ಶ್ರೀನಿವಾಸಪುರ : ಜೀವನದ ಪ್ರತಿ ಹಂತದಲ್ಲೂ ಟಾಕ್, ವಾಕ್,ವರ್ಕ್ ಅಭ್ಯಾಸಮಾಡಿಕೊಳ್ಳಿ, ಆಗ ಮಾತ್ರ ಕ್ರಿಯಾಶೀಲ ಜೀವನ ಸಾಧ್ಯ ಎಂದು ಖ್ಯಾತ ಮನೋ ವೈದ್ಯ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ.ಸಿ.ಆರ್ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ಪ್ರಶಸ್ತಿ ಪುರಸ್ಕೃತ ರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಜ್ಞಾನ ಮತ್ತು ವಿಜ್ಞಾನ ಯಾರ ಆಸ್ತಿಯೂ ಅಲ್ಲ. ವಿಜ್ಞಾನ ಯುಗದಲ್ಲಿ ಕಲಿಕೆ ನಮ್ಮ ಮೊದಲ ಆದ್ಯತೆ ಆಗಬೇಕು, ಕಲಿಯುವಾಗ ವಿದ್ಯಾರ್ಥಿ ಪ್ರೀತಿಯಲ್ಲಿ ಪ್ರಶ್ನೆ – ಉತ್ತರ ಮತ್ತು ಕಲಿಕೆ ನಮ್ಮ ಆದರ್ಶ, ಜೀವನದ ಪ್ರಮುಖ ಅಂಶಗಳಾಗುತ್ತವೆ ಎಂದರು . ಕರ್ನಾಟಕ ಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಗೋಪಿನಾಥ್ ಮಾತನಾಡಿ ವಿದ್ಯಾರ್ಥಿಗಳು ಸದಾ ಪ್ರಶ್ನಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆ ಉತ್ತರ ನಡುವಿನ ವೈಜ್ಞಾನಿಕ ಮನೋಭಾವ ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ರೂಪು ಗೊಳಿಸುತ್ತದೆ ಎಂದರು.
ಕರ್ನಾಟಕ ಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ವಿಜ್ಞಾನ ಕ್ಷೇತ್ರದಲ್ಲಿ ಡಾಕ್ಟರ್ ಚಂದ್ರಶೇಖರ್ ರವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ವಿಜ್ಞಾನದ ಹೆಮ್ಮೆಯ ಸಂಗತಿ ಎಂದರು.
ವಿಜ್ಞಾನ ಸಮಿತಿಯ ಮುಖಂಡರುಗಳಾದ ಇ ಬಸವರಾಜ್, ಮಂಜುನಾಥ್ ,ವೆಂಕಟರಮಣನಾಯಕ್, ಶಫೀರ್ ಪಾμÁ, ಶಂಕ್ರೇಗೌಡ ಮುನಿವೆಂಕಟಪ್ಪ ,ಬಂಗವಾದಿ ನಾಗರಾಜ್, ಮಹದೇವಪ್ಪ ಮತ್ತು ಮತ್ತಿತರರು ಉಪಸ್ಥಿತರಿದ್ದರು.