ಫಾದರ್‌ ಮುಲ್ಲರ್‌ ಫಾರ್ಮಾಸ್ಯುಟಿಕಲ್ ವಿಭಾಗವು 20 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ / Father Muller Pharmaceuticals is celebrating its 20th anniversary

  1. ಶುದ್ಧ, ಗುಣಮಟ್ಟದ ಔಷಧಗಳ ತಯಾರಿಕೆ: ವಿಭಾಗವು ನೈಜ ಮತ್ತು ಪರಿಣಾಮಕಾರಿ ಹೋಮಿಯೋಪತಿ ಔಷಧಿಗಳ ಉತ್ಪಾದನೆಗೆ ಒತ್ತು ನೀಡುತ್ತಿದ್ದು, ಎಚ್.ಪಿ.ಐ. ಮಾನದಂಡಗಳನ್ನು ಅನುಸರಿಸಿ ಜಟಿಲ ಗುಣಮಟ್ಟದ ನಿಯಂತ್ರಣ ಮತ್ತು ಅನುಸರಣೆಯನ್ನು ಖಾತ್ರಿಪಡಿಸುತ್ತದೆ.
  2. ಕೈಗೆಟುಕುವ ದರ: ಗುಣಮಟ್ಟದ ಹೋಮಿಯೋಪತಿ ಔಷಧಿಗಳನ್ನು ಎಲ್ಲರಿಗೂ ಸಮಂಜಸವಾದ ದರದಲ್ಲಿ ಲಭ್ಯವಾಗುವಂತೆ ಮಾಡುವುದು, ರೋಗಿಗಳ ಸಂಕಷ್ಟದ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದು ಮತ್ತು ಆರೋಗ್ಯ ರಕ್ಷಣೆ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳುವುದು.
  3. ರೋಗಿಗಳಿಗೆ ಮತ್ತು ನಿರ್ಗತಿಕರಿಗೆ ಸೇವೆ ಸಲ್ಲಿಸುವುದು: ವಿಭಾಗವು ಆರೋಗ್ಯ ಶಿಬಿರಗಳು ಮತ್ತು ಇತರ ದತ್ತಿ ಕಾರ್ಯಕ್ರಮಗಳ ಮೂಲಕ ಉಚಿತ ಹೋಮಿಯೋಪತಿ ಔಷಧಿಗಳನ್ನು ನೀಡುವ ಮೂಲಕ ರೋಗಿಗಳ ಅಗತ್ಯತೆಗಳನ್ನು ಈಡೇರಿಸುತ್ತದೆ ಹಾಗೂ ಸಂಸ್ಥಾಪಕರ ಸಹಾನುಭೂತಿಯ ಆರೈಕೆಯ ಧ್ಯೇಯವನ್ನು ಸಾಕಾರಗೊಳಿಸುತ್ತದೆ.
  4. ಹೋಮಿಯೋಪತಿ ಮತ್ತು ಆರೋಗ್ಯ ಸಂಶೋಧನೆಗೆ ಉತ್ತೇಜನ: ಶಿಕ್ಷಣ, ಸಂಶೋಧನೆ ಮತ್ತು ಅರ್ಹರಿಗೆ ತಲುಪಿಸುವ ಮೂಲಕ ವಿಭಾಗವು ಹೋಮಿಯೋಪತಿಯ ತಿಳುವಳಿಕೆ ಮತ್ತು ಚಿಕಿತ್ಸಾ ಸೌಲಭ್ಯವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಹಾಗೂ ತನ್ಮೂಲಕ ಆರೋಗ್ಯ ಸೇವೆಯ ವಿಶಾಲ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ.
  5. ವೈವಿಧ್ಯಮಯ ಉತ್ಪನ್ನ ಕೊಡುಗೆಗಳು: ವ್ಯಾಪಕ ಶ್ರೇಣಿಯ ಉತ್ಪನ್ನಗಳೊಂದಿಗೆ-ಮದರ್ ಟಿಂಕ್ಚರ್‌ಗಳು, ಡೈಲ್ಯೂಷನ್‌ಗಳು, ಬಯೋಕೆಮಿಕ್ ಸಂಯೋಜನೆಗಳು, ಮಾತ್ರೆಗಳು, ತೈಲಗಳು ಇತ್ಯಾದಿಯಾಗಿ ವಿಭಾಗವು ವಿವಿಧ ಆರೋಗ್ಯ ಅಗತ್ಯಗಳನ್ನು ನಿಖರ ಮತ್ತು ಗುಣಮಟ್ಟದೊಂದಿಗೆ ಪೂರೈಸುತ್ತದೆ.
    ಆಚರಣೆಯ ಮುಖ್ಯಾಂಶಗಳು
    ವಿಂಶತಿ ಆಚರಣೆಯ ಅಂಗವಾಗಿ ದೇರಳಕಟ್ಟೆಯಲ್ಲಿ ವಿಭಾಗದ 20 ವರ್ಷಗಳ ಪಯಣದ ಹಿನ್ನೋಟ ವಿವರಣೆ, ಗಣ್ಯ ಅತಿಥಿಗಳಿಂದ ಭಾಷಣಗಳು ಹಾಗೂ ವಿಭಾಗದ ಸಾಧನೆಗಳನ್ನು ಪ್ರಚುರ ಪಡಿಸುವ ಮತ್ತು ಭವಿಷ್ಯದ ಯೋಜನೆಗಳ ಪ್ರದರ್ಶನ ಸೇರಿದಂತೆ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸ್ಮರಣೆ ಸಂಚಿಕೆಯೊಂದನ್ನು ಪ್ರಕಟಿಸಲಾಗುತ್ತಿದ್ದು, ಅದರಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗ ರೂಪಿಸಿದ ಮೈಲಿಗಲ್ಲುಗಳು, ಬೆಳೆದು ಬಂದ ಇತಿಹಾಸ ಮತ್ತು ಈ ವಿಭಾಗವನ್ನು ಕಟ್ಟಿ ಬೆಳೆಸಿದ ವ್ಯಕ್ತಿಗಳ ವಿವರಗಳನ್ನು ದಾಖಲಿಸಲಾಗುತ್ತದೆ.
    ವಿಂಶತಿ ಜುಬಿಲಿಯು ಕೇವಲ ಇತಿಹಾಸದ ಆಚರಣೆಯಲ್ಲ, ಬದಲಾಗಿ ಅದು ಎಲ್ಲರಿಗೂ ಚಿಕಿತ್ಸೆ, ಸೌಕರ್ಯ ಮತ್ತು ಉತ್ತಮ-ಗುಣಮಟ್ಟದ ಹೋಮಿಯೋಪತಿ ಆರೈಕೆಯನ್ನು ನೀಡುವ ತನ್ನ ಬದ್ಧತೆಯನ್ನು ಮುಂದುವರಿಸುವ ಭರವಸೆಯ ಭವಿಷ್ಯದ ಆಚರಣೆಯಾಗಿದೆ.
    ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗದ ಬಗ್ಗೆ:
    1880 ರಲ್ಲಿ ಫಾದರ್ ಅಗಸ್ಟಸ್‌ ಮುಲ್ಲರ್, ಎಸ್.ಜೆ. ಅವರು ಸ್ಥಾಪಿಸಿದ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗವು ಹೋಮಿಯೋಪಥಿಕ್ ಔಷಧಿಗಳ ತಯಾರಿಕೆಯಲ್ಲಿ 144 ವರ್ಷಗಳ ಪರಂಪರೆಯನ್ನು ಹೊಂದಿದೆ. ಭಾರತದಾದ್ಯಂತ ಮತ್ತು ಜಾಗತಿಕವಾಗಿ ತನ್ನ ವಿಶ್ವಾಸಾರ್ಹ, ಉತ್ತಮ-ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. “ಹೀಲ್ ಮತ್ತು ಕಂಫರ್ಟ್” ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅರ್ಪಣಾ ಮನೋಭಾವ ಮತ್ತು ಸಮಗ್ರತೆಯೊಂದಿಗೆ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತದೆ. ದೇರಳಕಟ್ಟೆಯಲ್ಲಿರುವ ಅತ್ಯಾಧುನಿಕ ಸೌಲಭ್ಯಗಳ ವಿಭಾಗವು ಸಾಂಪ್ರದಾಯಿಕ ಹೋಮಿಯೋಪತಿಯ ಆಧುನಿಕ ವಿಧಾನವನ್ನು ಪ್ರತಿನಿಧಿಸುತ್ತಾ ವಿಜ್ಞಾನದ ಸಂಯೋಜನೆಯೊಂದಿಗೆ ತನ್ನ ಗುರಿಗಳನ್ನು ಸಾಧಿಸಲು ಬದ್ಧವಾಗಿದೆ.

Father Muller Homoeopathic Pharmaceutical Division Celebrates 20th Anniversary at Deralakatte Campus
Father Muller Homoeopathic Pharmaceutical Division, renowned for its commitment to high-quality, genuine, and affordable homoeopathic medicines, proudly celebrates its 20th anniversary of it’s relocation to Deralakatte campus. This milestone, also known as the Vicennial Jubilee, marks two decades of dedicated service in providing pure and effective homoeopathic solutions to the public.

Significance of the Event
The Vicennial Jubilee commemorates the establishment of Father Muller Homoeopathic Pharmaceutical Division at its state-of-the-art facility in Deralakatte in 2004. This event not only honors the legacy of Fr Augustus Muller, S.J., who founded the division in 1880, but also recognizes the unwavering commitment of the organization to “Heal and Comfort” people through trusted homoeopathic care.

Over the past 20 years, the Deralakatte campus has been a cornerstone for high-standard homoeopathic production, benefiting patients across India and beyond. This anniversary celebration is an opportunity to reflect on the division’s journey, acknowledge the achievements, and set new goals to continue its service to humanity.

Key Objectives of the Division
Father Muller Homoeopathic Pharmaceutical Division is driven by a clear set of objectives that reflect its commitment to community health and the advancement of homoeopathy:

  1. Manufacturing Pure, Quality Medicines: The division emphasizes the production of genuine and effective homoeopathic medicines, ensuring high standards through rigorous quality control and compliance with HPI standards.
  2. Affordability and Accessibility: A core objective is to make quality homoeopathic medicines available to all at reasonable rates, helping alleviate the burden on the suffering and ensuring that healthcare remains within reach for everyone.
  3. Serving the Sick and Needy: The division actively supports the needs of the sick by offering free homoeopathic medicines during health camps and other charitable events, embodying its founder’s mission of compassionate care.
  4. Promoting Homoeopathy and Health Research: Through education, research, and outreach, the division aims to expand the understanding and practice of homoeopathy, contributing to the broader field of healthcare.
  5. Diverse Product Offerings: With a wide range of products—including Mother Tinctures, Dilutions, Biochemic Combinations, Pills, Oils, and more—the division meets varied healthcare needs with precision and quality.

Celebration Highlights
The event will feature a series of programs, including a retrospective on the division’s 20-year journey at Deralakatte, speeches from distinguished guests, and a showcase of the division’s achievements and future plans. A special magazine has also been published to commemorate this occasion, capturing the milestones, stories, and people that have shaped Father Muller Homoeopathic Pharmaceutical Division over the years.

The Vicennial Jubilee is a celebration not just of history but of a promising future, where the division will continue its commitment to bringing healing, comfort, and high-quality homoeopathic care to all.

About Father Muller Homoeopathic Pharmaceutical Division
Established in 1880 by Fr. Augustus Muller, S.J., Father Muller Homoeopathic Pharmaceutical Division has a legacy of 144 years in the manufacture of homoeopathic medicines. Known across India and globally for its reliable, high-quality products, the division operates with the mission of “Heal and Comfort,” serving communities with dedication and integrity. Its state-of-the-art facility at Deralakatte represents a modern approach to traditional homoeopathy, blending science with compassionate care to achieve its goals.