ ರಾಯಲ್ಪಾಡು ವೃತ್ತದ ಸಿಪಿಐ.ಎಂ. ಶಿವಕುಮಾರ್, ಪಿಎಸ್ಐ ರಾಮ, ಪಿಎಸ್ಐ ಶ್ರೀನಿವಾಸಗೌಡ, ಊರಿನ ಮುಖಂಡರಾದ ರಾಮಮೋಹನ, ಸತ್ಯನಾರಾಯಣ , ಗ್ರಾ.ಪಂ ಬಕ್ಷುಸಾಬ್,ರಾಮಮೂರ್ತಿ, ವಿಶ್ವನಾಥ್, ಮಧು, ನಾಗೇಶ್, ರಮೇಶ್, ಚುಕ್ಕಾ ಮಂಜು, ಮುನಿರಾಜು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.