ಕುಂದಾಪುರ; ಮೂಡಲಕಟ್ಟೆಯಲ್ಲಿರುವ ವಿದ್ಯಾ ಅಕಾಡೆಮಿ ಶಾಲೆಯ ವಾರ್ಷಿಕ ಕ್ರೀಡಾಕೂಟವು ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಎಳೆಯ ವಿದ್ಯಾರ್ಥಿಗಳ ಕ್ರೀಡಾ ಉತ್ಸವವು ಈ ದಿನದ ಮುಖ್ಯ ಆಕರ್ಷಣೆಯಾಗಿತ್ತು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕರಾದ ಮುಖ್ಯ ಅತಿಥಿ ಶ್ರೀ ಅಜಾದ್ ಮೊಹಮ್ಮದ್ ಮತ್ತು ಗೌರವ ಅತಿಥಿಯಾಗಿ ಕೋಣಿ ಕ್ಲಸ್ಟರ್ನ ಸಿ.ಆರ್.ಪಿ ಶ್ರೀಮತಿ ಸುಮನಾ ಎನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಆಕರ್ಷಕ , ಪ್ರಶಂಸನೀಯ ಮಾರ್ಚ್ ಪಾಸ್ಟ್ ಮೂಲಕ ಆರಂಭವಾಯಿತು, ತಮ್ಮ ಭಾಷಣದಲ್ಲಿ, ಶ್ರೀ ಅಜಾದ್ ಮೊಹಮ್ಮದ್ ಅವರು ವಿದ್ಯಾರ್ಥಿಗಳ ಶಿಸ್ತು ಮತ್ತು ಸಮರ್ಪಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೈಹಿಕ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ನಾಯಕರ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಅವರು ವಿವರಿಸಿದರು.
ಗೌರವ ಅತಿಥಿಯಾದ ಶ್ರೀಮತಿ ಸುಮನಾ ಎನ್ ಅವರು ಶಾಲಾ ಶಿಕ್ಷಕರ ಕಾರ್ಯನಿಷ್ಠೆಯನ್ನು ಶ್ಲಾಘನೆ ಮಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಪ್ರತಿಭೆ ಯನ್ನು ಹೊರತರುವ ಶಿಕ್ಷಕರ ಪರಿಶ್ರಮವನ್ನು ಅವರು ಪ್ರಶಂಸಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ರಷ್ಮಾ ಶೆಟ್ಟಿ ನಿರೂಪಿಸಿದರು. ಶ್ರೀಮತಿ ಸೋಫಿಯಾ ಕಾರ್ವಾಲೋ ಅವರು ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಶ್ರೀಮತಿ ಸುನಿತಾ ರೆಬೆಲ್ಲೋ ಅವರು ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಸ್ವಾತಿ ಧನ್ಯವಾದ ಸಮರ್ಪಿಸಿದರು. ಎಲ್ಲಾ ಕ್ರೀಡಾ ಸ್ಪರ್ಧೆಗಳನ್ನು ಮಿಸ್ ವಿದ್ಯಾ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.