ಕುಂದಾಪುರ, ನ.13; ಕರ್ನಾಟಕ ಸರಕಾರದಿಂದ ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾಗಿ ಆಯ್ಕೆಯಾದ ವಿನೋದ್ ಕ್ರಾಸ್ಟೊ ಅವರು ಕಾಂಗ್ರೆಸ್ ಪಕ್ಷದ ಹಲವು ನಾಯಕರ ಉಪಸ್ಥಿಯಲ್ಲಿ ನ.13 ರಂದು ನಗರ ಪ್ರಾಧಿಕಾರ ಕಚೇರಿಯ ಸಭಾಂಗಣದಲ್ಲಿ ಪದಗ್ರಹಣ ಮಾಡಿದರು.
ನಗರ ಯೋಜನ ಪ್ರಾಧಿಕಾರದ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ದೀಪ ಬೆಳಗಿಸಿ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ನೆಡೆದ ಸಭಾಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಅಭಿನಂದನ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ ‘ವಿನೋದ್ ಕ್ರಾಸ್ಟೊರವರಿಗೆ ಈ ಸ್ಥಾನ ಅರ್ಹತೆ ಮತ್ತು ಯೋಗ್ಯತೆಯಿಂದ ಲಭಿಸಿದೆ, ಅವರು ಕಾಂಗ್ರೆಸ್ನಲ್ಲಿ ಉತ್ತಮ ಸೇವೆ ನಿಡಿದ್ದಾರೆ, ಅವರು ಕುಂದಾಪುರ ಬ್ಲಾಕ್ ಕಾಂಗ್ರೆಸಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ, ವಿನೋದ್ ಕ್ರಾಸ್ಟೊರವರು ಸಮಸ್ಯೆಗಳ ಆಗರದ ಸಂಸ್ಥೆಯ ಸ್ಥಾನ ಲಭಿಸಿದೆ. ಅವರು ಈ ಸ್ಥಾನ ಉತ್ತಮವಾಗಿ ನೆಡೆಸಿಕೊಂಡು ಹೋಗುತ್ತಾರೆಂದು ಭರವಸೆ ಇದೆ, ಕಾಂಗ್ರೆಸಿನ ಕಾರ್ಯಕರ್ತರಿಗೆ ಸಕಾಲದಲ್ಲಿ ಅವಕಾಶ ಸಿಗುತ್ತದೆ’ ಎಂದು ‘ವಿನೋದ್ ಕ್ರಾಸ್ಟೊ ಮತ್ತು ಇತರ ಸದಸ್ಯರಿಗೆ ಅಭಿನಂದಿಸಿದರು.
ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ ‘ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಿಗೆ ಪುರಸಭಾ ವ್ಯಾಪ್ತಿಯಲ್ಲಿ ಬಹಳಷ್ಟು ಕೆಲಸವಿದೆ, ನಿಮ್ಮ ಸೇವಾ ಅವಧಿಯಲ್ಲಿ ಜನರ ಸಮಸ್ಯೆಯನ್ನು ನ್ಯಾಯಯುತವಾಗಿ ಮಾಡಿಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೆಸರು ತರಬೇಕು’ ಎಂದು ಹೇಳಿದರು. ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ‘ಜವಾಬ್ದಾರಿಯುತ ಸ್ಥಾನ ಸಿಕ್ಕಿದೆ ಮನುಷ್ಯನಿಗೆ ಅಧಿಕಾರ ಅಂತಸ್ತು ಲಭಿಸಿದರೆ ಆತ ಮೊದಲಿನಂತೆ ಇರುವುದಿಲ್ಲ, ಮನುಷ್ಯ ಬದಲಾಗುತ್ತಾನೆ, ನೀವು ಬದಲಾಗಬಾರದು, ನೀವು ಯಾವದೇ ಅಮಿಷಕ್ಕೆ ಒಳಗಾಗದೆ ನಿಸ್ವಾರ್ಥವಾಗಿ ಸೇವೆ ಮಾಡಿ’ ಎಂದು ಹರಸಿದರು. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ‘ಇಂದು ನಮ್ಮಲ್ಲಿ ಸಂವಿಧಾನ ಒಪ್ಪುವ ವರ್ಗ ಇದೆ, ಇನ್ನೊಂದು ಸಂವಿಧಾನ ಒಪ್ಪದೆ ಇರುವ ವರ್ಗ ಇದೆ, ನಾವು ಸಂವಿಧಾನ ಪ್ರೀತಿಸುವವರನ್ನು ಹೆಚ್ಚಿಸಬೇಕು, ಮದ್ಯವರ್ತಿಗಳನ್ನು ಹತ್ತಿರ ಮಾಡದೆ ನ್ಯಾಯಯುತವಾಗಿ ಒಳ್ಳೆಯ ಕೆಲಸಗಳನ್ನು ಮಾಡಿರಿ’ ಅಭಿನಂದಿಸಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ ‘ವಿನೋದ್ ಕ್ರಾಸ್ಟೊ ಸರಳ ಸಜ್ಜನ ವ್ಯಕ್ತಿ, ಅವರು ನನ್ನ ಜೊತೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸೇವೆ ನೀಡುತಿದ್ದಾರೆ, ಅವರು ಉತ್ತಮ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ, ಹೀಗೆ ನಮ್ಮ ಪಕ್ಷದವರಿಗೆ ನಮ್ಮ ಪಕ್ಷ ಅವಕಾಶ ಕೊಡುತ್ತದೆ, ವಿನೋದ್ ಕ್ರಾಸ್ಟೊ ಅವರು ಮತ್ತು ಅವರ ತಂಡ ಉತ್ತಮ ಕೆಲಸ ಮಾಡುತ್ತದೆ ಎಂದು ಭರವಸೆ ಇದೆ’ ಎಂದು ಶುಭ ಹಾರೈಸಿದರು.
ಅಧಿಕಾರ ಪದಗ್ರಹಣ ಮಾಡಿದ ವಿನೋದ್ ಕ್ರಾಸ್ಟೊ ‘ದೇಶಕ್ಕೆ ಮಾದರಿಯಾಗುವಂತೆ ನಮ್ಮ ರಾಜ್ಯದ ಮುಖ್ಯಮಂತ್ರಿ ಆಡಳಿತ ನೆಡುಸುತಿದ್ದಾರೆ, ಅದರಂತೆ ಹಲವು ಸರಕಾರಿ ಸಂಸ್ಥೆಗಳಿಗೆ ಅಧ್ಯಕ್ಷರನ್ನು, ಸದಸ್ಯರನ್ನು ನೇಮಿಸುತಿದ್ದಾರೆ, ಹಾಗೆ ನನಗೆ ಇಲ್ಲಿ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಿಸಿದ್ದಾರೆ, ಹೀಗೆ ನನ್ನನ್ನು ಆಯ್ಕೆ ಮಾಡಿದಕ್ಕೆ, ರಾಜ್ಯ ಮುಖಂಡರಿಗೆ, ಸ್ಥಳೀಯ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಈ ಸ್ಥಾನಕ್ಕೆ ಆಯ್ಕೆಗೊಂಡತ್ತೆ, ಸ್ಥಳೀಯರು ಅವರವರ ಸಮಸ್ಯೆ ಹೇಳಿಕೊಳ್ಳಲು ಆರಂಭಿಸಿದ್ದಾರೆ, ಕುಂದಾಪುರದಲ್ಲಿ ಅಲ್ಲಲ್ಲಿ ದಾರಿಗಳ ಸಮಸ್ಯೆ ಇದೆ, ಅದಕ್ಕಾಗಿ ಸರಕಾರ ಯೋಜನೆ ರೂಪಿಸಿದೆ, ಅದನ್ನು ಜ್ಯಾರಿಗೊಳಿಸಲು ಪ್ರಯತ್ನಿಸುತ್ತೇನೆ, ಆದರೆ ಇಲ್ಲಿ ನಮ್ಮ ಮೇಲಿನ ಅಧಿಕಾರಿ ಎಲ್ಲಾ ದಿನಗಳು ಲಭ್ಯ ಇರುವುದಿಲ್ಲ, ಈ ಸಮಸ್ಯೆಯನ್ನು ಜೆ.ಪಿ.ಹೆಗ್ಡೆಯವರಿಗೆ ತಿಳಿಸಿದ್ದೇನೆ, ಅವರು ಸಮಸ್ಯೆ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ, ಈ ಪ್ರಾಧಿಕಾರದ ಕಾರ್ಯ ವ್ಯಾಪ್ತಿ ಕುಂದಾಪುರ ಹಾಗೂ ವಡೇರೂಬಳಿ ಹೋಬಳಿ ಮತ್ತು ಹಂಗಳೂರು ಪಂಚಾಯತ್ ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರದೇಶವಾಗಿದ್ದು. ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಒಂದು ಎಕರೆ ಗಳಿಗಿಂತ ಕಡಿಮೆ ಜಮೀನು ವಿನ್ಯಾಸ ಅನುಮೋದನೆ ಪ್ರಾಧಿಕಾರ ಅಧಿಕಾರ ಹೊಂದಿರುತ್ತದೆ ಎಂದು ತಿಳಿಸುತ್ತಾ, ನಾನು ಈ ಹುದ್ದೆಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತೇನೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿನೋದ್ ಕ್ರಾಸ್ಟೊರವರಿಗೆ, ಪ್ರಾಧಿಕಾರದ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಚಂದ್ರ ಅಮೀನ್, ಮಹಮ್ಮದ್ ಅಲ್ಪಾಜ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆದೂರು ಸದಾನಂದ ಶೆಟ್ಟಿ, ಶಂಕರ ಪೂಜಾರಿ ಕೋಡಿ, ಹಿರಿಯಣ್ಣ, ದೇವಕ್ಕಿ ಸಣ್ಣಯ್ಯ ಮತ್ತು ಅನೇಕ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿನೋದ್ ಕ್ರಾಸ್ಟೊ ಅವರ ತಾಯಿ, ಮಾಜಿ ಕುಂದಾಪುರ ಪುರಸಭೆಯ ಉಪಾಧ್ಯಕ್ಷರಾದ ಲೀಯೊನಿಲ್ಲಾ ಕ್ರಾಸ್ಟೊ, ಅಣ್ಣ ಉದ್ಯಮಿ ವಿನ್ಸೆಂಟ್ ಕ್ರಾಸ್ಟೊ ಮತ್ತು ಅವರ ಪತ್ನಿ ಡೆಪೆÇಡಿಲ್ ಕ್ರಾಸ್ಟೊ ಹಾಗೂ ಅವರ ಮಕ್ಕಳು ಕಾಂಗ್ರೆಸಿನ ಹಲವಾರು ಮುಖಂಡರು, ಕಾರ್ಯಕರ್ತರು, ಅನೇಕ ಸಂಘ ಸಂಸ್ಥೆಗಳ ಮುಖಂಡರು, ಹಿತೈಸಿಗಳು ಭಾಗವಹಿಸಿದ್ದರು.
ಪ್ರಾಧಿಕಾರದ ಸದಸ್ಯರಾದ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಪ್ರಾಧಿಕಾರದ ಸದಸ್ಯರಾದ ಚಂದ್ರ ಅಮೀನ್ ವಂದಿಸಿದರು. ತೆಕ್ಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಭಂಡಾರಿ ನಿರೂಪಿಸಿದರು.